ಸಾರಾಂಶ
ವೇದಗಳಿಗೆ ಭಾಷ್ಯ, ಪುರಾಣಗಳಿಗೆ ಅರ್ಥ, ದೇಶದ ನಾಲ್ಕು ದಿಕ್ಕಿನಲ್ಲಿಯೂ ಶಾರದಾ ಪೀಠ, ಮಠಗಳನ್ನು ಸ್ಥಾಪಿಸಿ ಹಿಂದೂ ಧರ್ಮದ ಬೇರು ಗಟ್ಟಿಯಾಗಿಸಿದರು. ಇವರ ಮಾರ್ಗದರ್ಶನವನ್ನು ಎಲ್ಲರೂ ಪರಿಪಾಲಿಸಬೇಕಿದೆ. ತಮ್ಮ 16ನೇ ವಯಸ್ಸಿನಲ್ಲಿಯೇ ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆದರು. ಶಂಕರರು ಚಾಂಡಾಲನನ್ನೂ ಮಹಾಪುರುಷನೆಂದು ಉದ್ಧರಿಸಿ ಕಾಶೀ ವಿಶ್ವನಾಥನದರ್ಶನ ಪಡೆದರು
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಆದಿಶಂಕರಾಚಾರ್ಯರು ಸರ್ವಧರ್ಮ ಸಮುದಾಯವನ್ನು ಸಮಾನತೆಯಿಂದ ಕಂಡು ಹಿಂದೂಧರ್ಮ, ಸನಾತನ ಧರ್ಮದ ಉಳಿವಿಗಾಗಿ ಬದುಕು ಮುಡಿಪಾಗಿಟ್ಟ ಮಹಾನ್ ದೈವಾಂಶ ಸಂಭೂತರು ಎಂದು ವೇ.ಬ್ರ. ಅನಿಲ್ ಶಾಸ್ತ್ರೀ ಹೇಳಿದರು.ಪಟ್ಟಣದ ವಿಪ್ರ ಬಾಂಧವ ಸೇವಾ ಸಮಿತಿ ಹಮ್ಮಿಕೊಂಡಿದ್ದ ಶಂಕರಜಯಂತಿಯಲ್ಲಿ ಉಪನ್ಯಾಸ ನೀಡಿ, ಹಿಂದೂ ಧರ್ಮ ಅವನತಿಯ ಹಾದಿಯಲ್ಲಿದ್ದಾಗ ಧರ್ಮದ ಉಳಿವಿಗಾಗಿ ಶಂಕರರು ಭದ್ರ ಬುನಾದಿಯಾದರು ಎಂದರು.
ಅದ್ವೈತ ಸಿದ್ಧಾಂತದ ಮೂಲಕ ಆತ್ಮ, ಪರಮಾತ್ಮ ಎಲ್ಲವೂ ಒಂದೇ ಎಂದು ಸಾರಿದರು. ಭರತಖಂಡದ ನಾಲ್ಕು ದಿಕ್ಕು, ಪ್ರಾಂತ್ಯಗಳನ್ನು ಕಾಲ್ನಡಿಗೆಯಲ್ಲಿ ಪರ್ಯಟನೆ ಮಾಡಿ ಹಿಂದೂ ಧರ್ಮದ ಜಾಗೃತಿ ಮೂಡಿಸಿದರು. ಧರ್ಮದ ಪುನರ್ ಸ್ಥಾಪನೆಗಾಗಿ ನಾಲ್ಕು ದಿಕ್ಕಿನಲ್ಲಿ ಶಕ್ತಿ ಪೀಠ, ಮಠಗಳನ್ನು ಸ್ಥಾಪಿಸಿದರು. ಅಹಂ ಬ್ರಹ್ಮಾಸ್ಮಿ ಎಂದು ಎಲ್ಲರಲ್ಲೂ ದೇವರನ್ನು ಕಂಡವರು ಎಂದು ಹೇಳಿದರು.ವೇದಗಳಿಗೆ ಭಾಷ್ಯ, ಪುರಾಣಗಳಿಗೆ ಅರ್ಥ, ದೇಶದ ನಾಲ್ಕು ದಿಕ್ಕಿನಲ್ಲಿಯೂ ಶಾರದಾ ಪೀಠ, ಮಠಗಳನ್ನು ಸ್ಥಾಪಿಸಿ ಹಿಂದೂ ಧರ್ಮದ ಬೇರು ಗಟ್ಟಿಯಾಗಿಸಿದರು. ಇವರ ಮಾರ್ಗದರ್ಶನವನ್ನು ಎಲ್ಲರೂ ಪರಿಪಾಲಿಸಬೇಕಿದೆ.
ತಮ್ಮ 16ನೇ ವಯಸ್ಸಿನಲ್ಲಿಯೇ ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆದರು. ಶಂಕರರು ಚಾಂಡಾಲನನ್ನೂ ಮಹಾಪುರುಷನೆಂದು ಉದ್ಧರಿಸಿ ಕಾಶೀ ವಿಶ್ವನಾಥನದರ್ಶನ ಪಡೆದರು. ವಿವಾದಕ್ಕೆ ವಾದ ಮಾಡದೆ ಸತ್ಯಕ್ಕೆ ಚರ್ಚಿಸುವ ಜಗದ್ಗುರು ಶಂಕರರು ಮೊದಲು ಭಿಕ್ಷೆ ಸ್ವೀಕರಿಸಿದ್ದು ಶುದ್ರ ಮಹಿಳೆಯಿಂದ ಎಂಬುದನ್ನು ಮರೆಯಬಾರದು ಎಂದು ನುಡಿದರು.ಶಂಕರರ ಜಯಂತಿ ಅಂಗವಾಗಿ ಪುಷ್ಪಾರ್ಚನೆ, ತುಳಸಿ ಅರ್ಚನೆ, ರುದ್ರಾಭಿಷೇಕ, ಮತ್ತಿತರ ಪೂಜಾ ಕೈಂಕರ್ಯಗಳು ನಡೆದವು.
ಮಹಿಳೆಯರು ಭಜಗೋವಿಂದಂ ಕೀರ್ತನೆ ಹಾಡಿದರು. ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿತ್ತು.ಕೆ.ಬಿ.ವೆಂಕಟೇಶ್, ನರಸಿಂಹ, ಕೆ.ಎಸ್. ಪರಮೇಶ್ವರಯ್ಯ, ಪ್ರಸಾದ್, ಸೂರ್ಯ, ಮೇಘನಾ, ಭಾಗ್ಯಮ್ಮ, ಸೂರ್ಯ, ಕಲಾ, ಗಿರಿಜಮ್ಮ ಉಪಸ್ಥಿತರಿದ್ದರು.