ಸಾರಾಂಶ
ರೋಣ: ಆರೋಗ್ಯ ಕಾಪಾಡಿದರೆ ಮಾತ್ರ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ(ಮಿಥುನಗೌಡ) ಜಿ. ಪಾಟೀಲ ತಿಳಿಸಿದರು.
ಸ್ಥಳೀಯ ತಾಪಂ ಆವರಣದಲ್ಲಿ ಮಂಗಳವಾರ ತಾಲೂಕು ಆಸ್ಪತ್ರೆಯ ಆಶ್ರಯದಲ್ಲಿ ನಡೆದ ಆರ್‌ಡಿಪಿಆರ್ ಸಿಬ್ಬಂದಿಗಳ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗ್ರಾಮ ಮಟ್ಟದ ಸಿಬ್ಬಂದಿ ಆರೋಗ್ಯ ಹಿತದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಿದೆ. ತಾಪಂ ಇಒ ಚಂದ್ರಶೇಖರ ಬಿ. ಕಂದಕೂರ ಅವರು ಇಂತಹ ಕಾರ್ಯಕ್ರಮ ಮಾಡಿದ್ದಕ್ಕೆ ಅಭಿನಂದನೆಗಳು. ಪ್ರತಿವರ್ಷ ಇಂತಹ ಕಾರ್ಯಕ್ರಮ ನಡೆಯಲಿ. ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುವವರು ಬಹಳ ಒತ್ತಡದಲ್ಲಿದ್ದಾರೆ. ಹೀಗಾಗಿ ಆರೋಗ್ಯದ ಬಗ್ಗೆ ಜಾಗೃತಿ ವಹಿಸಿ, ಗ್ರಾಮ ಮಟ್ಟದಲ್ಲೂ ಇಂತಹ ಶಿಬಿರಗಳನ್ನು ಆಯೋಜಿಸಿ, ಜನರ ಆರೋಗ್ಯ ಕಾಪಾಡಿ ಎಂದು ಮನವಿ ಮಾಡಿದರು.ತಾಪಂ ಇಒ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಮಾತನಾಡಿ, ಪ್ರತಿಯೊಬ್ಬರಿಗೂ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು. ಸಿಬ್ಬಂದಿ ಆರೋಗ್ಯ ಹಿತದೃಷ್ಟಿಯಿಂದ ಶಿಬಿರ ಆಯೋಜಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗದಗ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಪ್ತ ಸಮಾಲೋಚಕ ಎಸ್.ಬಿ. ಪಾಟೀಲ ಮಾತನಾಡಿ, ರಕ್ತದಾನದ ಬಗ್ಗೆ ತಿಳಿಸಿ, 12.5 ಹೆಚ್ಚು ಹಿಮೋಗ್ಲೋಬಿನ್ ಇದ್ದವರು ರಕ್ತದಾನಕ್ಕೆ ಅರ್ಹರು. ರಕ್ತ ಕೊಟ್ಟರೆ ದಪ್ಪ ಅಥವಾ ತೆಳ್ಳಗಾಗುವುದಿಲ್ಲ. ಬದಲಿಗೆ ದಾನಿಗೆ ಆರೋಗ್ಯದ ಲಾಭವೇ ಸಿಗುತ್ತದೆ ಎಂದು ಧೈರ್ಯ ತುಂಬಿದರು.ಹೃದಯರೋಗ ತಜ್ಞ ಡಾ. ಪ್ರವೀಣ ಅಣಗೌಡ್ರ ಮಾತನಾಡಿ, ರಕ್ತದಲ್ಲಿ ಮೂರು ಪ್ರಕಾರಗಳಿವೆ. ನೀವು ಕೊಡುವ ರಕ್ತದಿಂದ ಹಲವು ಜೀವಗಳು ಉಳಿಯುತ್ತವೆ. ಎಲ್ಲರೂ ರಕ್ತದಾನ ಮಾಡಿ ಪುಣ್ಯ ಕೆಲಸ ಮಾಡಿ ಎಂದರು.
ಈ ವೇಳೆ ತಾಲೂಕು ವೈದ್ಯಾಧಿಕಾರಿ ಡಾ. ಬಿ.ಎಸ್. ಭಜಂತ್ರಿ, ಪ್ಯಾಥಾಲಾಜಿಸ್ಟ್ ಡಾ. ಹರೀಶ್ ಪೆರಮಿ, ಡಾ. ಶಕೀಲ ಅಹ್ಮದ್ ದುಂದರಗಿ, ಡಾ. ರಘು ಹೊಸೂರ, ಡಾ. ದಾನಮ್ಮ ಹುಲಕುಂದ, ಡಾ. ಶಿವಪ್ರಸಾದ ಹಿರೇಮಠ, ಡಾ. ಸಂತೋಷ ಗಚ್ಚಿನಮನಿ, ಬಸವರಾಜ ಮೂಲಿಮನಿ ಸೇರಿದಂತೆ ಇತರರು ಇದ್ದರು. ಸುರೇಶ ಬಾಳಿಕಾಯಿ ಸ್ವಾಗತಿಸಿದರು. ಅರುಣ ಶಿಂಗ್ರಿ ನಿರೂಪಿಸಿ, ವಂದಿಸಿದರು.;Resize=(128,128))
;Resize=(128,128))
;Resize=(128,128))