ಸಾರಾಂಶ
ದಾಬಸ್‌ಪೇಟೆ: ಸೋಂಪುರ ಹೋಬಳಿಯ ಕೆರೆಗತ್ತಿಗನೂರುಪಾಳ್ಯದ ಬೈಲಪ್ಪ ತಮ್ಮ ಜಮೀನನಲ್ಲಿ ಒಕ್ಕಣೆ ಮಾಡಿದ ರಾಗಿ ಹುಲ್ಲನ್ನು ತಂದು ಬಣವೆಗೆ ಹಾಕಿದ್ದರು.
ದಾಬಸ್‌ಪೇಟೆ: ಸೋಂಪುರ ಹೋಬಳಿಯ ಕೆರೆಗತ್ತಿಗನೂರುಪಾಳ್ಯದ ಬೈಲಪ್ಪ ತಮ್ಮ ಜಮೀನನಲ್ಲಿ ಒಕ್ಕಣೆ ಮಾಡಿದ ರಾಗಿ ಹುಲ್ಲನ್ನು ತಂದು ಬಣವೆಗೆ ಹಾಕಿದ್ದರು. ಅಕ್ಕಪಕ್ಕದ ಜಮೀನಿನ ರೈತನೊಬ್ಬ ಒಣ ಹುಲ್ಲಿಗೆ ಬೆಂಕಿ ಹಚ್ಚಿದ್ದು, ಅದು ಗಾಳಿಗೆ ಹರಡಿಕೊಂಡು ಬಂದು ಬೈಲಪ್ಪರ ಬಣವೆಗೆ ತಗುಲಿ ಸುಮಾರು 50 ಸಾವಿರ ರು. ಮೌಲ್ಯದ ಹುಲ್ಲು ಬೆಂಕಿಗೆ ಆಹುತಿಯಾಗಿದೆ.
ನಮ್ಮ ಜಮೀನಿನಲ್ಲಿ ಕಷ್ಟಪಟ್ಟು ರಾಗಿ ಬೆಳೆದು ಮನೆಯಲ್ಲಿರುವ ಜಾನುವಾರುಗಳಿಗೆ ಹುಲ್ಲಿನ ಬಣವೆ ಹಾಕಿದ್ದು ಮನೆಯ ಪಕ್ಕಕ್ಕೇ ತೆಗೆದುಕೊಂಡು ಹೋಗಲು ತಯಾರಿದ್ದೇ ಅಷ್ಟರಲ್ಲಿ ಬೆಂಕಿ ತಗುಲಿದ್ದು ದಿಕ್ಕು ತೋಚದಂತಾಗಿದೆ ಎಂದು ರೈತ ಬೈಲಪ್ಪ ತಮ್ಮ ಅಳಲು ತೋಡಿಕೊಂಡಿದ್ದಾರೆ.