ಸಾರಾಂಶ
ಅಕ್ಕಪ್ಪಕದವರೊಂದಿಗೆ ಸೌಹಾರ್ದತೆಯಿಂದ ವರ್ತಿಸಿ, ಭಾವೈಕ್ಯತೆಯಿಂದ ಬಾಳುವ ಮೂಲಕ ಮಾನವೀಯತೆ ಎತ್ತಿಹಿಡಿಯಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಾಹಿತಿ ಸಿದ್ದಪ್ಪ ಬಿದರಿ ಹೇಳಿದರು.
ಕನ್ನಡಪ್ರಭ ವಾರ್ತೆ ಅಮೀನಗಡ
ಅಕ್ಕಪ್ಪಕದವರೊಂದಿಗೆ ಸೌಹಾರ್ದತೆಯಿಂದ ವರ್ತಿಸಿ, ಭಾವೈಕ್ಯತೆಯಿಂದ ಬಾಳುವ ಮೂಲಕ ಮಾನವೀಯತೆ ಎತ್ತಿಹಿಡಿಯಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಾಹಿತಿ ಸಿದ್ದಪ್ಪ ಬಿದರಿ ಹೇಳಿದರು.ಸಮೀಪದ ಹಿರೇಮಾಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಸಾಲಿನ 7ನೇ ವರ್ಗದ ಮಕ್ಕಳ ವಾರ್ಷಿಕ ಸ್ನೇಹ ಸಮ್ಮೇಳನ,ಬೀಳ್ಕೂಡುಗೆ ಹಾಗೂ ಮಕ್ಕಳ ಕಲರವ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿದ ಅವರು, ರಾಜಕೀಯ ಸಂದರ್ಭದಲ್ಲಿ ರಾಜಕೀಯಕ್ಕೆ ಒತ್ತು ಕೊಡಿ, ಊರ ಹಬ್ಬ, ಜಾತ್ರೆ, ಉತ್ಸವಗಳಲ್ಲಿ ಎಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಯಶಸ್ವಿಗೊಳಿಸಿ, ಭಾವೈಕ್ಯತೆಯ ಬದುಕೇ ಶಾಶ್ವತ. ಕಷ್ಟಗಳು ಬಂದಾಗ ಯಾವ ರಾಜಕೀಯ ನೇತಾರರು ನಿಮ್ಮ ಸಹಾಯಕ್ಕೆ ಬರುವುದಿಲ್ಲ. ಎಲ್ಲರೂ ಒಂದಾಗಿ ಭಾವೈಕ್ಯತೆಯಿಂದ ಬದುಕಿದರೆ ನೆರೆಹೊರೆಯವರೇ ತಕ್ಷಣಕ್ಕೆ ಸಹಾಯಕ್ಕೆ ಬರುವುದು. ಹಿರೇಮಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾವಖಾಸಗಿ ಶಾಲೆಗಳಿಗಿಂತಲೂ ಕಡಿಮೆ ಇಲ್ಲವೆಂಬಂತೆ ಕಾರ್ಯಕ್ರಮ ಆಯೋಜಿಸಿದೆ. ಬಡಮಕ್ಕಳು ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ, ಪ್ರತಿಭಾ ಅನಾವರಣಕ್ಕೆ ಅವಕಾಶ ಸಿಗುತ್ತಿರುವುದು ಸ್ವಾಗತಾರ್ಹ ಎಂದರು.
ಚನ್ನಬಸಪ್ಪ ಪೂಜಾರಿವ ಸಾನ್ನಿಧ್ಯ ಹಿಸಿದ್ದರು. ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಪ್ರವೀಣ ವಾಲೀಕಾರ ಅಧ್ಯಕ್ಷತೆ ವಹಿಸಿದ್ದರು. ಅಮೀನಗಡ ಪಿಎಸ್‌ಐ ಜ್ಯೋತಿ ವಾಲಿಕಾರ ಉದ್ಘಾಟಿಸಿದರು. ಸಮಾಜ ಸೇವಕರು, ದಾನಿಗಳನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ಗುರುರಾಜ ರಜಪೂತ ಪ್ರಾಸ್ತಾವಿಕ ಮಾತನಾಡಿದರು. ಹಿರೇಮಾಗಿ ಗ್ರಾಪಂ., ಅಧ್ಯಕ್ಷೆ ನೀಲವ್ವ ಹುಲ್ಲೀಕೇರಿ, ಸಿಆರ್‌ಸಿ. ಎಂ.ಎನ್ . ಹುಲ್ಯಾಳ, ಪಿ.ಎಚ್. ಪವಾರ, ನಾಗಣ್ಣ ಬಾದವಾಡಗಿ, ಸುರೇಶ ರಾಠೋಡ, ಶಂಕ್ರಪ್ಪ ಮೇಟಿ, ಮೌಲಾಸಾಬ ಚಪ್ಪರಬಂದ, ರಾಮನಗೌಡ ಕೆಸರಪೆಂಟಿ, ಗ್ರಾಮದ ಹಿರಿಯರು, ಮಕ್ಕಳ ಪಾಲಕರು ಇತರರು ಇದ್ದರು. ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಜರುಗಿದವು. ಮಹೇಶ ಮಾಶ್ಯಾಳ ಸ್ವಾಗತಿಸಿ, ಸಿ.ಟಿ.ಪೂಜಾರಿ ವಂದಿಸಿದರು.