ವಿದ್ಯಾರ್ಥಿನಿ ನೇಹಾ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆ ‍ವಿಧಿಸಲಿ: ಬಿ.ಸಿ. ಪಾಟೀಲ ಆಗ್ರಹ

| Published : Apr 21 2024, 02:23 AM IST

ವಿದ್ಯಾರ್ಥಿನಿ ನೇಹಾ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆ ‍ವಿಧಿಸಲಿ: ಬಿ.ಸಿ. ಪಾಟೀಲ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿನಿ ಹತ್ಯೆಯನ್ನು ಖಂಡಿಸುವ ಬದಲು ಅದು ವೈಯಕ್ತಿಕ ಹತ್ಯಯಾಗಿದೆ ಎಂದು ತನಿಖೆಯ ಮುನ್ನವೇ ದಿಕ್ಕು ತಪ್ಪಿಸುವ ಇವರ ಮನಸ್ಥಿತಿ ಬಗ್ಗೆ ರಾಜ್ಯದ ಜನ ಪ್ರಶ್ನಿಸುತ್ತಿದ್ದಾರೆ ಎಂದು ಎಂದು ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿ

ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆಯ ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಮಂತ್ರಿ ಜಿ. ಪರಮೇಶ್ವರ ದಾರಿ ತಪ್ಪಿಸುತ್ತಿದ್ದಾರೆ. ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರದಿಂದ ಮೃತ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಇಲ್ಲದಂತಾಗಿದೆ ಎಂದು ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು.

ನೇಹಾ ಹಿರೇಮಠ ಹತ್ಯೆ ಖಂಡಿಸಿ ಹಾಗೂ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ಪಟ್ಟಣದ ಭಗತ್‌ಸಿಂಗ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೇ ಸಂಪೂರ್ಣ ಹದಗೆಟ್ಟಿದ್ದು, ರಾಜ್ಯದಲ್ಲಿ ಹಾಡಹಗಲೇ ಸಾಲು ಸಾಲು ಕೊಲೆಗಳಾಗುತ್ತಿದ್ದರೂ ಅದನ್ನು ಸಮರ್ಥನೆ ಮಾಡಿಕೊಂಡು ಕೇವಲ ಒಂದು ಕೋಮಿನಿ ವೋಟ್ ಬ್ಯಾಂಕ್‌ಗಾಗಿ ಹಿಂದೂಗಳನ್ನು ತುಚ್ಛವಾಗಿ ಕಾಣುತ್ತಿರುವ ಸರಕಾರದ ನಡೆ ಖಂಡನೀಯ. ತಮ್ಮ ಪಕ್ಷದ ಕಾರ್ಯಕರ್ತನ ಮಗಳ ಹತ್ಯೆಯಲ್ಲೂ ಓಲೈಕೆ ರಾಜಕಾರಣ ಖಂಡನೀಯ. ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಹಿಂದೂಗಳ ಬದುಕು ದುಸ್ತರವಾಗುವುದು ಖಂಡಿತ ಎಂದರು.

ವಯಸ್ಸಿಗೆ ಬಂದ ತಾಯಿ ಮಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕು ಎನ್ನುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ಲವೇ? ಇಂತಹ ಮಾತನ್ನು ಹೆಂಡತಿಗೆ ಹೇಳಿ ನೋಡಲಿ. ಅವರ ಪರಿಸ್ಥಿತಿ ಏನಾಗುತ್ತದೆ? ಕುಕ್ಕರ ಬಾಂಬ್ ಆರೋಪಿ, ಹಾಡು ಹಗಲೇ ಕೊಲೆಗಡುಕ ಮುಸ್ಲಿಂ ಆರೋಪಿಗಳನ್ನು ನನ್ನ ಬ್ರದರ್ ಎಂದು ಎದೆ ತಟ್ಟಿಕೊಳ್ಳುವ ಶಿವಕುಮಾರ ಅವರೇ ಇನ್ನೆಷ್ಟು ದಿನ ಒಂದು ಕೋಮಿನ ತುಷ್ಟೀಕರಣ ಮಾಡಿ ವೋಟ್ ಗಿಟ್ಟಿಸಿಕೋಳ್ಳುತ್ತಿರಿ. ಇನ್ಮುಂದೆ ನಿಮ್ಮ ಈ ಓಲೈಕೆ ರಾಜಕಾರಣ ನಡೆಯುವುದಿಲ್ಲ. ಹಿಂದೂಗಳ ಸಹನೆಯ ಕಟ್ಟೆ ಒಡೆದಿದೆ. ರಾಜ್ಯ ಸರಕಾರದಿಂದ ಮೃತ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಇಲ್ಲದಂತಾಗಿದೆ. ಕಾರಣ ರಾಜ್ಯಪಾಲರನ್ನು ಈ ಮೂಲಕ ಒತ್ತಾಯಿಸಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ನಾಗವಂದ ಮಠದ ಪೀಠಾಧಿಪತಿ ಶಿವಾನಂದ ಶ್ರೀಗಳು ಮಾತನಾಡಿ, ಭಾರತ ದೇಶ ಸರ್ವ ಜನಾಂಗದ ಶಾಂತಿಯ ತೋಟ. ಆದರೆ, ರಾಜ್ಯದಲ್ಲಿ ಪದೇ ಪದೇ ಹಿಂದೂ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಕಾರಣ ಸರಕಾರಗಳು ಪ್ರತಿಷ್ಠೆಗಾಗಿ ರಾಜಕಾರಣ ಮಾಡದೆ ಮಾನವೀಯ ಮೌಲ್ಯಗಳ ಆಧಾರದಲ್ಲಿ ನಡೆದುಕೊಳ್ಳಬೇಕು. ಆರೋಪಿಗೆ ಕಠಿಣ ಶಿಕ್ಷಗೆ ಗುರಿ ಪಡಿಸಿ ಮೃತ ಕುಟುಂಬಕ್ಕೆ ನ್ಯಾಯ ಸಿಗುವಂತಾಗಲಿ ಎಂದು ಶ್ರೀಗಳು ಆಗ್ರಹಿಸಿದರು.ಲಿಂಗರಾಜ ಚಪ್ಪರದಳ್ಳಿ, ದೇವರಾಜ ನಾಗಣ್ಣನವರ, ಶಂಕರಗೌಡ ಚನ್ನಗೌಡ್ರ, ವೀರನಗೌಡ ಮಕರಿ, ಮಾಲತೇಶಗೌಡ ಗಂಗೋಳ, ಮಾಲತೇಶ ಬೆಳಕೇರಿ, ರವಿ ಮುದ್ದಣ್ಣನವರ, ಬಸವರಾಜ ಆಡಿನವರ, ಸುನೀಲ ಸರಶೆಟ್ಟರ, ರವಿ ಹದಡೇರ, ಸುರೇಶ ಬೆಣ್ಣಿ, ಮನೋಜ ಗೊಣೆಪ್ಪನವರ, ಸುಶೀಲ ನಾಡಿಗೇರ, ಪ್ರಶಾಂತ ದ್ಯಾವಕ್ಕಳವರ, ರಾಜು ಬಟ್ಲಕಟ್ಟಿ, ನವೀನ ಮಾದರ, ಹನಮಂತಪ್ಪ ಗಾಜೇರ್, ರೂಪಾ ಅಂಬ್ಲೇರ, ಸರೋಜಾ ಹುರಕಡ್ಲಿ, ದೀಪಾ ವೇರ್ಣೇಕರ್, ಮಾನಸಾ ಮಳಗೊಂಡರ, ಸುಮಾ ರಾಯ್ಕರ, ಸುರೇಖಾ ವೆರ್ಣೇಕರ, ಸುರಭಿ ನಾಡಗೇರ, ಆಶಾ ತೋಟಗೇರ, ಕಾವ್ಯ ಪಾಟೀಲ, ಸವಿತಾ ಮುದ್ದಣ್ಣನವರ ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು ಇದ್ದರು.