ಸಾರಾಂಶ
ತಾಲೂಕಿನ ಜ್ಯೋತಿಗೌಡನಪುರದಲ್ಲಿ ಅಂಬೇಡ್ಕರ್ ಭಾವಚಿತ್ರದ ಫ್ಲೆಕ್ಸ್, ಬುದ್ಧನ ವಿಗ್ರಹ ವಿರೂಪಗೊಳಿಸಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಹೇಳಿದರು.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ತಾಲೂಕಿನ ಜ್ಯೋತಿಗೌಡನಪುರದಲ್ಲಿ ಅಂಬೇಡ್ಕರ್ ಭಾವಚಿತ್ರದ ಫ್ಲೆಕ್ಸ್, ಬುದ್ಧನ ವಿಗ್ರಹ ವಿರೂಪಗೊಳಿಸಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಹೇಳಿದರು.ನಗರದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ (೩೧) ಬಂಧಿತ ಆರೋಪಿ, ೨ ತಿಂಗಳ ಹಿಂದೆ ಈತ ಗ್ರಾಮದ ದಿನಸಿ ಅಂಗಡಿಯಲ್ಲಿ ಪದಾರ್ಥ ಖರೀದಿಸುವಾಗ ಅದೇ ಗ್ರಾಮದ ಪರಿಶಿಷ್ಟ ಜನಾಂಗದ ಮಹಿಳೆ ಮೇಲೆ ಮದ್ಯದ ಅಮಲಿನಲ್ಲಿ ಜಗಳ ತೆಗೆದಿದ್ದ, ಆ ಸಮಯದಲ್ಲಿ ಆರೋಪಿ ಮಂಜುನಾಥ್ ಮಹಿಳೆಗೆ ಚಪ್ಪಲಿಯಲ್ಲಿ ಹೊಡೆದಿದ್ದನು. ಘಟನೆಗೆ ಸಂಬಂಧಿಸಿದಂತೆ ಗ್ರಾಮದ ಯಜಮಾನರು ಪಂಚಾಯಿತಿ ಸೇರಿ ಆತನಿಗೆ ೬೦ ಸಾವಿರ ರು.ದಂಡ ವಿಧಿಸಿದ್ದರು.ಆರೋಪಿಯ ಮನೆಯವರು ಒಪ್ಪಿಕೊಂಡು, ಮನೆಯಲ್ಲಿದ್ದ ಚಿನ್ನವನ್ನು ಗಿರವಿ ಇಟ್ಟು, ₹೩೦ ಸಾವಿರ ದಂಡ ಪಾವತಿಸಿದ್ದ, ಉಳಿದ ಮೂವತ್ತು ಸಾವಿರ ರು. ತನ್ನ ಬಳಿಇದ್ದ ಮೋಟಾರ್ ಬೈಕ್ ಮಾರಿ ದಂಡ ಪಾವತಿಸಿದ್ದನು. ಇದೇ ವೈಷಮ್ಯ ಇಟ್ಟುಕೊಂಡು, ಅ.೨೩ರಂದು ಅಂಬೇಡ್ಕರ್ ಭಾವಚಿತ್ರದ ಫ್ಲೆಕ್ಸ್ ಬುದ್ಧನ ವಿಗ್ರಹ ವಿರೂಪ ಮಾಡಿದ್ದಾಗಿ ಖಚಿತ ಸಾಕ್ಷ್ಯಾಧಾರಗಳ ಆಧಾರದ ಮೇಲೆ ದೃಢಪಟ್ಟಿದೆ.
ಚಾಮರಾಜನಗರ ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ೨೦೨೪ ಅ.೨೧ ರಂದು ಬ್ಯಾರಿಕೇಡ್ ಒಡೆದು ಹಾಕಿದ ಪ್ರಕರಣ, ೨೦೧೨ರಲ್ಲಿ ಪೂರ್ವ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಎಸ್ಸಿ, ಎಸ್ಟಿ ಸಮುದಾಯಗಳ ನಡುವೆ ನಡೆದ ಜಗಳದಲ್ಲಿ ಪೋಲಿಸರ ಕರ್ತವ್ಯಕ್ಕೆ ಅಡ್ಡಿಡಿಸಿದ ಪ್ರಕರಣ, ೨೦೧೪ರಲ್ಲಿ ಮಹಿಳೆಯೊಬ್ಬರಿಗೆ ತೊಂದರೆ ಕೊಟ್ಟಿದ್ದು ಸೇರಿದಂತೆ ಮೂರು ಪ್ರಕರಣಗಳು ಈತನ ಮೇಲಿವೆ. ಕೃತ್ಯದ ಹಿಂದೆ ಬೇರೆಯಾರಿದ್ದಾರೆ ಎಂಬುದನ್ನು ತನಿಖೆ ಮೂಲಕ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಎಂದರು.ಚಾಮರಾಜನಗರ ಪೂರ್ವಪೋಲಿಸ್ ಠಾಣೆಯಲ್ಲಿ ಸಾರ್ವಜನಿಕ ಆಸ್ತಿಹಾನಿ ನಿಷೇಧ ಕಾಯ್ದೆ-೧೯೮೪ರಡಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಬಂಧಿಸಲು ಒಟ್ಟು ೭ ವಿಶೇಷ ತನಿಖಾ ತಂಡಗಳನ್ನು ರಚನೆ ಮಾಡಲಾಗಿದ್ದು, ಜ್ಯೋತಿಗೌಡನಪುರ ಸುತ್ತಮುತ್ತ ೮೬ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ೧೮೭೭ ಕಾಲ್‌ಡೀಟೆಲ್, ದಾಖಲೆಗಳು, ೨೪ ಸ್ಥಳಗಳ ಸೆಲ್‌ಐಡಿ, ಟವರ್ ಡಂಪ್ ವಿವರಗಳನ್ನು ವಿಶೇಷ ತನಿಖಾ ತಂಡಗಳ ಪೋಲಿಸರು ಪರಿಶೀಲಿಸಿದ್ದರು. ವೈಜ್ಞಾನಿಕ ವಿಧಾನದಲಿ ತನಿಖೆಯಲ್ಲಿ ಅಳವಡಿಸಿಕೊಂಡಿದ್ದರಿಂದ ಆರೋಪಿಯನ್ನು ಕೇವಲ ೧೧ ದಿನದಲ್ಲಿ ಬಂಧಿಸಲು ಸಾಧ್ಯವಾಯಿತು ಎಂದರು.ದೇವಾಲಯಗಳ ಕಳವು ಮಾಡಲು ಯತ್ನಿಸಿದ್ದ ಕಳ್ಳರನ್ನು ಪತ್ತೆಮಾಡಲು ಈಗಾಗಲೇ ಪೊಲೀಸ್ ತಂಡಗಳನ್ನು ರಚನೆಮಾಡಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಎಎಸ್ಪಿ ಶಶಿಧರ್, ಚಾಮರಾಜನಗರ ಉಪವಿಭಾಗದ ಡಿವೈಎಸ್ಪಿ ಸ್ನೇಹರಾಜ್, ಕೊಳ್ಳೇಗಾಲ ಉಪವಿಭಾಗದಧರ್ಮೇಂದ್ರ ಹಾಜರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))