ಸಾಮರ್ಥ್ಯದಿಂದ ಸಾಧನೆ ಸಾಧ್ಯ. ಅದೃಷ್ಟ ಒಂದು ಬಾರಿ ಮಾತ್ರ ಬರುತ್ತದೆ.
ಕೂಡ್ಲಿಗಿ: ಜೀವನದಲ್ಲಿ ಯಾವುದೇ ಪವಾಡ ಘಟಿಸುವುದಿಲ್ಲ. ಸಾಮರ್ಥ್ಯದಿಂದ ಸಾಧನೆ ಸಾಧ್ಯ. ಅದೃಷ್ಟ ಒಂದು ಬಾರಿ ಮಾತ್ರ ಬರುತ್ತದೆ. ಆದರೆ ಸಾಮರ್ಥ್ಯದಿಂದ ಸಾಧಿಸಿದ್ದು ನಮ್ಮ ಜೀವನ ಇರುವವರೆಗೂ ಮತ್ತು ನಮ್ಮ ಜೀವನದ ನಂತರವೂ ನಮ್ಮ ಸಾಧನೆಗಳು ಮಾತನಾಡುತ್ತವೆ ಎಂದು ಜ್ಞಾನಭಾರತಿ ವಿದ್ಯಾಮಂದಿರ ಹಾಗೂ ವೈ.ಎಸ್.ಎಸ್.ಸಮೂಹ ಸಂಸ್ಥೆಗಳ ಅಧ್ಯಕ್ಷ ಕೆ.ಎಂ.ರವಿಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಪಟ್ಟಣದ ಜ್ಞಾನಭಾರತಿ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಜ್ಞಾನ ಭಾರತಿ ವಿದ್ಯಾಮಂದಿರ ಹಾಗೂ ಜ್ಞಾನದೀಪ ಸಿಬಿಎಸ್ ಇ ಇಂಟರ್ ನ್ಯಾಷನಲ್ ಸ್ಕೂಲ್ ವಾರ್ಷಿಕೋತ್ಸವ ಜ್ಞಾನ ಸಿಂಧೂರ -2025 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗೆ ಸಂದರ್ಭಾನುಸಾರ ವೈಯಕ್ತಿಕ ಜೀವನ ರೂಪಿಸುವ ನೈತಿಕ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಶಿಕ್ಷಕರು ಮುಂದಾಗಬೇಕಿದೆ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು. ಹೃದ್ರೋಗ ತಜ್ಞ ಡಾ. ಕಿರಣ್ ಬಂಡ್ರಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ವಕೀಲೆ ಕೆ.ಎಚ್.ಎಂ. ಶೈಲಜಾ, ನಿಲಯ ಮೇಲ್ವಿಚಾರ ಎ.ಮೊಹಮದ್ ಸೈಯದ್, ಕಸಾಪ ಅಧ್ಯಕ್ಷ ವೀರೇಶ್ ಅಂಗಡಿ, ಲೇಖಕ ಭೀಮಣ್ಣ ಗಜಾಪುರ, ಬಿ.ನಾಗರಾಜ, ಸಿಪಿಐ ಪಕ್ಷದ ಕಾರ್ಯದರ್ಶಿ ಎಚ್.ವೀರಣ್ಣ, ರಶ್ಮಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಹರೀಶ್, ಜ್ಞಾನಭಾರತಿ ಕಾಲೇಜಿನ ವ್ಯವಸ್ಥಾಪಕ ರಾಜು ಇದ್ದರು. ಮುಖ್ಯಗುರು ಕೆ.ರಾಘವೇಂದ್ರ ಸ್ವಾಗತಿಸಿದರು. ಗುಪ್ಪಾಲ್ ಕೊಟ್ರೇಶ್ ನಿರೂಪಿಸಿದರು. ಕೂಡ್ಲಿಗಿ ಪಟ್ಟದ ಜ್ಞಾನಭಾರತಿ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಜ್ಞಾನ ಭಾರತಿ ವಿದ್ಯಾಮಂದಿರ ಹಾಗೂ ಜ್ಞಾನದೀಪ ಸಿಬಿಎಸ್ ಇ ಇಂಟರ್ ನ್ಯಾಷನಲ್ ಸ್ಕೂಲ್ ವಾರ್ಷಿಕೋತ್ಸವ ಜ್ಞಾನ ಸಿಂಧೂರ -2025 ಕಾರ್ಯಕ್ರಮದವನ್ನು ವಿಶೇಷ ಆಹ್ವಾನಿತರಾದ ಡಾ.ಕಿರಣ್ ಬಂಡ್ರಿ ಅವರು ಉದ್ಗಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಎಂ.ರವಿಕುಮಾರ್ ಮುಂತಾದವರು ಹಾಜರಿದ್ದರು