ವೃತ್ತಿ ಕೌಶಲ ಪಡೆದು ಸ್ವಾಲಂಬಿ ಬದುಕು ಕಟ್ಟಿಕೊಳ್ಳಿ

| Published : Oct 13 2025, 02:00 AM IST

ವೃತ್ತಿ ಕೌಶಲ ಪಡೆದು ಸ್ವಾಲಂಬಿ ಬದುಕು ಕಟ್ಟಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ಗಾಣಿಗ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್‌ನ ನಾಗರಾಜಶೆಟ್ಟಿ ಇಂತಹ ಸಮುದಾಯಕ್ಕೆ ನೆರವಾಗುವ ಕೆಲಸಗಳನ್ನು ಹಲವಾರು ವರ್ಷಗಳ ಹಿಂದಿನಿಂದಲೇ ಮಾಡುತ್ತಿದ್ದಾರೆ, ಬಡವರ ಮಕ್ಕಳ ಶಿಕ್ಷಣಕ್ಕೂ ನೆರವಾಗುತ್ತಿದೆ. ಮಾಜಿ ಸಭಾಪತಿ ಸುದರ್ಶನ್‌ರ ಪ್ರಯತ್ನ, ಹಿಂದುಳಿದ ವರ್ಗಗಳ ಮೇಲಿನ ಸಿಎಂ ಸಿದ್ದರಾಮಯ್ಯರ ಕಾಳಜಿಯಿಂದಾಗಿ ಗಾಣಿಕ ಅಭಿವೃದ್ದಿ ನಿಗಮ ಸ್ಥಾಪನೆಯಾಗಿದೆ,

ಕನ್ನಡಪ್ರಭ ವಾರ್ತೆ ಕೋಲಾರಜ್ಯೋತಿ ಎಜುಕೇಷನ್ ಟ್ರಸ್ಟ್ ಆಶ್ರಯದಲ್ಲಿ ಎಸ್‌ಜಿಇಸಿಟಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸಿದ್ದು, ಸಮುದಾಯದ ನಿರುದ್ಯೋಗಿ ಯುವಕರು ಕೋರ್ಸುಗಳಿಗೆ ದಾಖಲಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ ಎಂದು ಗಾಣಿಗ ಅಭಿವೃದ್ದಿ ನಿಗಮದ ಅಧ್ಯಕ್ಷ ವಿಶ್ವಾಸ್‌ಕುಮಾರ್ ದಾಸ್ ಕರೆ ನೀಡಿದರು.ಬೆಂಗಳೂರು ಗಾಣಿಗ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ಹಾಗೂ ಕೋಲಾರ ಜ್ಯೋತಿ ಎಜುಕೇಷನಲ್ ಟ್ರಸ್ಟ್‌ನಿಂದ ನಗರದ ಜ್ಯೋತಿ ಎಜುಕೇಷನಲ್ ಟ್ರಸ್ಟ್‌ನ ಕ್ಯಾಂಪಸ್‌ನಲ್ಲಿ ಜ್ಞಾನಜ್ಯೋತಿ ಯೋಗ ಅಧ್ಯಯನ ಕೇಂದ್ರದ ಶಾಖೆ ಹಾಗೂ ಎಸ್‌ಜಿಇಸಿಟಿ ಕೌಶಲ್ಯಾಭಿವೃದ್ದಿ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಸೌಲಭ್ಯ ಕಲ್ಪಿಸುವ ಭರವಸೆ

ಬೆಂಗಳೂರಿನ ಗಾಣಿಗ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್‌ನ ನಾಗರಾಜಶೆಟ್ಟಿ ಇಂತಹ ಸಮುದಾಯಕ್ಕೆ ನೆರವಾಗುವ ಕೆಲಸಗಳನ್ನು ಹಲವಾರು ವರ್ಷಗಳ ಹಿಂದಿನಿಂದಲೇ ಮಾಡುತ್ತಿದ್ದಾರೆ, ಬಡವರ ಮಕ್ಕಳ ಶಿಕ್ಷಣಕ್ಕೂ ನೆರವಾಗುವ ಪ್ರಯತ್ನ ಶ್ಲಾಘನೀಯ. ಮಾಜಿ ಸಭಾಪತಿ ಸುದರ್ಶನ್‌ರ ಪ್ರಯತ್ನ, ಹಿಂದುಳಿದ ವರ್ಗಗಳ ಮೇಲಿನ ಸಿಎಂ ಸಿದ್ದರಾಮಯ್ಯರ ಕಾಳಜಿಯಿಂದಾಗಿ ಗಾಣಿಕ ಅಭಿವೃದ್ದಿ ನಿಗಮ ಸ್ಥಾಪನೆಯಾಗಿದೆ, ಇದರಡಿ ಸಮುದಾಯಕ್ಕೆ ಸಿಗಬಹುದಾದ ಎಲ್ಲ ಸೌಲಭ್ಯಗಳನ್ನು ಬದ್ಧತೆಯಿಂದ ತಲುಪಿಸುವ ಕೆಲಸ ಮಾಡುವುದಾಗಿ ತಿಳಿಸಿದರು.

ಕೌಶಲ್ಯಾಭಿವೃದ್ದಿ ಕೇಂದ್ರ ಪೈಲೆಟ್‌ ಪ್ರಾಜೆಕ್ಟ್

ರಾಜ್ಯ ಗಾಣಿಗ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಆರ್.ನಾಗರಾಜಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಸ್ಥೆ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ನೀಡುತ್ತಿದೆ, ಅನಾಥ ಮಕ್ಕಳಿಗೆ ಶೈಕ್ಷಣಿಕ ಶುಲ್ಕ ವಿನಾಯತಿ, ಮರುಪಾವತಿ ಮೂಲಕ ನೆರವಾಗುತ್ತಾ ಬಂದಿದೆ. ಕೌಶಲ್ಯಾಭಿವೃದ್ದಿ ಕೇಂದ್ರವನ್ನು ಆರಂಭಿಸಲು ಜ್ಯೋತಿ ಎಜುಕೇಷನಲ್ ಟ್ರಸ್ಟ್ ಅವಕಾಶ ಕಲ್ಪಿಸಿದ್ದು, ರಾಜ್ಯದಲ್ಲೇ ಇಲ್ಲಿ ಮೊದಲ ಬಾರಿಗೆ ಪೈಲೆಟ್ ಪ್ರಾಜೆಕ್ಟ್ ಆಗಿ ಆರಂಭಿಸಿದ್ದು, ನಂತರ ಇದನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಇದು ಸರ್ಕಾರದಿಂದ ಮಾನ್ಯತೆ ಪಡೆದಿದ್ದು, ಸಾಲ ಸೌಲಭ್ಯವೂ ಕೊಡಿಸುವುದಾಗಿ ತಿಳಿಸಿದರು.

ಜ್ಞಾನಜ್ಯೋತಿ ಯೋಗ ಅಧ್ಯಯನ ಕೇಂದ್ರದ ಶಾಖೆಯನ್ನು ಇಂದೇ ಆರಂಭಿಸಿದ್ದು, ಮೊದಲ ದಿನವೇ ೫ ಮಂದಿ ದಾಖಲಾಗಿದ್ದಾರೆ ಇದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.ಶಿಕ್ಷಣದ ಜತೆ ಕೌಶಲ

ಪ್ರಾಥಮಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಬಿ.ಕೆ.ಬಸವರಾಜು ಮಾತನಾಡಿ, ಶಿಕ್ಷಣ ಮಾತ್ರ ನಮ್ಮನ್ನು ಮುಳುಗಿಸದೇ ಜೀವನದ ದಡ ಸೇರಿಸುತ್ತದೆ ಎಂಬ ಸತ್ಯ ಅರಿಯಿರಿ, ಶಿಕ್ಷಣದೊಂದಿಗೆ ಇಂದು ಕೌಶಲ ಕಲಿತರೆ ಬದುಕು ಸುಖಕರವಾಗಿರುತ್ತದೆ ಎಂದು ತಿಳಿಸಿ, ಸ್ವಾವಲಂಬಿ ಜೀವನಕ್ಕೆ ಈ ಕೇಂದ್ರದ ಪ್ರಯೋಜನ ಪಡೆಯಲು ಸಲಹೆ ನೀಡಿದರು.ರಾಜ್ಯ ಗಾಣಿಗ ಸಂಘದ ಅಧ್ಯಕ್ಷ ಎಂ.ಆರ್.ರಾಜಶೇಖರ್, ವಿದ್ಯೆ ಜತೆಗೆ ಕುಲಕಸುಬು ಉಳಿಸಿಕೊಂಡು ಹೋಗಬೇಕು ಆಗ ಮಾತ್ರ ಜೀವನದಲ್ಲಿ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ತಿಳಿಸಿ, ಗಾಣಿಗ ಅಭಿವೃದ್ದಿ ನಿಗಮ, ಟ್ರಸ್ಟ್, ಸಂಘ ಜತೆಗೂಡಿ ಸಮುದಾಯದ ಹಿತ ಕಾಯಲಿದೆ ಎಂದು ತಿಳಿಸಿದರು.ಕೇಂದ್ರ ಉದ್ಘಾಟಿಸಿದ ಸುದರ್ಶನ್‌

ಜ್ಞಾನಜ್ಯೋತಿ ಯೋಗ ಅಧ್ಯಯನ ಕೇಂದ್ರದ ಶಾಖೆ ಹಾಗೂ ಎಸ್‌ಜಿಇಸಿಟಿ ಕೌಶಲ್ಯಾಭಿವೃದ್ದಿ ಕೇಂದ್ರವನ್ನು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಉದ್ಘಾಟಿಸಿದರು. ಜ್ಯೋತಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ನಾಗನಾಳ ಮಂಜುನಾಥ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ

ಜಿಲ್ಲಾ ನಿವೃತ್ತ ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್, ಪ್ರಗತಿಪರ ರೈತರ ಎಂ.ಆರ್.ನಾರಾಯಣ್, ಸಂಘದ ಟಿ.ವಿ.ರಾಮಕೃಷ್ಣ, ರಾಜ್ಯ ಪ್ರಶಸ್ತಿ ಪುರಸ್ಕಥ ಪ್ರಗತಿಪರ ರೈತ ಕುರುಟಹಳ್ಳಿ ರಾಧಾಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಕೃಷ್ಣಮೂರ್ತಿ, ಎಎಸ್‌ಐ ನಾಗರಾಜ್,ರಘು,ಟ್ರಸ್ಟ್ ವ್ಯವಸ್ಥಾಪಕ ಸುನಿಲ್ ಸಂದೀಪ್, ಎಸ್‌ಜಿಇಸಿಟಿ ಕಾರ್ಯದರ್ಶಿ ಕೆ.ಎನ್.ರಾಮಚಂದ್ರಪ್ಪ, ಮಹಿಳಾ ಅಧ್ಯಕ್ಷೆ ಎಂ.ಎಸ್.ಅನುರಾಧಕೃಷ್ಣಪ್ಪ, ಜಂಟಿ ಕಾರ್ಯದರ್ಶಿಗಳಾದ ಎಸ್.ಕೆ.ವೆಂಕಟರಾಮ್, ಹೆಚ್.ಸಿ.ಆಂಜಿನಪ್ಪ, ರಂಗಸ್ವಾಮಿ, ನಾರಾಯಣಪ್ಪ ಮತ್ತಿತರರಿದ್ದರು.