ಸಾರಾಂಶ
ನಗರದ ವಿದ್ಯಾನಗರ ಕಾಲೊನಿಯ ಜೀಜಾಮಾತಾ ಕನ್ಯಾ ಪ್ರೌಢಶಾಲೆಯಲ್ಲಿ ಜೀಜಾಮಾತೆ, ವಿವೇಕಾನಂದ ಜಯಂತಿ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಬೀದರ್
ಯುವ ಜನರು ಇತಿಹಾಸ ಸೃಷ್ಟಿಸುವಂಥ ಸಾಧನೆ ಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಹೇಳಿದರು.ನಗರದ ವಿದ್ಯಾನಗರ ಕಾಲೊನಿಯ ಜೀಜಾಮಾತಾ ಕನ್ಯಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಜೀಜಾಮಾತೆ ಹಾಗೂ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಅವರು ಮಾತನಾಡಿದರು.
ಮಹತ್ವದ ಸಾಧನೆಯ ಕಾರಣಕ್ಕಾಗಿಯೇ ಜೀಜಾಮಾತೆ, ಶಿವಾಜಿ ಮಹಾರಾಜ, ಸ್ವಾಮಿ ವಿವೇಕಾನಂದರು ಆಗಿ ಹೋಗಿ ಶತಮಾನಗಳು ಕಳೆದರೂ ಎಲ್ಲರ ಸ್ಮರಣೆಯಲ್ಲಿ ಇದ್ದಾರೆ. ಶಿವಾಜಿ ಶ್ರೇಷ್ಠ ರಾಜನಾಗಿ ರೂಪುಗೊಳ್ಳಲು ಅವರ ತಾಯಿ ಜೀಜಾಮಾತೆ ಅವರ ಸಂಸ್ಕಾರವೇ ಕಾರಣ ಎಂದು ಹೇಳಿದರು.ಬಾಲ್ಯದಲ್ಲೇ ಮಗನಿಗೆ ವೀರ, ಶೂರ ಮಹಾ ಪುರುಷರ ಕತೆಗಳನ್ನು ಹೇಳುತ್ತಿದ್ದರು. ನೈತಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸಿದ್ದರು ಎಂದು ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಬಿವಿಬಿ ಕಾಲೇಜು ಉಪನ್ಯಾಸಕಿ ಶಿವಲೀಲಾ ಮಠಪತಿ ಅವರು, ಜೀಜಾಮಾತೆ ಮಗನಲ್ಲಿ ರಾಷ್ಟ್ರಪ್ರೇಮ ಬೆಳೆಸಿದ್ದರು. ತಾಯಿಯ ಪ್ರೇರಣೆಯಿಂದಾಗಿಯೇ ಶಿವಾಜಿ ಸ್ವತಂತ್ರ ಹಿಂದೂ ಸಾಮ್ರಾಜ್ಯ ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಹೇಳಿದರು.ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ, ಜಿಲ್ಲಾಧ್ಯಕ್ಷರಾದ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ದೇಶಕ್ಕೆ ಕೊಡುಗೆ ನೀಡಿದವರು ಮಹಾನ್ ವ್ಯಕ್ತಿಗಳಾಗುತ್ತಾರೆ ಎಂದು ತಿಳಿಸಿದರು.
ನಗರಸಭೆ ಸದಸ್ಯೆ ಉಲ್ಲಾಸಿನಿ ವಿಕ್ರಮ ಮುದಾಳೆ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಬಸವರಾಜ ಸ್ವಾಮಿ ಮಾತನಾಡಿದರು. ಮುಖ್ಯಶಿಕ್ಷಕ ಪರಮೇಶ್ವರ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ರೋಶಿನಿ ಮಾಳಗೆ, ವಿವೇಕರಾವ್, ಅರ್ಜುನ ಧುಳೆ, ಆನಂದ ಜಾಧವ್, ಸಂಜಯ ಪಾಟೀಲ್, ನಾಗರತ್ನ ಟಿ, ಅನಿಲಕುಮಾರ ಟೆಕೋಳೆ, ರಾಜಕುಮಾರ ಗಾದಗಿ, ನಂದಿನಿ, ಗಾಯತ್ರಿ, ದೀಪಿಕಾ ಪಿಂಜರೆ, ಶೋಭಾ, ಉಷಾ ಪಾಟೀಲ್, ಕುಮಾರಸ್ವಾಮಿ ಇದ್ದರು. ತಾನಾಜಿ ನಿರಗುಡೆ ನಿರೂಪಿಸಿದರು. ಭೀಮಶಾ ವಂದಿಸಿದರು.