ಕತಾರ್ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ ಸಾಧಕರಿಗೆ ಸನ್ಮಾನ

| Published : Nov 28 2024, 12:33 AM IST

ಸಾರಾಂಶ

ಡಾ. ಗುರುರಾಜ ಕರಜಗಿ, ಡಾ. ರಮೇಶ್ ಅರವಿಂದ್, ಕ್ಯಾಪ್ಟನ್ ನವೀನ್ ನಾಗಪ್ಪನ್ , ಡಾ. ರಾಧಾ ಶ್ರೀಧರ್, ರೇಡಿಯೋ ಜಾಕಿ ಪ್ರಸನ್ನ,ಅವರನ್ನು ಗೌರವಿಸಲಾಯಿತು.

ದೋಹಾ: ಕತಾರ್ ಭಾರತೀಯ ಸಾಂಸ್ಕೃತಿಕ ಕೇಂದ್ರದ ಆವರಣದಲ್ಲಿ ಕರ್ನಾಟಕದ ಖ್ಯಾತ ತಾರೆಯರು, ಪ್ರಸಿದ್ಧ ಕಲಾವಿದರು ಮತ್ತು ಪ್ರಮುಖರನ್ನು ಸನ್ಮಾನಿಸಲಾಯಿತು.

ಡಾ. ಗುರುರಾಜ ಕರಜಗಿ, ಡಾ. ರಮೇಶ್ ಅರವಿಂದ್, ಕ್ಯಾಪ್ಟನ್ ನವೀನ್ ನಾಗಪ್ಪನ್ , ಡಾ. ರಾಧಾ ಶ್ರೀಧರ್, ರೇಡಿಯೋ ಜಾಕಿ ಪ್ರಸನ್ನ,ಅವರನ್ನು ಗೌರವಿಸಲಾಯಿತು.ಐ.ಸಿ.ಸಿ. ಆಡಳಿತ ಸಮಿತಿಯ ಸಲಹಾ ಸದಸ್ಯರಾದ ಜಾಫರ್ ಖಾನ್, ಸಭಿಕರನ್ನು ಸ್ವಾಗತಿಸಿದರು. ಐ.ಸಿ.ಸಿ. ಉಪಾಧ್ಯಕ್ಷ ಕರ್ನಾಟಕ ಮೂಲದವರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಗಣ್ಯರನ್ನು ಅಭಿನಂದಿಸಿದರು. ಐಸಿಸಿ ಬಾಹ್ಯ ಚಟುವಟಿಕೆಗಳ ಮುಖ್ಯಸ್ಥರಾದ ಗಾರ್ಗಿ ವೈದ್ಯ ವಂದಿಸಿದರು.ಐಸಿಸಿ ಶಾಲಾ ಚಟುವಟಿಕೆಗಳ ಮುಖ್ಯಸ್ಥ ಶಂತನು ದೇಶ್‌ಪಾಂಡೆ ಕಾರ್ಯಕ್ರಮ ನಡೆಸಿಕೊಟ್ಟರು. ಐಸಿಸಿ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್ ಹಾಗೂ ಇತರ ಆಡಳಿತ ಸಮಿತಿಯ ಸದಸ್ಯರು, ಭಾರತೀಯ ಸಮುದಾಯದ ಸಂಘ ಸಂಸ್ಥೆಗಳ ಅಧ್ಯಕ್ಷರು, ಹಿರಿಯ ಮುಖಂಡರು ಹಾಗೂ ವಿವಿಧ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.