ಇಲ್ಲಿನ ಪೂರ್ಣ ಪ್ರಜ್ಞ ಕಾಲೇಜು (ಸ್ವಾಯತ್ತ) ಇಲ್ಲಿ ಏ. 6 ಮತ್ತು 7ರಂದು ಎರಡು ದಿನಗಳ ರಾಜ್ಯ ಮಟ್ಟದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮ ಪ್ರಜ್ಞ -2026 ಅನ್ನು ಮುಖ್ಯ ಅತಿಥಿಯಾಗಿ ಕಿರುತೆರೆ ಮತ್ತು ಸಿನಿಮಾ ನಟರು ಹಾಗೂ ಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿರುವ ಕಾರ್ತಿಕ್ ಸಾಮಗ ಉದ್ಘಾಟಿಸಿದರು.
ಉಡುಪಿ: ಇಲ್ಲಿನ ಪೂರ್ಣ ಪ್ರಜ್ಞ ಕಾಲೇಜು (ಸ್ವಾಯತ್ತ) ಇಲ್ಲಿ ಏ. 6 ಮತ್ತು 7ರಂದು ಎರಡು ದಿನಗಳ ರಾಜ್ಯ ಮಟ್ಟದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮ ಪ್ರಜ್ಞ -2026 ಅನ್ನು ಮುಖ್ಯ ಅತಿಥಿಯಾಗಿ ಕಿರುತೆರೆ ಮತ್ತು ಸಿನಿಮಾ ನಟರು ಹಾಗೂ ಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿರುವ ಕಾರ್ತಿಕ್ ಸಾಮಗ ಉದ್ಘಾಟಿಸಿದರು.ಪ್ರಪಂಚದ ಮಹತ್ತರ ಸಾಧನೆಗಳಲ್ಲಿ ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿಗಳಿರಬೇಕು ಎಂಬುದು ಶ್ರೀ ವಿಭುದೇಶ ಶ್ರೀಪಾದರ ಆಶಯದ ಹಿನ್ನೆಲೆಯಲ್ಲಿ ಇಲ್ಲಿ ಕಾರ್‍ಯಕ್ರಮ ನಡೆಯುತ್ತಿದೆ. ಒಬ್ಬರ ಸಾಧನೆ ನಮಗೆ ಧನಾತ್ಮಕ ಪ್ರೇರಣೆಯಾಗಬೇಕು. ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಯಶಸ್ಸನ್ನು ಪಡೆಯಲು ಯೋಗ್ಯನಾಗಿರುತ್ತಾನೆ. ನಿಜವಾದ ಗುರಿಗಳನ್ನು ಸಾಧಿಸುವಲ್ಲಿ ಪ್ರಯತ್ನಿಸಿದರೆ ಜೀವನವೇ ಸ್ವತಃ ನಮ್ಮನ್ನು ಪುರಸ್ಕರಿಸುತ್ತದೆ ಎಂದು ಅವರು ಹೇಳಿದರು.
ಅತಿಥಿಗಳಾಗಿದ್ದ ಬೆಂಗಳೂರಿನ ಯುಎಸ್‌ಎಎಂಇಸಿ ಗೌರವ ಕಾರ್‍ಯದರ್ಶಿ ಡಾ. ಎ.ಪಿ. ಭಟ್ ಮಾತನಾಡಿ, ಈ ಕಾರ್‍ಯಕ್ರಮವು ಅದ್ಭುತವಾದ ಚಿಂತನೆ- ಸೃಜನಶೀಲತೆ- ಸಂಭ್ರಮ ಎನ್ನುವ ತಾತ್ವಿಕತೆಯನ್ನು ಹೊಂದಿದೆ ಮತ್ತು ವಿದ್ಯಾರ್ಥಿಗಳಿಗೆ ಇಂತಹ ಸ್ಪರ್ಧೆಗಳಲ್ಲಿ ಅವಕಾಶ ಒದಗಿಸುವುದು ಒಂದು ಉತ್ತಮ ಕೆಲಸ ಎಂದು ಅಭಿಪ್ರಾಯಪಟ್ಟರು. ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ರಾಮು ಎಲ್., ಸುಮಾರು 60 ದಶಕಗಳಿಂದ ಪೂರ್ಣಪ್ರಜ್ಞ ಸಂಸ್ಥೆಯು ವಿದ್ಯಾರ್ಥಿಗಳನ್ನು ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಉನ್ನತ ನೆಲೆಯಲ್ಲಿ ರೂಪಿಸಿಕೊಂಡು ಬಂದಿದ್ದರಿಂದ ಇಂದು ನಮ್ಮ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು. ಪಿಐಎಂ ನಿರ್ದೆಶಕ ಡಾ. ಪಿ.ಎಸ್. ಐತಾಳ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಮಂಜುನಾಥ ಕರಬ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸಂದೀಪ್ ಸತ್ಯಮೂರ್ತಿ ಸ್ವಾಗತಿಸಿ, ಡಾ. ಸೌಮ್ಯ ಶೆಟ್ಟಿ, ಪ್ರತಿಭಾ ಸಿ. ಆಚಾರ್ಯ, ಧನ್ಯಾಶ್ರೀ, ಡಾ. ಶಿವಕುಮಾರ ಅಳಗೋಡು, ಐಕ್ಯುಎಸಿ ಸಹ ಸಂಯೋಜಕ ಡಾ. ಲಕ್ಷ್ಮೀಶ, ವಿದ್ಯಾರ್ಥಿ ಪ್ರತಿನಿಧಿಗಳಾದ ಭಾರ್ಗವ ಜಿ. ಭಟ್ ಮತ್ತು ಕೆ.ಪಿ. ನಿಹಾ ಉಪಸ್ಥಿತರಿದ್ದರು. ಸಿಂಧು ಪ್ರಾರ್ಥಿಸಿದರು, ಸುಮಲತಾ ಪಿ.ಜೆ. ವಂದಿಸಿದರು.