ಕಳಪೆ ಕಾಮಗಾರಿ ವಿರುದ್ಧ ಕ್ರಮ: ಡಿಸಿ ತಾಕೀತು

| Published : Nov 30 2024, 12:47 AM IST

ಸಾರಾಂಶ

Action against poor workmanship: DC warning

ಸುರಪುರ: ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳು ಗುಣಮಟ್ಟದಿಂದ ನಡೆಯಬೇಕು, ಸಾರ್ವಜನಿರಿಗೆ ಉತ್ತಮ ಸಂಚಾರ ಒದಗಿಸಲು ಅಧಿಕಾರಿಗಳು ನೆರವಾಗಬೇಕು. ಕಳಪೆ ಕಾಮಗಾರಿ ಕಂಡು ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ. ಹೇಳಿದರು.

ಜೈನಾಪುರ ಕ್ಯಾಂಪಿನಲ್ಲಿ 35 ಲಕ್ಷ ರು.ಗಳು ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಡಿ ನಿರ್ಮಿತಿ ಕೇಂದ್ರದಿಂದ ಕೈಗೊಳ್ಳಲಾಗುತ್ತಿರುವ ಸಿಸಿ ರಸ್ತೆ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಸಿಸಿ ರಸ್ತೆ ನಿರ್ಮಿಸಿದರೆ ಸಾಲದು. ಉತ್ತಮ ಕ್ಯೂರಿಂಗ್ ಮಾಡಬೇಕು. ಕ್ರಿಯಾಯೋಜನೆಯಂತೆ ಕಾಮಗಾರಿ ಮಾಡಲಾಗಿದೆ ಎಂದರು. ನಿರ್ಮಿತಿ ಕೇಂದ್ರದ ಎಇಇ ರಾಮನಗೌಡ ಪೊಲೀಸ್ ಪಾಟೀಲ್, ಮುಖಂಡರಾದ ಎನ್. ಚಿಟ್ಟುಬಾಬು ರೆಡ್ಡಿ, ಸುಧೀರ ರಾಠೋಡ್, ರಮೇಶ ರಾಠೋಡ್, ಎಂ. ಭೀಮೇಶರಾವ, ಎನ್. ಶ್ರೀನಿವಾಸ, ಕೃಷ್ಣ ಚವ್ಹಾಣ ಸೇರಿದಂತೆ ಇದ್ದರು.

-----

29ವೈಡಿಆರ್11: ಸುರಪುರ ತಾಲೂಕಿನ ಜೈನಾಪುರ ಕ್ಯಾಂಪಿನಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಸಿಸಿ ರಸ್ತೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ. ಅವರು ಭೇಟಿ ನೀಡಿ ಪರಿಶೀಲಿಸಿದರು.