ಸಾರಾಂಶ
ಹಳಿಯಾಳ: ತಮಿಳುನಾಡಿನ ಮೆಟ್ಟೂರಿನಲ್ಲಿ ಕಳೆದ ವಾರ ನಡೆದ 15 ವರ್ಷದೊಳಗಿನ ಮತ್ತು ಸೀನಿಯರ್ ವಿಭಾಗದ ದಕ್ಷಿಣ ವಲಯದ ಕುಸ್ತಿ ಚಾಂಪಿಯನ್ ಶಿಪ್‌ನಲ್ಲಿ ಹಳಿಯಾಳದ ಕ್ರೀಡಾ ವಸತಿನಿಲಯದ ಹಾಗೂ ಮಿನಿ ಖೆಲೋ ಇಂಡಿಯಾ ಕೇಂದ್ರದ ಕುಸ್ತಿಪಟುಗಳು 10 ಬಂಗಾರ, 3 ಬೆಳ್ಳಿ ಮತ್ತು 1 ಕಂಚು ಸೇರಿದಂತೆ ಒಟ್ಟು 14 ಪದಕಗಳನ್ನು ಗೆದ್ದಿದ್ದಾರೆ.ಸೀನಿಯರ್ ಪುರುಷರ ವಿಭಾಗದಲ್ಲಿ ವಿಜಯ್ ಬಂಗ್ಯಾನವರ 92 ಕೆಜಿಯಲ್ಲಿ ಪ್ರಥಮ, ಜ್ಞಾನೇಶ್ವರ ಹಳದೂಳಕರ 60 ಕೆಜಿಯಲ್ಲಿ ಪ್ರಥಮ, ಮಹಿಳೆಯರ ವಿಭಾಗದಲ್ಲಿ ಭಗವತಿ ಗೊಂದಲಿ 62 ಕೆಜಿಯಲ್ಲಿ ಪ್ರಥಮ ಮತ್ತು 15 ವರ್ಷ ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ ಅಭಿಲಾಶ್ ಉರುಬಾನಟ್ಟಿ 38 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಮೋಹನ ಹಡಪದ್ 45 ಕೆಜಿಯಲ್ಲಿ ದ್ವಿತೀಯ, ಕೃಷ್ಣ ಝಾದವ್ 41 ಕೆಜಿಯಲ್ಲಿ ತೃತೀಯ ಹಾಗೂ ಬಾಲಕಿಯರ ಕಿರಿಯರ ವಿಭಾಗದಲ್ಲಿ ಸುಶ್ಮೀತಾ ಕಮ್ಮಾರ್ 33 ಕೆಜಿಯಲ್ಲಿ ಪ್ರಥಮ, ವಾಣಿ ಗಡ್ಡಿಹೋಳಿ 39 ಕೆಜಿ ವಿಭಾಗದಲ್ಲಿ ಪ್ರಥಮ, ಸೌಂದರ್ಯ ವಾಲೇಕರ 46 ಕೆಜಿ ವಿಭಾಗದಲ್ಲಿ ಪ್ರಥಮ, ಕಾವ್ಯ ದಾನವೇನ್ನವರ 54 ಕೆಜಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.ಸವಿತಾ ಸಿದ್ದಿ 58 ಕೆಜಿಯಲ್ಲಿ ಪ್ರಥಮ, ವಿದ್ಯಾಶ್ರೀ ಗೆಣ್ಣನವರ 62 ಕೆಜಿಯಲ್ಲಿ ಪ್ರಥಮ, ಖೆಲೋ ಇಂಡಿಯಾ ಮಿನಿ ಕೇಂದ್ರದ ಸುಜಾತಾ ಪಾಟೀಲ 65 ಕೆಜಿಯಲ್ಲಿ ಪ್ರಥಮ ಸ್ಥಾನ, ಸ್ವಾತಿ ಅಣ್ಣಿಗೇರಿ 53 ಕೆಜಿಯಲ್ಲಿ ದ್ವಿತೀಯ ಪ್ರಶಸ್ತಿ ಪಡೆದಿದ್ದಾರೆ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರವಿ ನಾಯಕ್ ತಿಳಿಸಿದ್ದಾರೆ.6ರಂದು ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶ
ಯಲ್ಲಾಪುರ: ಪಟ್ಟಣದ ಕಾರ್ಮಿಕ ಭವನದಲ್ಲಿ ರಾಜ್ಯ ಹಾಗೂ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರ ಸಂಘದ ಆಶ್ರಯದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶ ಜ. ೬ರಂದು ಬೆಳಗ್ಗೆ ೧೦ಕ್ಕೆ ನಡೆಯಲಿದೆ ಎಂದು ಮಾಧ್ಯಮಿಕ ನೌಕರ ಸಂಘದ ಕಾರ್ಯದರ್ಶಿ ಜಿ.ಆರ್. ಭಟ್ಟ ತಿಳಿಸಿದರು.ಡಿ. ೨೯ರಂದು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ, ಮಾಹಿತಿ ನೀಡಿ, ಜ. ೬ರಂದು ದಿ. ನಾರಾಯಣ ನಾಯಕ ಹಿರೇಗುತ್ತಿ ವೇದಿಕೆಯಲ್ಲಿ ನಡೆಯುವ ಜಿಲ್ಲಾ ಶೈಕ್ಷಣಿಕ ಸಮಾವೇಶವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ, ಆರ್.ವಿ. ದೇಶಪಾಂಡೆ, ಎಂಎಲ್‌ಸಿಗಳಾದ ಎಸ್.ವಿ. ಸಂಕನೂರ, ಶಾಂತಾರಾಮ ಸಿದ್ದಿ, ವಿಕೇಂದ್ರಿಕರಣ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಆಯುಕ್ತೆ ಜಯಶ್ರೀ ಶಿಂತ್ರಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಜಿಲ್ಕಾಧ್ಯಕ್ಷ ಶಶಿಭೂಷಣ ಹೆಗಡೆ, ಡಿಡಿಪಿಐ ಬಸವರಾಜ, ವಿವಿಧ ತಾಲೂಕುಗಳ ಬಿಇಒ ಮತ್ತು ಅಧಿಕಾರಿಗಳು ಗಣ್ಯರು ಭಾಗವಹಿಸುವರು ಎಂದರು.ಈ ಸಂದರ್ಭದಲ್ಲಿ ಮುಖ್ಯಾಧ್ಯಾಪಕರ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸೋಮು ಮೂಡಣ್ಣನವರ್, ದಿನೇಶ ನೇತ್ರೇಕರ, ಜಿ.ಯು. ಹೆಗಡೆ, ಪ್ರಮುಖರಾದ ಅಜೇಯ ನಾಯಕ, ಜಿ.ಕೆ. ನಾಯ್ಕ, ವಿ.ಎನ್. ಅರಿಶಿನಗೇರಿ, ಎಸ್.ಆರ್. ನರಸಣ್ಣನವರ್, ನಾರಾಯಣ ದಾಯಿಮನೆ, ಎಂ.ರಾಜಶೇಖರ, ಎಂ.ಕೆ. ಭಟ್ಟ, ನವೀನಕುಮಾರ ಮುಂತಾದವರು ಉಪಸ್ಥಿತರಿದ್ದರು.