ಸಾರಾಂಶ
ಈ ಹಿಂದೆ ತಹಸೀಲ್ದಾರ್ ನೇತೃತ್ವದಲ್ಲಿ ವಿವಿಧ ಇಲಾಖೆ ಒಳಗೊಂಡಂತೆ ಟಾಸ್ಕ್ ಪೋರ್ಸ್ ಸಮಿತಿ ರಚಿಸಿ ತಾಲೂಕಿನ ಕಾಳೇನಹಳ್ಳಿ, ಮುಂಡುಗದೊರೆ, ಹಂಗರಹಳ್ಳಿ, ನೀಲನಕೊಪ್ಪಲು, ಚನ್ನನಕೆರೆ, ಜಕ್ಕನಹಳ್ಳಿ ಭಾಗದ 43 ಕ್ಕೂ ಹೆಚ್ಚು ಅಕ್ರಮ ಕಲ್ಲು ಕೋರೆ, 18 ಜಲ್ಲಿ ಕ್ರಷರ್‌ಗಳ್ನು ಸೀಜ್ ಮಾಡಿ ನಿಲ್ಲಿಸಲಾಗಿತ್ತು.
ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ
ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿ ಸದಸ್ಯರು ತಹಸೀಲ್ದಾರ್ ಚೇತನಾ ಯಾದವ್ ಅವರನ್ನು ಒತ್ತಾಯಿಸಿದರು.ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ರನ್ನು ಭೇಟಿ ಮಾಡಿದ ಸದಸ್ಯರು, ಈ ಹಿಂದೆ ತಹಸೀಲ್ದಾರ್ ನೇತೃತ್ವದಲ್ಲಿ ವಿವಿಧ ಇಲಾಖೆ ಒಳಗೊಂಡಂತೆ ಟಾಸ್ಕ್ ಪೋರ್ಸ್ ಸಮಿತಿ ರಚಿಸಿ ತಾಲೂಕಿನ ಕಾಳೇನಹಳ್ಳಿ, ಮುಂಡುಗದೊರೆ, ಹಂಗರಹಳ್ಳಿ, ನೀಲನಕೊಪ್ಪಲು, ಚನ್ನನಕೆರೆ, ಜಕ್ಕನಹಳ್ಳಿ ಭಾಗದ 43 ಕ್ಕೂ ಹೆಚ್ಚು ಅಕ್ರಮ ಕಲ್ಲು ಕೋರೆ, 18 ಜಲ್ಲಿ ಕ್ರಷರ್‌ಗಳ್ನು ಸೀಜ್ ಮಾಡಿ ನಿಲ್ಲಿಸಲಾಗಿತ್ತು ಎಂದರು.
ಆದರೆ, ಕೇವಲ 3 ಕೋರೆ ಮತ್ತು 2 ಜಲ್ಲಿ ಕ್ರಷರ್ ಮಾಲೀಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಉಳಿದ 16 ಜಲ್ಲಿ ಕ್ರಷರ್, 40 ಕಲ್ಲು ಕೋರೆ ಮಾಲೀಕರ ಮೇಲೆ ಪ್ರಕರಣ ದಾಖಲಿಸಬೇಕು. ಜೊತೆಗೆ ಅಕ್ರಮ ಕ್ರಷರ್ ಮಾಲೀಕರಿಂದ ಸರ್ಕಾರಕ್ಕೆ ಬರಬೇಕಾಗಿದ್ದ ಕೋಟ್ಯಾಂತರ ರು. ರಾಜಧನ ನಷ್ಟವಾಗಿದೆ. ಅವರಿಂದ ದಂಡ ವಿಧಿಸಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.ಸರ್ಕಾರ ವ್ಯವಸಾಯ ಉದ್ದೇಶಕ್ಕೆ ರೈತರಿಗೆ ಮಂಜೂರು ಮಾಡಿರುವ ನೂರಾರು ಎಕರೆ ಜಮೀನನ್ನು ಕ್ರಷರ್ ಮಾಲೀಕರು ಬೊಡ್ರಸ್ ಕಲ್ಲಿಗಾಗಿ ಗುತ್ತಿಗೆ ಪಡೆದು, ಮಣ್ಣು ಬಗೆದು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಈಗಾಗಲೇ 150 ರಿಂದ 200 ಅಡಿ ಆಳದವರೆಗೆ ಕಲ್ಲನ್ನು ತೆಗೆದು ಕಂದಕಗಳಾಗಿವೆ. ಇದು ಬೆಳೆ ಬೆಳೆಯಲು ಯೋಗ್ಯವಾಗಿಲ್ಲ. ಜಮೀನು ದುರಸ್ತು, ಪೋಡಿ ಸಹ ಆಗಿಲ್ಲ. ಹಾಗಾಗಿ ಮಂಜೂರಾತಿ ವಜಾಗೊಳಿಸಿ ಮುಟ್ಟುಗೋಲು ಹಾಕಿಕೊಳ್ಳುವಂತೆ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮುಖಂಡರಾದ ಮಂಜೇಶ್‌ಗೌಡ, ನಾಗೇಂದ್ರಸ್ವಾಮಿ, ಗಂಜಾಂ ರವಿಚಂದ್ರ, ಮಹೇಶ್‌ಕುಮಾರ್, ತೇಜಸ್, ಕೂಡಲಕುಪ್ಪೆ ತಮ್ಮಣ್ಣ, ಡಿ.ಎಸ್ ಚಂದ್ರಶೇಖರ್, ಟಿ.ಎಂ ಹೊಸೂರು ರವೀಂದ್ರ, ಜಕ್ಕನಹಳ್ಳಿ ಜಯರಾಂ ಸೇರಿದಂತೆ ಇತರರು ಇದ್ದರು.;Resize=(128,128))
;Resize=(128,128))
;Resize=(128,128))