ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ನಗರ ಶಾಸಕ ಹಾಗೂ ಕಾಲೇಜು ಅಬಿವೃದ್ಧಿ ಮಂಡಳಿಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ೨೦೨೪-೨೫ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ, ಸ್ಕೌರ್ಟ್ಸ್ ಮತ್ತು ಗೈಡ್ಸ್, ಇ.ಎಲ್.ಸಿ., ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊ ಡುಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಮೇಲುಗೈ ಸಾಧಿಸುತ್ತಿದ್ದಾರೆ. ಸರ್ಕಾರಿ ಕಾಲೇಜು ಎಂದು ಕೀಳರಿಮೆ ಬೇಡ. ಅನೇಕ ಜನ ಸಾಧಕರು ಸರ್ಕಾರಿ ಕಾಲೇಜುಗಳಲ್ಲಿ ಕಲಿತವರಾಗಿದ್ದಾರೆ. ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗ ಕ್ರೀಡಾ ನಿರ್ದೇಶಕ ಡಾ.ಹನುಮಂತಯ್ಯ ಪೂಜಾರಿ ಮಾತನಾಡಿ, ಮುಂದಿನ ಭವಿಷ್ಯದ ಬಗ್ಗೆ ಭದ್ದತೆ, ಆತ್ಮಸ್ಥೈರ್ಯ, ಆತ್ಮವಿಶ್ವಾಸ ಇರಲಿ ಹಾಗೂ ವಿದ್ಯಾರ್ಥಿಗಳು ಶ್ರದ್ಧೆ, ನಿಷ್ಠೆಯಿಂದ ದುಡಿದರೆ ಜೀವನದಲ್ಲಿ ಯಶಸ್ವಿಗಳಾಗಿ ಹೊರಹೊಮ್ಮಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಆರ್.ಎಸ್.ಕಲ್ಲೂರಮಠ ಮಾತನಾಡಿ, ಶಾಸಕರ ಸಹಕಾರದಿಂದ ಕಾಲೇಜಿನ ಕಟ್ಟಡ ನಿರ್ಮಾಣವಾಗುತ್ತಿದೆ ಹಾಗೂ ಕಾಲೇಜಿನ ಅಭಿವೃದ್ಧಿ ನಡೆಯುತ್ತಿದೆ ಎಂದು ಹೇಳಿದರು.ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಎಚ್.ಎಚ್.ಹಿರೇಮಠ, ಎಚ್.ವೆಂಕಟೇಶ, ಮಲ್ಲಮ್ಮ ಜೋಗೂರ, ಶಂಕರ ಹೂಗಾರ, ವಿಠ್ಠಲ ಮೇಲಿನಮನಿ, ಪಾಂಡು ಸಾಹುಕಾರ ದೊಡಮನಿ, ಸಿ.ಬಿ.ನಾಟೀಕಾರ, ಡಾ.ಚಿದಾನಂದ ಆನೂರ, ಡಾ.ಭಾರತಿ ಹೊಸಟ್ಟಿ, ಡಾ.ದಾವಲಸಾ ಪಿಂಜಾರ, ಡಾ.ಎಂ.ಆರ್.ಕೆಂಭಾವಿ, ಪ್ರೊ.ರಮೇಶ ಬಳ್ಳೊಳ್ಳಿ, ಡಾ.ಭಾರತಿ ಹಾಲು, ಪ್ರೊ.ಅರ್ಪಿತಾ ಪಾಟೀಲ, ಡಾ.ಅನಂತ ಪದ್ಮನಾಭ ಸರವಂದಿ, ವಿ.ಸಿ.ಕುಲಕರ್ಣಿ, ಡಾ.ಆನಂದ ಕುಲಕರ್ಣಿ, ಡಾ.ರಾಮಣ್ಣ ಕಳ್ಳಿ, ಡಾ.ರಾಘವೇಂದ್ರ ಗುರಜಾಲ, ಡಾ.ರಾಜೇಶ್ವರಿ ಪುರಾಣಿಕ, ಡಾ.ಬೌರಮ್ಮ, ಡಾ.ಸವಿತಾ ಚವ್ಹಾಣ, ಪ್ರೊ.ನಾತುರಾಮ ಜಾಧವ, ಪ್ರೊ.ಮಂಜುನಾಥ ಗಾಣಿಗೇರ, ಪ್ರೊ.ಆಸೀಫ ರೋಜಿನದಾರ, ಪ್ರೊ.ಅಸಾದುಲ್ಲಾ, ಪ್ರೊ.ತನ್ವೀರ್ ಗೊಡೆಸವಾರ, ಡಾ.ನೀಲಕಂಠ ಹಳ್ಳಿ, ಪ್ರೊ.ಶೋಭಾ ರುದ್ರಗೌಡರ, ಶಿವಾನಂದ ಸಾಂಗೋಲಿ, ವೀರನಗೌಡ ಪಾಟೀಲ, ನವೀನಗೌಡ ಪಾಟೀಲ, ಸುಜಾತಾ ಬಿರಾದಾರ ಮುಂತಾದವರು ಇದ್ದರು.