ಸಾರಾಂಶ
ಯಾದಗಿರಿ: ಇಲ್ಲಿಗೆ ಸಮೀಪದ ಹೊಸಹಳ್ಳಿಯಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ 25 ವರ್ಷದ ಯುವಕನೊಬ್ಬನ ಅನುಮಾನಾಸ್ಪದ ಶವ ಪತ್ತೆಯಾಗಿದೆ.ಅನೈತಿಕ ಸಂಬಂಧದ ಆರೋಪದ ಹೊರಿಸಿ ಕೆಲವರು ಮರಕ್ಕೆ ಕಟ್ಟಿ ಥಳಿಸಿದ್ದರಿಂದ, ಅವಮಾನ ಸಹಿಸದೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದರೆ, ಮೃತನ ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಹೊಸಹಳ್ಳಿ ಗ್ರಾಮದ ಚಂದ್ರಶೇಖರ್ (25) ಮೃತ ಯುವಕ. ಮಹಿಳೆಯೊಬ್ಬರ ಜೊತೆ ಈತನಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ, ಕೆಲದಿನಗಳ ಹಿಂದೆ ಈತನನ್ನು ಮರಕ್ಕೆ ಹಗ್ಗದಿಂದ ಕಟ್ಟಿ ಕೆಲವರು ಥಳಿಸಿದ್ದಲ್ಲದೆ, ಕುಟುಂಬಸ್ಥರ ಮೇಲೆಯೂ ಹಲ್ಲೆ ನಡೆಸಿದ್ದರು ಎನ್ನಲಾಗುತ್ತಿದೆ.ಈ ಅವಮಾನ ಸಹಿಸದೆ ನೊಂದುಕೊಂಡ ಚಂದ್ರಶೇಖರ್, ಹೆದರಿ ಎಂಟು ಜನರ ಹೆಸರಿರುವ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆನ್ನಲಾಗಿದೆ. ಈ ಘಟನೆಯ ಬಳಿಕ, ಆರೋಪಿ ಕುಟುಂಬದವರು ಪರಾರಿಯಾಗಿದ್ದಾರೆ. ಆದರೆ, ಮಹಿಳೆಯ ಕುಟುಂಬಸ್ಥರು ಚಂದ್ರಶೇಖರನ್ನು ಕೊಲೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ ಅನ್ನೋದು ಚಂದ್ರಶೇಖರ್ ಕುಟುಂಬಸ್ಥರ ಆರೋಪ. ಯಾದಗಿರಿ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.
-------13ವೈಡಿಆರ್14
ಮೃತ ಚಂದ್ರಶೇಖರ್ ಬರೆದಿಟ್ಟಾನ್ನೆನ್ನಲಾದ ಡೆತ್ ನೋಟ್.13ವೈಡಿಆರ್15ಮೃತ ಚಂದ್ರಶೇಖರ್.