ಮಾಗಡಿ: ಮಾಗಡಿ ಪಟ್ಟಣದ ಬೈಚಾಪುರ ರಸ್ತೆಯಲ್ಲಿರುವ ವಿದ್ಯಾಚೇತನ ಪಿಯು ಕಾಲೇಜಿನ 110 ವಿದ್ಯಾರ್ಥಿಗಳು ಬೆಂಗಳೂರು ದಕ್ಷಿಣ ಮಟ್ಟದ ಕಾಲೇಜು ಮಟ್ಟದ ಕ್ರೀಡಾಕೂಟದಲ್ಲಿ 91 ಪದಕಗಳನ್ನು ಪಡೆದು ತಾಲೂಕಿನ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ
ಮಾಗಡಿ: ಮಾಗಡಿ ಪಟ್ಟಣದ ಬೈಚಾಪುರ ರಸ್ತೆಯಲ್ಲಿರುವ ವಿದ್ಯಾಚೇತನ ಪಿಯು ಕಾಲೇಜಿನ 110 ವಿದ್ಯಾರ್ಥಿಗಳು ಬೆಂಗಳೂರು ದಕ್ಷಿಣ ಮಟ್ಟದ ಕಾಲೇಜು ಮಟ್ಟದ ಕ್ರೀಡಾಕೂಟದಲ್ಲಿ 91 ಪದಕಗಳನ್ನು ಪಡೆದು ತಾಲೂಕಿನ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬಾಲಕರ ಹಾಕಿ, ರಿಲೇ, 100 ಮೀ ಓಟ, ಚೆಸ್, ಕುಸ್ತಿ, ಜೂಡೋ, ವೇಟ್ ಲಿಪ್ಟಿಂಗ್, ಸ್ಲೋವಾಕ್ ರೇಸ್ ಹೀಗೆ ವಿವಿಧ ಕ್ರೀಡೆಗಳಲ್ಲಿ ಪದಕಗಳನ್ನು ಕೈತುಂಬಾ ಸಂಪಾದಿಸಿ ಕಾಲೇಜು ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ.ಕಾಲೇಜು ಪ್ರಾಚಾರ್ಯ ರವಿಕುಮಾರ್ ಮಾತನಾಡಿ, ಗ್ರಾಮೀಣ ಯುವಕರಿಗೆ ಪ್ರೋತ್ಸಾಹ ಕೊಟ್ಟಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ದೇಶಕ್ಕೆ ಹೆಸರು ತರುವ ಕೆಲಸ ಮಾಡುತ್ತಾರೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದಕ್ಕಾಗಿ ಪಠ್ಯದ ಜೊತೆಗೆ ಕ್ರೀಡೆಗೂ ನಾವುಗಳು ಹೆಚ್ಚು ಮಹತ್ವವನ್ನು ಕೊಡುತ್ತಿದ್ದೇವೆ ಎಂದು ಹೇಳಿದರು.
ಕ್ರೀಡಾ ಉಪನ್ಯಾಸಕ ಕಿರಣ್ ಮಾತನಾಡಿ, 2026ಕ್ಕೆ ಭಾರತದಲ್ಲಿ ಒಲಂಪಿಕ್ ಏರ್ಪಡಿಸುವ ಆಲೋಚನೆಯಲ್ಲಿ ಭಾರತ ಸಿದ್ದವಾಗುತ್ತಿದೆ. ಇದಕ್ಕಾಗಿ ದೇಶದಾದ್ಯಂತ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪೂರ್ಣ ಪ್ರಮಾಣದ ತರಬೇತಿ ಕೊಡುವ ಕೆಲಸಕ್ಕೆ ದೇಶ ಅಣಿಯಾಗುತ್ತಿದೆ. ಗ್ರಾಮೀಣ ಭಾಗದ ಯುವಕರಿಗೆ ಸರಿಯಾದ ರೀತಿಯಲ್ಲಿ ತರಬೇತಿ ನೀಡಬೇಕೆಂದು ಮಾಡಿದ ಪ್ರಯತ್ನಕ್ಕೆ ಯಶ ತಂದುಕೊಟ್ಟಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಎಲ್ಲಾ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಸುನೀಲ್, ತಿಮ್ಮರಾಜು, ರಘು, ಗಾಯತ್ರಿ, ಪುಷ್ಪ, ಫಾತೀಮಾ, ಗಗನ, ಕಿರಣ್ ಹಾಜರಿದ್ದರು.
9ಕೆಆರ್ ಎಂಎನ್ 6.ಜೆಪಿಜಿಮಾಗಡಿ ಪಟ್ಟಣದ ವಿದ್ಯಾಚೇತನ ಪಿಯೂ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ 91 ಪದಕಗಳನ್ನು ಗೆದ್ದಿದ್ದಾರೆ.