ಸಾರಾಂಶ
ಕಿರುಗಾವಲು ಹೋಬಳಿಯ ಹುಲ್ಲೇಗಾಲ ಗ್ರಾಮದ ರೈತರಾದ ಚೈತ್ರಾ ನಂದೀಶ್ ಕಳೆದ ಏಳೆಂಟು ತಿಂಗಳಿಂದ ತೀವ್ರ ಬರಗಾಲದ ನಡುವೆಯೂ ಬೋರ್ ವೆಲ್ ನೀರಿನಿಂದ ಕಬ್ಬು ಬೆಳೆದಿದ್ದರು. ಇನ್ನೂ ಕೆಲವೇ ತಿಂಗಳಲ್ಲಿ ಕಬ್ಬು ಕಟಾವು ಮಾಡಬೇಕಿತ್ತು. ಭಾನುವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಸುಮಾರು 2 ಎಕರೆ ಕಬ್ಬು ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ ಬಿದ್ದು ಬೆಳೆ ಸಂಪೂರ್ಣ ಸುಟ್ಟು ಹೋಗಿರುವ ಘಟನೆ ತಾಲೂಕಿನ ಕಿರುಗಾವಲು ಹೋಬಳಿಯ ಹುಲ್ಲೇಗಾಲ ಗ್ರಾಮದಲ್ಲಿ ಭಾನುವಾರ ನಡೆದಿದೆ. ಗ್ರಾಮದ ರೈತರಾದ ಚೈತ್ರಾ ನಂದೀಶ್ ಕಳೆದ ಏಳೆಂಟು ತಿಂಗಳಿಂದ ತೀವ್ರ ಬರಗಾಲದ ನಡುವೆಯೂ ಬೋರ್ ವೆಲ್ ನೀರಿನಿಂದ ಕಬ್ಬು ಬೆಳೆದಿದ್ದರು. ಇನ್ನೂ ಕೆಲವೇ ತಿಂಗಳಲ್ಲಿ ಕಬ್ಬು ಕಟಾವು ಮಾಡಬೇಕಿತ್ತು. ಭಾನುವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಸುಮಾರು 2 ಎಕರೆ ಕಬ್ಬು ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.ಬರಗಾಲದ ನಡುವೆಯೂ ಕಷ್ಟಪಟ್ಟು ಬೆಳೆದ ಕಬ್ಬು ಬೆಂಕಿಗೆ ನಾಶವಾಗಿದ್ದು. ಇದ್ದರಿಂದ ಎರಡು ಲಕ್ಷಕ್ಕೂ ಹೆಚ್ಚು ಹಣ ನಷ್ಟವಾಗಿದೆ. ಹಾಗಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಚೈತ್ರಾ ನಂದೀಶ್ ಒತ್ತಾಯಿಸಿದರು.
ಬಿರುಗಾಳಿ ಮಳೆಗೆ ಬೆಳೆ ನಾಶ ಅಧಿಕಾರಿಗಳಿಂದ ಪರಿಶೀಲನೆಭಾರತೀನಗರ:ಕೊಕ್ಕರೆ ಬೆಳ್ಳೂರಿನಲ್ಲೂ ಕಳೆದ ಶುಕ್ರವಾರ ಬಿಸಿದ ಬಿರುಗಾಳಿ ಸಹಿತ ಮಳೆಗೆ ಸಿಲುಕಿದ ವಿಳ್ಯೆದೆಲೆ ಮತ್ತು ಬಾಳೆ ತೋಟಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ವೀಳ್ಯೆದೆಲೆ ತೋಟದ ರೇಣುಕಮ್ಮಕೆಂಪಯ್ಯ ಮತ್ತು ಬಾಳೆ ತೋಟದ ಗೌರಮ್ಮ ಸ್ಥಳಕ್ಕೆ ಭೇಟಿನೀಡಿದ ತಹಸೀಲ್ದಾರ್ ಸೋಮಶೇಖರ್ ಮತ್ತು ತೋಟಗಾರಿಕೆ ಇಲಾಖೆ ಸಹಾಯಕಿ ನಿರ್ದೇಶಕಿ ರೇಖಾ ಅವರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು.ಅಲ್ಲದೇ ಬಿರುಗಾಳಿ ಮಳೆಗೆ ಹಳ್ಳಿಕೆರೆ ಗ್ರಾಮದಲ್ಲಿ ರೈತ ಬೋರಯ್ಯ ತಮ್ಮ 2 ಎಕರೆಯಲ್ಲಿ ಬಾಳೆ ಮತ್ತು ಪರಂಗಿ ಬೆಳೆ ಬೆಳೆದಿದ್ದರು. ಬೆಳೆ ಸಂಪೂರ್ಣ ನಾಶಗೊಂಡು ಲಕ್ಷಾಂತರ ರು ನಷ್ಟ ಉಂಟಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳಕ್ಕೆ ಭೇಟಿನೀಡಿದ ತಹಸೀಲ್ದಾರ್ ಸೋಮಶೇಖರ್ ಅವರನ್ನು ಆಗ್ರಹಿಸಿದರು.