ಅನಧಿಕೃತ ರೆಸಾರ್ಟ್-ಹೋಂಸ್ಟೇ ವಿರುದ್ಧ ಕ್ರಮ

| Published : May 23 2024, 01:03 AM IST

ಸಾರಾಂಶ

ರಾಮನಗರ: ಜಿಲ್ಲೆಯಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ರೆಸಾರ್ಟ್ ಗಳು ಹಾಗೂ ಹೋಮ್ ಸ್ಟೇಗಳ ವಿರುದ್ಧ ಕಾನೂನು ಕ್ರಮ ವಹಿಸುವಂತೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿಗಳು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ರಾಮನಗರ: ಜಿಲ್ಲೆಯಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ರೆಸಾರ್ಟ್ ಗಳು ಹಾಗೂ ಹೋಮ್ ಸ್ಟೇಗಳ ವಿರುದ್ಧ ಕಾನೂನು ಕ್ರಮ ವಹಿಸುವಂತೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿಗಳು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ಅಕ್ರಮ ರೆಸಾರ್ಟ್ - ಹೋಂಸ್ಟೇಗಳಲ್ಲಿ ನಡೆಯುವತ್ತಿರುವ ಸಾವು - ನೋವು, ಅನೈತಿಕ ಚಟುವಟಿಕೆಗಳ ಕುರಿತು ಕನ್ನಡಪ್ರಭ ರಾಮನಗರ ಆವೃತ್ತಿಯಲ್ಲಿ ಮೇ 21ರಂದು ಅಕ್ರಮ

ರೆಸಾರ್ಟ್ - ಹೋಂ ಸ್ಟೇಗಳಿಗೆ ಕಡಿವಾಣ ಎಂದು ? ಎಂಬ ಶೀರ್ಷಿಕೆ ಅಡಿಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಅನಧಿಕೃತ ರೆಸಾರ್ಟ್ ಗಳು ಮತ್ತು ಹೋಂ ಸ್ಟೇಗಳಿಗೆ ನೋಟಿಸ್ ಜಾರಿ ಮಾಡಿ ಕ್ರಮ ವಹಿಸುವಂತೆ ಸೂಚಿಸಿದೆ.

ಈಗ ಜಿಲ್ಲೆಯಲ್ಲಿ 73ಕ್ಕೂ ಹೆಚ್ಚು ರೆಸಾರ್ಟ್ ಮತ್ತು ಹೋಂ ಸ್ಟೇಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಪ್ರವಾಸೋದ್ಯಮ ಇಲಾಖೆ ಮೂಲಕ ಜಿಲ್ಲೆಯಲ್ಲಿ 10 ರೆಸಾರ್ಟ್ ಗಳು ಹಾಗೂ 31 ಹೋಂ ಸ್ಟೇಗಳು ಮಾತ್ರ ಅನುಮತಿ ಪಡೆದಿವೆ. ಉಳಿದ 32 ಹೋಂ ಸ್ಟೇಗಳು ಅನಧಿಕೃತವಾಗಿವೆ.ಉಳಿದವುಗಳಲ್ಲಿ ಬಹುತೇಕರು ಸ್ಥಳೀಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾಟಾಚರಕ್ಕೆ ನಿರಪೇಕ್ಷಣಾ ಪತ್ರ (ಎನ್ ಒಸಿ) ಪಡೆದು ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದೆಲ್ಲವುದಕ್ಕೂ ನೋಟಿಸ್ ಜಾರಿ ಮಾಡಲಾಗುತ್ತಿದೆ.

ಆದೇಶದಲ್ಲಿ ಏನಿದೆ ? :

ಜಿಲ್ಲೆಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ರೆಸಾರ್ಟ್ ಮತ್ತು ಹೋಂ ಸ್ಟೇಗಳು ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಿದೆ. ಹಲವು ರೆಸಾರ್ಟ್ಸ್ , ಹೋಂ ಸ್ಟೇಗಳಲ್ಲಿ ಜಲ ಕ್ರೀಡೆಗಳು, ಸಾಹಸ ಕ್ರೀಡೆಗಳು ಹಾಗೂ ಇತರೆ ಮನರಂಜನಾ ಕಾರ್ಯಕ್ರಮಗಳನ್ನು ಸಂಬಂಧ ಪಟ್ಟ ಇಲಾಖೆ , ಸಂಸ್ಥೆ ಹಾಗೂ ಪ್ರಾಧಿಕಾರಗಳಿಂದ ಅನುಮತಿ ಪಡೆಯದೇ ಕಾರ್ಯಾಚರಣೆ ಮಾಡುತತಿರುವುದು ಕಂಡು ಬಂದಿದೆ. ಹೋಂ ಸ್ಟೇಗಳಿಗೆ ಅನುಮತಿ ನೀಡುವ ಇಲಾಖೆಯು ಪ್ರವಾಸೋದ್ಯಮ ಇಲಾಖೆಯಾಗಿದ್ದು, ಸ್ಥಳೀಯ ಸಂಸ್ಥೆಗಳಿಂದ ನಿರಪೇಕ್ಷಣಾ (ಎನ್ಒಸಿ) ಪತ್ರಗಳನ್ನು ಪಡೆದು ಅವೈಜ್ಞಾನಿಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಈ ಸಂಬಂಧ ಪ್ರವಾಸಿಗರಿಗೆ ಅನನುಕೂಲ ಹಾಗೂ ಅನೇಕ ಸಾವು ನೋವುಗಳು ಸಹ ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು - ಸಾರ್ವಜನಿಕರ ಹಿತದೃಷ್ಟಿಯಿಂದ ಅನಧಿಕೃತವಾಗಿ ಕಾರ್ಯಾಚರಣೆ ಮಾಡುತ್ತಿರುವ ಎಲ್ಲಾ ರೆಸಾರ್ಟ್ಸ್, ಹೋಂಸ್ಟೇಗಳಿಗೆ ನೋಟಿ ನೀಡಿ ಪ್ರವಾಸೋದ್ಯಮ ಇಲಾಖೆಯಿಂದ ಅನುಮಪತಿ ಪಡೆದ ನಂತರವಷ್ಟೇ

ಕಾರ್ಯಾಚರಣೆ ಮಾಡಲು ಹಾಗೂ ಅವಶ್ಯವಿರುವ ಎಲ್ಲಾ ದಾಖಲೆಗಳನ್ನು ಪರಿಸೀಲಿಸಿ ನಿಯಮಾನುಸಾರವಾಗಿ ಮುಂದಿನ ಕ್ರಮಕೈಗೊಳ್ಳುವಂತೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು ಸಮಿತಿ ಕಾರ್ಯದರ್ಶಿಗಳಾದ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದು ಆದೇಶ ಹೊರಡಿಸಿದ್ದಾರೆ.

ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅನುಮತಿ ಪಡೆಯಿರಿ :

ರೆಸಾರ್ಟ್ಸ್ , ಹೋಂ ಸ್ಟೇ ಹಾಗೂ ಇನ್ನಿತರೆ ಮನೋರಂಜನಾ ಪ್ರವಾಸಿ ಚಟುವಟಿಕೆಗಳು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಅನುಮೋದನೆ ಪಡೆಯಬೇಕಾಗಿದೆ. ಇಂತಹ ಪ್ರವಾಸಿ ಚಟುವಟಿಕೆಗಳನ್ನು ಕಾನೂನು ಬದ್ಧಗೊಳಿಸಲು ಉದ್ದೇಶಿಸಲಾಗಿದೆ. ಜಿಲ್ಲೆಯಲ್ಲಿ ರೆಸಾರ್ಟ್ಸ್, ಹೋಂಸ್ಟೇ, ಸಾಹಸ ಹಾಗೂ ಇನ್ನಿತರೆ ಮನೋರಂಜನಾ ಪ್ರವಾಸಿ ಚಟುವಟಿಕೆಗಳನ್ನು ನಡೆಸಲು ಇಚ್ಛಿಸುವ ಮಾಲೀಕರು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಮೂಲಕ ಆನ್ ಲೈನ್ ನಲ್ಲಿ ಸಂಬಂಧಿಸಿದ ಇಲಾಖೆಗಳಿಂದ ನಿರಪೇಕ್ಷಣಾ (ಎನ್ ಒಸಿ)ಪತ್ರ ಪಡೆದು ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಅನುಮೋದನೆ ಪಡೆಯುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಬಾಕ್ಸ್ ...........

ರೆಸಾರ್ಟ್ಸ್ - ಹೋಂಸ್ಟೇ ಮಾಲೀಕರು ಸಲ್ಲಿಸಬೇಕಾದ ದಾಖಲೆಗಳು?

-ಜಿಲ್ಲಾಧಿಕಾರಿಗಳಿಂದ ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನೆಗೊಂಡಿರುವ ಆದೇಶ ಪತ್ರ

-ಪೊಲೀಸ್ ಇಲಾಖೆಯಿಂದ ಪಡೆದಿರುವ ನಿರಪೇಕ್ಷಣಾ ಪತ್ರ

-ಅರಣ್ಯ ಇಲಾಖೆಯಿಂದ ಎಕೋ ಸೆನ್ಸ್ ಟೀವ್ ಜೋನ್ ವ್ಯಾಪ್ತಿಗೆ ಒಳಪಟ್ಟಿರುವ ಅಥವಾ ಒಳ ಪಡದಿರುವ ಬಗ್ಗೆ ಅನುಮತಿ ಪತ್ರ

-ಅಗ್ನಿ ಶಾಮಕದಳದಿಂದ ಪಡೆದ ನಿರಪೇಕ್ಷಣಾ ಪತ್ರ

-ನಗರಸಭೆ / ಪುರಸಭೆ / ಗ್ರಾಮ ಪಂಚಾಯಿತಿಯಿಂದ ಅನುಮತಿ ಪತ್ರ

-ವಾಣಿಜ್ಯ ತೆರಿಗೆ ಇಲಾಖೆಯಿಂದ ಪಡೆದಿರುವ ನೋಂದಣಿ ಪತ್ರ

-ಕರ್ನಾಟಕ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪಡೆದಿರುವ ಅನುಮತಿ ಪತ್ರ

-ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರದಿಂದ ಪಡೆದಿರುವ ಅನುಮತಿ ಪತ್ರ

-ಅಬಕಾರಿ ಇಲಾಖೆಯಿಂದ ಪಡೆದಿರುವ ಲೈಸನ್ಸ್ ಪ್ರತಿ

-ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ಪಡೆದಿರುವ ಅನುಮತಿ ಪತ್ರ (ಸಾಹಸ ಪ್ರವಾಸೋದ್ಯಮಕ್ಕೆ ಅನ್ವಯ)

-ರೆಸಾರ್ಟ್ಸ್ ನಲ್ಲಿ ಕನಿಷ್ಟ 20 ಕೊಠಡಿಗಳಿರುವ ಬಗ್ಗೆ ನಗರಸಭ/ಪುರಸಭೆ/ಗ್ರಾಮ ಪಂಚಾಯಿತಿಂದ ಅನುಮತಿ ಪತ್ರ

ಬಾಕ್ಸ್....

ಜಲ ಸಾಹಸ ಕ್ರೀಡೆಗೆ ಮಾಲೀಕರು ಸಲ್ಲಿಸಬೇಕಾದ ದಾಖಲೆಗಳು?-ಸಣ್ಣ ನೀರಾವರಿ ಇಲಾಖೆ

-ಪ್ರವಾಸೋದ್ಯಮ ಇಲಾಕೆ

-ಸ್ಥಳೀಯ ಸಂಸ್ಥೆಗಳು

-ನ್ಯಾನಲ್ ಅಡ್ವೆಂಚರ್ಸ್ ಫೌಂಡೇಶನ್ ನೋಂದಣಿ ಪ್ರಮಾಣ ಪತ್ರ

-ಜಲ ಕ್ರೀಡಾ ಉಪಕರಣಗಳ ಚಾಲಕರಿಗೆ ನೀಡುವ ಪ್ರಮಾಣ ಪತ್ರ

-ಜೀವ ರಕ್ಷಕರ ತರಬೇತಿ ಪ್ರಮಾಣ ಪತ್ರ

-ಎನ್ ಐಇಎಸ್ ಅತವಾ ಜನರಲ್ ತಮ್ಮಯ್ಯ ನ್ಯಾಷನಲ್ ಅಕಾಡೆಮಿಯಿಂದ ಅನುಮೋದನಾ ಪ್ರಮಾಣ ಪತ್ರ

-ಜಲ ಸಾಹಸ ಕ್ರೀಡೆಗಳನ್ನು ಆಯೋಜಿಸಲು ಬಂದರು ಇಲಾಖೆಯಿಂದ ಅನುಮೋದನಾ ಪ್ರಮಾಣ ಪತ್ರ

-ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಅಗ್ನಿಶಾಮಕ ದಳ ಇಲಾಖೆಯ ಎನ್‌ಒಸಿ

ಕೋಟ್ ............

ರಾಮನಗರ ಜಿಲ್ಲೆಯಲ್ಲಿ ಅಕ್ರಮವಾಗಿ ತಲೆ ಎತ್ತಿರುವ ರೆಸಾಟ್ಸ್ ಗಳು ಮತ್ತು ಹೋಂಸ್ಟೇಗಳಿಗೆ ನೋಟಿಸ್ ನೀಡುವ ಕಾರ್ಯ ಆರಂಭವಾಗಿದೆ. ದಾಖಲೆಗಳ ಕುರಿತು ಮಾಲೀಕರಲ್ಲಿ ತಿಳುವಳಿಕೆ ಇಲ್ಲದಿದ್ದರೆ ಪ್ರವಾಸೋದ್ಯಮ ಇಲಾಖೆಗೆ ಭೇಟಿ ನೀಡಿದಲ್ಲಿ ಮಾಹಿತಿ ಒದಗಿಸಿ ಸಹಕಾರ ನೀಡುತ್ತೇವೆ. ಆನಂತರವೂ ನಿರ್ಲಕ್ಷ್ಯ ತೋರಿದಲ್ಲಿ ಅಕ್ರಮ ರೆಸಾರ್ಟ್ಸ್ ಮತ್ತು ಹೋಂಸ್ಟೇಗಳಿಗೆ ನೋಟಿಸ್ ನೀಡಿ ಬೀಗ ಜಡಿಯುತ್ತೇವೆ.

-ರವಿ ಕುಮಾರ್, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ರಾಮನಗರ(21ನೇ ತಾರೀಖಿನ ಪುಟದಲ್ಲಿರುವ ಸ್ಟೋರಿ ಕಟಿಂಗ್‌ ಒಂದು ಹಾಕೊಳ್ಳಿ)

22ಕೆಆರ್ ಎಂಎನ್ 3,4,5.ಜೆಪಿಜಿ

3.ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ರೆಸಾರ್ಟ್‌ವೊಂದಕ್ಕೆ ಭೇಟಿ ನೀಡಿ ದಾಖಲೆ ಪರಿಶೀಲಿಸಿದರು.

4.ಜಿಲ್ಲಾಧಿಕಾರಿಗಳ ಆದೇಶ ಪ್ರತಿ.

5.ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್.