ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಸರ್ಕಾರ ಗ್ಯಾರಂಟಿ ಯೋಜನೆಗಳಿಂದಾಗಿ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗದೆ ಅಭಿವೃದ್ಧಿ ಕುಂಠಿತವಾಗಿತ್ತು. ಈಗ ಅನುದಾನ ಬಿಡುಗಡೆ ಮಾಡುತ್ತಿದ್ದು ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ತಾಲೂಕಿನ ಅಂದಾನಿಗೌಡನಕೊಪ್ಪಲು ಗ್ರಾಮದಲ್ಲಿ ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮದ ಸಮಸ್ಯೆಯನ್ನು ಗ್ರಾಮಸ್ಥರು ಚುನಾವಣೆ ವೇಳೆ ನನ್ನ ಗಮನಕ್ಕೆ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ತಾಲೂಕಿನ ಗಡಿಭಾಗದ ಬಳಘಟ್ಟ ಹಾಗೂ ದುದ್ದ ಹೋಬಳಿಯ ಜಿ.ಮಲ್ಲಿಗೆರೆ ಗ್ರಾಪಂಗಳು ಹಿಂದುಳಿದಿರುವುದು ನನಗೆ ಅರಿವಿಗಿದೆ. ಈ ಭಾಗಗಳಲ್ಲಿ ಹೆಚ್ಚಿನ ಮಟ್ಟದ ಅಭಿವೃದ್ಧಿಯಾಗಬೇಕಿದೆ. ಈ ಬಗ್ಗೆ ಕ್ರಮವಹಿಸಲಾಗುವುದು ಎಂದರು.ಡೇರಿ ಹಾಗೂ ಕೃಷಿಪತ್ತಿನ ಸಹಕಾರ ಸಂಘಗಳು ರೈತರ ಎರಡು ಕಣ್ಣುಗಳಿದ್ದಂತೆ. ಅವು ಅಭಿವೃದ್ಧಿ ಹೊಂದಿದರೆ ಮಾತ್ರ ಹಳ್ಳಿಗಳ ಅಭಿವೃದ್ಧಿ ಸಾಧ್ಯ. ಹಾಗಾಗಿ ಸಹಕಾರ ಸಂಘಗಳಲ್ಲಿ ರಾಜಕೀಯ ಮಾಡದೆ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
ಮನ್ಮುಲ್ ನಿರ್ದೇಶಕ ಕೆ.ರಾಮಚಂದ್ರು ಮಾತನಾಡಿ, ನಾನು ನಿರ್ದೇಶಕನಾದ ಬಳಿಕ ತಾಲೂಕಿನಲ್ಲಿ ಸ್ವಂತ ಕಟ್ಟಡ ಇಲ್ಲದೆ ಡೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣ, ಡೇರಿ ಇಲ್ಲದ ಗ್ರಾಮಗಳಿಗೆ ಹೊಸ ಡೇರಿಗಳ ಮಂಜೂರು ಮಾಡಿ ಅಭಿವೃದ್ಧಿಪಡಿಸುವ ಕೆಲಸ ಮಾಡಿದ್ದೇನೆ ಎಂದರು.ಮೇಲುಕೋಟೆ ಡೇರಿ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯಿತು. ಆದರೂ ಸಹ ಹಾಲು ಉತ್ಪಾದಕರು ನನ್ನನ್ನು ಗೆಲ್ಲಿಸಿ ನಿರ್ದೇಶಕನಾಗಿ ಆಯ್ಕೆ ಮಾಡಿದ್ದಾರೆ. ಅಲ್ಲಿನ ಮತದಾರರಿಗೆ ನಾನು ಚಿರಋಣಿಯಾಗಿದ್ದೇನೆ ಎಂದು ಹೇಳಿದರು.
ಕನಗೋನಹಳ್ಳಿ ಪರಮೇಶ್ ಗ್ರಾಮವನ್ನು ಅಭಿವೃದ್ದಿಪಡಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು. ಇದಕ್ಕೂ ಮುನ್ನಕ್ಕೂ ಮುನ್ನ ಜಿಪಂ ಮಾಜಿ ಸದಸ್ಯ, ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು ಭೇಟಿ ನೀಡಿದ್ದರು. ಡೇರಿ ಅಧ್ಯಕ್ಷೆ ಜಯಲಕ್ಷ್ಮಮ್ಮ, ನಿವೃತ್ತ ಶಿಕ್ಷಕ ವೆಂಕಟರಾಮೇಗೌಡ, ಮಾರ್ಗವಿಸ್ತಾರ್ಣಾಧಿಕಾರಿಗಳಾದ ಪ್ರಜ್ವಲ್‌ಗೌಡ, ನಿತಿನ್, ತಾಪಂ ಮಾಜಿ ಉಪಾಧ್ಯಕ್ಷ ಶ್ಯಾಮಣ್ಣ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಯೋಜನಾಧಿಕಾರಿ ಸರೋಜ, ಗ್ರಾಪಂ ಅಧ್ಯಕ್ಷೆ ಜ್ಯೋತಿ ಮಹೇಶ್, ಉಪಾಧ್ಯಕ್ಷೆ ಮಂಜುಳ, ನಿರ್ದೇಶಕರಾದ ನಿಂಗಮ್ಮ, ವಸಂತ, ಪ್ರೇಮ, ಶಾರದಮ್ಮ, ಭಾಗ್ಯಮ್ಮ, ಕಾವ್ಯ, ಗೌರಮ್ಮ, ಕಾರ್‍ಯದರ್ಶಿ ನಾಗವೇಣಿ, ಸಿಬ್ಬಂದಿ ಕವಿತ ಸೇರಿದಂತೆ ಹಲವರು ಹಾಜರಿದ್ದರು.ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗುದ್ದಲಿ ಪೂಜೆಪಾಂಡವಪುರ:
ಲೋಕೋಪಯೋಗಿ ಇಲಾಖೆ ಯೋಜನೆಯ ₹3.50 ಕೋಟಿ ವೆಚ್ಚದಲ್ಲಿ ತಾಲೂಕಿನ ಕಾಡೇನಹಳ್ಳಿಯಿಂದ ಕದಲಗೆರೆ ಮಾರ್ಗವಾಗಿ ದೊಡ್ಡಿಘಟ್ಟ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದರು.ಬಳಿಕ ಮಾತನಾಡಿದ ಅವರು, ರಸ್ತೆ ಹಿನ್ನೆಲೆಯಲ್ಲಿ ಅಭಿವೃದ್ಧಿಪಡಿಸಲು ಗುದ್ದಿಲಿ ಪೂಜೆ ನೆರವೇರಿಸಲಾಗಿದೆ. ಬಳಘಟ್ಟ ಏತ ನೀರಾವರಿ ಯೋಜನೆಯಡಿ ಕೈತಪ್ಪಿದ್ದ ಗ್ರಾಮಗಳ ಕೆರೆ ತುಂಬಿಸುವ ಯೋಜನೆಗೆ ₹17 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ. ಕದಲಗೆರೆಯ ಹೊರಕೆರೆಯಿಂದ ಕಾಡೇನಹಳ್ಳಿ, ದೇವರಹಳ್ಳಿ, ಗೌಡಗೆರೆ, ದೊಡ್ಡಿಘಟ್ಟ, ಗರುಡಾಪುರ ಗ್ರಾಮಗಳ ಕೆರೆ ತುಂಬಿಸುವ ಯೋಜನೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದರು.ಈ ವೇಳೆ ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ಜಕ್ಕನಹಳ್ಳಿ ಗ್ರಾಪಂ ಅಧ್ಯಕ್ಷೆ ಮಂಜುಳ, ಉಪಾಧ್ಯಕ್ಷೆ ನಾಗಮ್ಮ, ಸದಸ್ಯರಾದ ಗೀತಾ, ಸ್ವಾಮೀಗೌಡ, ಶಂಕರ್, ತಾಪಂ ಮಾಜಿ ಸದಸ್ಯ ರಾಮೇಗೌಡ, ದೊಡ್ಡಿಘಟ್ಟ ಸುರೇಶ್, ದೇವರಾಜು, ಸತೀಶ್, ಎಇಇ ಆದರ್ಶ ಸೇರಿದಂತೆ ಹಲವರು ಹಾಜರಿದ್ದರು.