ಕನ್ನಡಪ್ರಭ ವಾರ್ತೆ ಹಾರೂಗೇರಿಯಾರಿಗೆ ತಮ್ಮನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವೋ ಅವರು ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ವಿಜಯಪುರದ ಚಾಣಕ್ಯ ಕರಿಯರ್‌ ಅಧ್ಯಕ್ಷ ಎನ್.ಎಮ್.ಬಿರಾದಾರ ಹೇಳಿದರು.

ಕನ್ನಡಪ್ರಭ ವಾರ್ತೆ ಹಾರೂಗೇರಿಯಾರಿಗೆ ತಮ್ಮನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವೋ ಅವರು ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ವಿಜಯಪುರದ ಚಾಣಕ್ಯ ಕರಿಯರ್‌ ಅಧ್ಯಕ್ಷ ಎನ್.ಎಮ್.ಬಿರಾದಾರ ಹೇಳಿದರು.

ಹಾರೂಗೇರಿ ಪಟ್ಟಣದಲ್ಲಿ ನಡೆದ ಬೆಳಗಾವಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಸ್ಪರ್ಧಾ ಜಗತ್ತು ಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಉತ್ತರ ಕರ್ನಾಟಕದಲ್ಲಿ ಮರಾಠಿ ಪ್ರಭಾವ ಹೆಚ್ಚಿದ್ದ ಸಂದರ್ಭದಲ್ಲಿ ಉತ್ತರ ಕರ್ನಾಟಕದಲ್ಲಿ ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ ಹೆಚ್ಚಿನ ಪ್ರಯತ್ನ ಪಟ್ಟವರು ಡೆಪ್ಯೂಟಿ ಚನ್ನಬಸಪ್ಪನವರು. ಪುಸ್ತಕ ರಚನಾ ಸಮಿತಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಬೆಳಗಾವಿ ಜಿಲ್ಲೆಯ ಗಂಗಾಧರ್ ಮಡಿವಾಳೇಶ್ವರ ತುರಮುರಿ ಹಾಗೂ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ. ಇವೆಲ್ಲವೂ ಕನ್ನಡ ಬೆಳವಣಿಗೆಗೆ ಮಹತ್ತರ ಪಾತ್ರವನ್ನು ವಹಿಸಿದ್ದು, ಅವರ ಸ್ಮರಣೆ ಈಗ ಸೂಕ್ತವಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾನು ಯಶಸ್ಸನ್ನು ಗಳಿಸಬೇಕಾದರೆ ನನ್ನಲ್ಲಿರುವ ದೌರ್ಬಲ್ಯಗಳನ್ನು ಮೆಟ್ಟಿನಿಂತು ದುಡಿದಿದ್ದೇನೆ. ಬೇರೆಯವರ ತೋರ್ಪಡಿಕೆಗಾಗಿ ಅಧ್ಯಯನ ಮಾಡಬೇಕು, ನಾನು ಬೇರೆಯವರಂತೆ ಸಾಧನೆ ಮಾಡಬೇಕು ಅಂತ ಅಂದುಕೊಂಡರೆ ಸಾಲದು, ಕಠಿಣ ಪರಿಶ್ರಮ ಮುಖ್ಯ. ನಾವು ಗುರಿ ಸಾಧನೆಗೆ ಏನು ಮಾಡಬೇಕು ಅದನ್ನೇ ಮಾಡಬೇಕು ಎಂದು ಉದಾಹರಣೆಗಳ ಮೂಲಕ ವಿವರಣೆ ನೀಡಿದರು.ನಮ್ಮ ಆಸೆಗಳಿಗೆ ಅನುಗುಣವಾಗಿ ಕೆಲಸ ಮಾಡಿದರೆ ಯಶಸ್ಸು ಸಿಗಲು ಸಾಧ್ಯವಿಲ್ಲ. ನಾವು ಪರೀಕ್ಷೆಯ ಪಠ್ಯಗಳಿಗೆ ಅನುಗುಣವಾಗಿ ಕೆಲಸ ಮಾಡಿದರೆ ಮಾತ್ರ ಸಾಧಕರಾಗಬಹುದು. ನಾನು ಒಬ್ಬ ಅಧಿಕಾರಿಯಾಗಿರಬಹುದಿತ್ತು, ಆದರೆ ನನ್ನ ಸರ್ಕಾರಿ ಕೆಲಸವನ್ನು ಬಿಟ್ಟು 1.5 ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದೇನೆ. ಅದರಲ್ಲಿ 25 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದು, ಇದೀಗ ರಾಜ್ಯಾದ್ಯಂತ ಬೇರೆ ಬೇರೆ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೆ ಕಾರಣ ಓದುವ ಹವ್ಯಾಸ ಎಂದು ಅವರು ಹೇಳಿದರು.