ಕೆಎಸ್ಆರ್ ಟಿಸಿ ಬಸ್ ನಲ್ಲಿ ಆಕಸ್ಮಿಕ ಬೆಂಕಿ: ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರು

| Published : May 15 2024, 01:38 AM IST

ಕೆಎಸ್ಆರ್ ಟಿಸಿ ಬಸ್ ನಲ್ಲಿ ಆಕಸ್ಮಿಕ ಬೆಂಕಿ: ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರು
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಶಿವಮೊಗ್ಗದಿಂದ ಮೈಸೂರಿಗೆ ಹೋಗುತ್ತಿದ್ದ ಕೆಎಸ್ಆರ್ ಟಿಸಿ ಐರಾವತ ಬಸ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಕೆಲವೇ ಕ್ಷಣದಲ್ಲಿ ಬಸ್ಸಿನ ಚಾಲಕ ಎಚ್ಚೆತ್ತು ಬಸ್ಸನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿ ಕರ್ತವ್ಯ ಮತ್ತು ಸಮಯ ಪ್ರಜ್ಞೆ ಮೆರೆದು ಭಾರಿ ಅನಾಹುತ ತಪ್ಪಿಸಿದ ಘಟನೆ ತರೀಕೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿ 206ನಲ್ಲಿ ಸೋಮವಾರ ಮಧ್ಯ ರಾತ್ರಿ 1.30ರಲ್ಲಿ ಸಂಭವಿಸಿದೆ.

ಕರ್ತವ್ಯ ಪ್ರಜ್ಞೆ ಮೆರೆದ ಕಂಡಕ್ಟರ್ ಕಂ ಚಾಲಕ ಸುಬ್ರಮಣಿ

ಕನ್ನಡಪ್ರಭ ವಾರ್ತೆ, ತರೀಕೆರೆ

ಶಿವಮೊಗ್ಗದಿಂದ ಮೈಸೂರಿಗೆ ಹೋಗುತ್ತಿದ್ದ ಕೆಎಸ್ಆರ್ ಟಿಸಿ ಐರಾವತ ಬಸ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಕೆಲವೇ ಕ್ಷಣದಲ್ಲಿ ಬಸ್ಸಿನ ಚಾಲಕ ಎಚ್ಚೆತ್ತು ಬಸ್ಸನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿ ಕರ್ತವ್ಯ ಮತ್ತು ಸಮಯ ಪ್ರಜ್ಞೆ ಮೆರೆದು ಭಾರಿ ಅನಾಹುತ ತಪ್ಪಿಸಿದ ಘಟನೆ ತರೀಕೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿ 206ನಲ್ಲಿ ಸೋಮವಾರ ಮಧ್ಯ ರಾತ್ರಿ 1.30ರಲ್ಲಿ ಸಂಭವಿಸಿದೆ.ಶಿವಮೊಗ್ಗ ಡಿಪೋಗೆ ಸಂಬಂಧಿಸಿದ ಕೆಎಸ್ಆರ್ ಟಿಸಿ ಐರಾವತ ಬಸ್ ಶಿವಮೊಗ್ಗದಿಂದ ಮೈಸೂರಿಗೆ ಸೋಮವಾರ ಮಧ್ಯರಾತ್ರಿ ಸುಮಾರು 12.30ಕ್ಕೆ ಮೈಸೂರಿನತ್ತ ಹೊರಟಿದ್ದು ಬಸ್ ನಲ್ಲಿ 39 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.ತರೀಕೆರೆ ಸಮೀಪ ಅಜ್ಜಂಪುರ ಕ್ರಾಸ್ ಬಳಿ ಕೆಎಸ್ಆರ್ ಟಿಸಿ ಐರಾವತ ಬಸ್ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ಬಸ್ ಬ್ಯಾಕ್ ಇಂಜಿನ್ ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಪಾಯದ ಎಚ್ಚರಿಕೆ ಗಂಟೆ ಬಾರಿಸತೊಡಗಿದ್ದನ್ನು ಗಮನಿಸಿದ ಚಾಲಕ ಸುಬ್ರಮಣಿ ಕೂಡಲೇ ಬಸ್ಸನ್ನು ರಸ್ತೆ ಪಕ್ಕಕ್ಕೆ ತಂದು ನಿಲ್ಲಿಸಿ ಬಸ್ ನಲ್ಲಿದ್ದ ಎಲ್ಲ 39 ಪ್ರಯಾಣಿಕ ರನ್ನುಬಸ್ಸಿನಿಂದ ಸುರಕ್ಷಿತ ಸ್ಥಳಕ್ಕೆ ಇಳಿಸಿದರು.ಸುದ್ದಿ ತಿಳಿದ ಕೂಡಲೇ ತರೀಕೆರೆ ಅಗ್ನಿಶಾಮಕದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಿಯಂತ್ರಿಸಿದೆ. ಮಧ್ಯರಾತ್ರಿ ಪ್ರಯಾಣಿ ಕರೆಲ್ಲರೂ ನಿದ್ರೆಯಲ್ಲಿದ್ದರು, ಬಸ್ಸಿನಲ್ಲಿ ಆಕಸ್ಮಿಕ ಬೆಂಕಿ ಸುಳಿವು ಸಿಕ್ಕಕೂಡಲೇ ಎಚ್ಚೆತ್ತು ಪ್ರಯಾಣಿಕರನ್ನು ಸುರಕ್ಷಿತವಾಗಿ ಆಪಾಯದಿಂದ ಕಾಪಾಡಿದ ಕಂಡಕ್ಟರ್ ಕಂ ಚಾಲಕ ಸುಬ್ರಮಣಿ ಅವರ ಸಮಯಪ್ರಜ್ಞೆ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14ಕೆಟಿಆರ್.ಕೆ.4ಃ ಅಕಸ್ಮಿಕ ಬೆಂಕಿಗಾಹುತಿ ಕೆ.ಎಸ್.ಆರ್.ಟಿ.ಸಿ.ಬಸ್.