ಸಾರಾಂಶ
ಬೀದರ್: ಜಿಲ್ಲೆಯಲ್ಲಿ ನಡೆದ ಮನೆ ಕಳುವು ಪ್ರಕರಣವನ್ನು ಭೇದಿಸಿ ಒಬ್ಬ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ 6,37 ಲಕ್ಷ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪ್ರದೀಪ ಗುಂಟಿ ತಿಳಿಸಿದರು.ನಗರದ ಮಾರ್ಕೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಿ ಆತನಿಂದ 2.40 ಲಕ್ಷ ರು ಮೌಲ್ಯದ 30 ಗ್ರಾಂ ಬಂಗಾರದ ಬಿಸ್ಕೀಟ್, 25 ಗ್ರಾಂ ಬಂಗಾರದ ಚಂಪಾಕಲಿ ಕೊರಳಿನ ಸರ, 12 ಗ್ರಾಂ ಬಂಗಾರದ ಲಾಕೆಟ್, 05 ಗ್ರಾಂ. ಬಂಗಾರದ ಬೆರಳಿನ ಸುತ್ತುಂಗುರ, 03 ಗ್ರಾಂ ಬಂಗಾರದ ಪದಕ ಹಾಗೂ ಗುಂಡುಗಳು ಹೀಗೆ 6,37,ಲಕ್ಷ ಮೌಲ್ಯದ ಒಟ್ಟು 7.5 ತೊಲೆ ಬಂಗಾರದ ಆಭರಣಗಳು ಜಪ್ತಿ ಮಾಡಲಾಗಿದೆ.ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪಾಲ್ಗೊಂಡ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಪೊಲೀಸ್ ಅಧೀಕ್ಷಕರು ಪ್ರಶಂಸನೀಯ ವ್ಯಕ್ತಪಡಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಚಂದ್ರಕಾಂತ ಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.--ಚಿತ್ರ 22ಬಿಡಿಆರ್56ಜಿಲ್ಲೆಯಲ್ಲಿ ನಡೆದ ಮನೆ ಕಳುವು ಪ್ರಕರಣ ಭೇದಿಸಿದ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿ ಆತನಿಂದ 6,37 ಲಕ್ಷ ರು. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿರುವುದು.--