ಲೈಂಗಿಕ ದೌರ್ಜನ್ಯ: ಆರೋಪಿ ಅಮ್ಜದ್ ಮೆಡಿಕಲ್‌ ಶಾಪ್, ಮನೆ ಮಹಜರ್

| Published : Feb 03 2025, 12:30 AM IST

ಸಾರಾಂಶ

ಪಟ್ಟಣದ ಮೇಲಿನ ಬಸ್ ನಿಲ್ದಾಣದಲ್ಲಿ ಅಮರ್ ಮೆಡಿಕಲ್ ಹೆಸರಿನ ಔಷಧಿ ಅಂಗಡಿ ಇಟ್ಟುಕೊಂಡಿದ್ದ ಅಮ್ಜದ್ ಅಪ್ರಾಪ್ತ ಹೆಣ್ಣುಮಕ್ಕಳು, ಮಹಿಳೆಯರೊಂದಿಗೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿಯಾಗಿದ್ದು, ಭಾನುವಾರ ಬೆಳಗ್ಗೆ ಆರೋಪಿಯನ್ನು ದಾವಣಗೆರೆ ಪೊಲೀಸರು ಚನ್ನಗಿರಿಗೆ ಕರೆತಂದು, ಆತನ ಮೆಡಿಕಲ್‌ ಶಾಪ್‌ ಮತ್ತು ವಾಸದ ಮನೆ ಶೋಧಿಸಿ, ಮಹಜರ್‌ ನಡೆಸಿದ್ದಾರೆ.

- ಭಾನುವಾರ ಬೆಳಗ್ಗೆ ಆರೋಪಿಯನ್ನು ಚನ್ನಗಿರಿಗೆ ಕರೆತಂದ ದಾವಣಗೆರೆ ಪೊಲೀಸರು - - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ಮೇಲಿನ ಬಸ್ ನಿಲ್ದಾಣದಲ್ಲಿ ಅಮರ್ ಮೆಡಿಕಲ್ ಹೆಸರಿನ ಔಷಧಿ ಅಂಗಡಿ ಇಟ್ಟುಕೊಂಡಿದ್ದ ಅಮ್ಜದ್ ಅಪ್ರಾಪ್ತ ಹೆಣ್ಣುಮಕ್ಕಳು, ಮಹಿಳೆಯರೊಂದಿಗೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿಯಾಗಿದ್ದು, ಭಾನುವಾರ ಬೆಳಗ್ಗೆ ಆರೋಪಿಯನ್ನು ದಾವಣಗೆರೆ ಪೊಲೀಸರು ಚನ್ನಗಿರಿಗೆ ಕರೆತಂದು, ಆತನ ಮೆಡಿಕಲ್‌ ಶಾಪ್‌ ಮತ್ತು ವಾಸದ ಮನೆ ಶೋಧಿಸಿ, ಮಹಜರ್‌ ನಡೆಸಿದರು.

ಅಪ್ರಾಪ್ತೆಯರು, ಮಹಿಳೆಯರ ಅಶ್ಲೀಲ ವಿಡಿಯೋ ಮಾಡಿ ಬೆದರಿಸುತ್ತಿದ್ದ ಆರೋಪದ ಮೇರೆಗೆ ಅಮ್ಜದ್‌ನನ್ನು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಭಾನುವಾರ ಬೆಳಗ್ಗೆ ದಾವಣಗೆರೆಯ ಸೈಬರ್ ಸೆಲ್ ಡಿವೈಎಸ್‌ಪಿ ಪದ್ಮಶ್ರೀ ಗುಂಜಿಕರ್ ನೇತೃತ್ವದ ತಂಡ ಮಹಜರ್ ನಡೆಸಿತು.

ಈ ವಿಚಾರಣೆ ಸಂದರ್ಭ ಆರೋಪಿಯ ಮೆಡಿಕಲ್ ಶಾಪ್‌ನಲ್ಲಿ ಎರಡು ಮೊಬೈಲ್‌ಗಳು ದೊರೆತಿವೆ. ಬೇರೆ ಯಾವುದೇ ವಸ್ತುಗಳು ದೊರೆತಿಲ್ಲ. ಈ ಪ್ರಕರಣವನ್ನು ಫೋಕ್ಸೋ ಕಾಯ್ದೆಯಡಿ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಡಿವೈಎಸ್‌ಪಿ ಪದ್ಮಶ್ರೀ ಗುಂಜಿಕರ್ ತಿಳಿಸಿದ್ದಾರೆ.

ಆರೋಪಿಯನ್ನು ವಿಚಾರಣೆಗೆ ಕರೆತರುತ್ತಾರೆ ಎಂಬ ಮಾಹಿತಿ ತಿಳಿದು ಸಾರ್ವಜನಿಕರು ಸ್ಥಳಕ್ಕೆ ಜಮಾಯಿಸಿದ್ದರು. ಆರೋಪಿಗೆ ಹಿಡಿಶಾಪ ಹಾಕಿದರು.

- - - -2ಕೆಸಿಎನ್ಜಿ1:

ಆರೋಪಿ ಅಮ್ಜದ್‌ನನ್ನು ಭಾನುವಾರ ಬೆಳಗ್ಗೆ ಚನ್ನಗಿರಿಗೆ ಕರೆತಂದ ದಾವಣಗೆರೆ ಪೊಲೀಸ್‌ ಅಧಿಕಾರಿಗಳು ಮೆಡಿಕಲ್‌ ಶಾಪ್‌, ಮನೆ ಮಹಜರ್‌ ನಡೆಸಿದರು.