ಸಾರಾಂಶ
-ಕಲಬುರಗಿ ಮಾಲಿಕ್ ಜ್ಯುವೆಲ್ರಿ ಶಾಪ್ ದರೋಡೆ ಪ್ರಕರಣ । ಖದೀಮರ ಬಂಧನಕ್ಕೆ ಐದು ವಿಶೇಷ ತಂಡ ರಚನೆ । ಶೀಘ್ರ ಬಂಧಿಸುವುದಾಗಿ ಪೊಲೀಸ್ ಆಯುಕ್ತ ಶಂಕರಪ್ಪ ಭರವಸೆ
------ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿಕಲಬುರಗಿಯಲ್ಲಿ ಮಾಲಿಕ್ ಜ್ಯುವೆಲ್ರಿ ಶಾಪ್ ದರೋಡೆ ಪ್ರಕರಣ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.
ಅದರಲ್ಲೂ ಸಾರಾಫ್ ಬಜಾರ್ ಚಿನ್ನಭರಣ ವರ್ತಕರಂತೂ ಈ ಘಟನೆಗೆ ಭಯಭೀತರಾಗಿದ್ದಾರೆ.ಹಾಡಹಗಲೇ ಸಂಭವಿಸಿರುವ ದರೋಡೆ ಪ್ರಕರಣದಲ್ಲಿ ಖದಿಮರು ಗನ್ ಬಳಸಿ ಜೀವ ಬೆದರಿಕೆ ಹಾಕಿ ಎರಡುವರೇ ಕೆ.ಜಿ ಚಿನ್ನ ದೋಚಿದ್ದರು.
ದರೋಡೆ ನಡೆದು 24ಗಂಟೆ ಕಳೆದರೂ ಆರೋಪಿಗಳ ಸುಳಿವಿಲ್ಲ, ಇಡೀ ಪ್ರಸಂಗ ಸಿಸಿಟಿವಿ ಸೆರೆಯಾಗಿದ್ದು ಖಾದಿಮರು ಬಂಗಾರದ ಗಂಟು ಹಿಡಿದುಕೊಂಡು ಹಾಗೆಯೇ ನಡೆದುಕೊಂಡು, ಬಸ್ ಹತ್ತಿ ಪರಾರಿಯಾಗಿರೋದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸ್ಪಷ್ಟ ಸೆರೆಯಾಗಿದೆ.ನಿನ್ನೆ ಮಧ್ಯಾಹ್ನ ಬರೋಬ್ಬರಿ 12-40ರ ವೇಳೆ ಕಲಬುರಗಿಯ ಮಾಲೀಕ್ ಜ್ಯವೆಲರಿ ಶಾಪನಲ್ಲಿ ದರೋಡೆ ನಡೆದಿತ್ತು.
ಮಾಲೀಕ್ ಜ್ಯುವೆಲರಿ ಶಾಪ್ ಮಾಲೀಕನ ತಲೆಗೆ ಬಂದೂಕು ಇಟ್ಟು ಕೈ ಕಾಲು ಕಟ್ಟಿ, ಬಾಯಿಗೆ ಟೇಪ್ ಮೆತ್ತಿ ಚಿನ್ನಾಭರಣ ದೋಚಿ ಖಾದಿಮರು ಪರಾರಿಯಾಗಿದ್ದರು.ಇಡೀ ದರೋಡೆ ಪ್ರಸಂಗದಲ್ಲಿ ಕಳ್ಳರ ಚಲನ ವಲನಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ನಡೆದು ಹೋದ ದರೋಡೆಕೋರರು: ದರೋಡೆಕೋರರು ದರೋಡೆಯ ಬಳಿಕ ಅಂಗಡಿಯಿಂದ ಬಿಂದಾಸಾಗಿ ನಡೆದುಕೊಂಡು ಹೋಗಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಪ್ರಕಾರ ಸರಾಫ್ ಬಜಾರ್ ನಿಂದ ಚಪ್ಪಲ್ ಬಜಾರ್, ಸುಪರ್ ಮಾರ್ಕೆಟ್ ಮೂಲಕ ಕಲಬುರಗಿ ತಹಸೀಲ್ದಾರ್ ಕಚೇರಿಯವರೆಗೆ ನಡೆದುಕೊಂಡು ಹೋಗಿರುವ ದೃಶ್ಯಗಳು ದಾಖಲಾಗಿವೆ.....ಬಾಕ್ಸ್........
ತಹಸೀಲ್ದಾರ್ ಕಚೇರಿ ಬಳಿ ಆಟೋ ಹತ್ತಿದ ದರೋಡೆಕೋರರು!ದರೋಡೆಕೋರರು ಜ್ಯುವೆಲರಿ ಶಾಪ್ ನಿಂದ ಕಲಬುರಗಿ ತಹಸೀಲ್ದಾರ್ ಕಚೇರಿವರೆಗೂ ನಡೆದುಕೊಂಡೆ ಬಂದಿರುವ ಖಾದಿಮರು ನಂತರ ತಹಸೀಲ್ದಾರ್ ಆಫೀಸ್ ಬಳಿ ಆಟೋ ಹತ್ತಿ ಕೇಂದ್ರ ಬಸ್ ನಿಲ್ದಾಣದ ಕಡೆಗೆ ದರೋಡೆಕೋರರು ಹೋಗಿರೋ ದೃಶ್ಯಗಳು ಸಿಸಿಟಿವಿ ಸೆರೆ ಹಿಡಿದಿದೆ.
ಆಟೋದಲ್ಲಿ ಬಸ್ ನಿಲ್ದಾಣದವರೆಗೂ ತೆರಳಿ ಬಸ್ ನಿಲ್ದಾಣದ ಒಳಗೆ ಹೋಗಿರುವ ದೃಶ್ಯಗಳು ಸಿಸಿಟಿವಿ ಯಲ್ಲಿ ಸ್ಪಷ್ಟವಾಗಿವೆ.ಬಂಗಾರ ಇದ್ದ ಬ್ಯಾಗ್ ಜೊತೆ ಕಲಬುರಗಿಯ ಕೇಂದ್ರೀಯ ಬಸ್ ನಿಲ್ದಾಣದಿಂದ ಬಸ್ ಹತ್ತಿರುವ ದರೋಡೆಕೋರರು ಮುಂದೆ ಹೋದರೆಲ್ಲಿಗೆ? ಎಂಬುದು ನಿಗೂಢವಾಗಿದೆ. ದರೋಡೆ ನಡೆದ ರೀತಿ ನೋಡಿದ್ರೆ ಈ ತಂಡ ಅಂತಾರಾಜ್ಯ ದರೋಡೆ ಮಾಡುತ್ತಿರುವ ತಂಡ ಆಗಿರಬಹುದು ಎಂದು ಸ್ಥಳೀಯ ಪೊಲೀಸ್‌ರು ಶಂಕಿಸಿದ್ದಾರೆ.
----..ಬಾಕ್ಸ್....
ಜ್ಯುವೆಲ್ಲರಿ ಮಾಲೀಕನ ಮೊಬೈಲ್ ಸ್ವಿಚ್ ಆಫ್!ಅಪಾರ ಚಿನ್ನಾಭರಣ ದೋಚಿದ ದರೋಡೆಕೋರರು ಜ್ಯೂವೆಲರಿ ಶಾಪ್ ಮಾಲೀಕನ ಮೊಬೈಲ್ ಸಹ ಕಿತ್ತುಕೊಂಡು ಹೋಗಿದ್ದಾರೆ. ಬಸ್ ನಿಲ್ದಾಣದ ಬಳಿ ಆ ಮೊಬೈಲ್ ಸ್ವಿಚ್ ಆಫ್ ಆಗಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಅಲ್ಲಿಂದ ದರೋಡೆಕೋರರು ಎಲ್ಲಿಗೆ ತೆರಳಿದರು ಎನ್ನುವ ಬಗ್ಗೆ ಇಲ್ಲಿಯವರೆಗೆ ಸುಳಿವಿಲ್ಲ.
ದರೋಡೆಕೋರರು ಎಲ್ಲಿಂದ ಎಲ್ಲಿಗೆ ಹೋದ್ರು ಯಾವ ರೀತಿ ಪರಾರಿಯಾದ್ರು ಎನ್ನವುದು ರಹಸ್ಯದ ಸಂಗತಿಯಾಗಿದೆ.-----
....ಬಾಕ್ಸ್....ಸಿಸಿಟಿವಿ ಡಿವಿಆರ್ ಸ್ವಿಚ್ ಆಫ್!
ಕಲಬುರಗಿ ನಗರದಲ್ಲಿ ಹಾಡಹಗಲೆ ಚಿನ್ನದ ಅಂಗಡಿ ದರೋಡೆ ಪ್ರಕರಣದಲ್ಲಿ ದರೋಡೆ ನಡೆದ ಚಿನ್ನಂದಗಡಿ ಪರಿಶೀಲನೆ ನಡೆಸಿದ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ ಶರಣಪ್ಪ, ಜುವೆಲರಿ ಅಂಗಡಿಗೆ ದರೋಡೆಕೋರರು ನಿನ್ನೆ ಮಧ್ಯಾಹ್ನ 12.40 ನಾಲ್ಕು ಜನ ಸಾಮಾನ್ಯರಂತೆ ಬಂದಿದ್ದಾರೆ.ನೇರವಾಗಿ ಜುವೆಲರಿ ಅಂಗಡಿಗೆ ನುಗ್ಗಿದ್ದಾರೆ. ಏಕಾಏಕಿ ಮಾಲೀಕನಿಗೆ ರಿವೋಲ್ವರ್ ತೋರಿಸಿ ಹಗ್ಗದಿಂದ ಕೈಕಾಲು ಕಟ್ಟಿದ್ದಾರೆ. ಬಳಿಕ ಗನ್ ತೋರಿಸಿ 2 ಕೆಜಿಗೂ ಅಧಿಕ ಚಿನ್ನ ದರೋಡೆ ಮಾಡಿದಾರೆ. ಅಂಗಡಿಯಲ್ಲಿನ ಸಿಸಿ ಟಿವಿ ಡಿವಿಆರ್ ಆಫ್ ಮಾಡಿ ದರೋಡೆ ನಡೆಸಲಾಗಿದೆ.
-----