ಸಾರಾಂಶ
ಕನ್ನಡ ಪ್ರಭವಾರ್ತೆ ಮಾಲೂರು
ಪಟ್ಟಣದಲ್ಲಿ ಪುರಸಭೆಯ 300 ಕೋಟಿ ರು.ಗಳಿಗೂ ಹೆಚ್ಚು ಮೌಲ್ಯದ ೩೨೯ ಆಸ್ತಿಗಳನ್ನು ಅಕ್ರಮವಾಗಿ ಪರಬಾರೆ ಮಾಡಿರುವುದನ್ನು ಪತ್ತೆ ಹಚ್ಚಲಾಗಿದ್ದು, ಖಾತೆಯಾಗಿರುವ ಸಿಎ ಸೈಟ್‌ಗಳು ಹಾಗೂ ಪುರಸಭೆ ಆಸ್ತಿಯನ್ನು ಶೀಘ್ರದಲ್ಲೇ ವಶಪಡಿಸಿಕೊಳ್ಳಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಅವರು ಇಲ್ಲಿನ ಪುರಸಭೆಯಲ್ಲಿ ಕುಂದುಕೊರತೆಯ ಸಭೆಯಲ್ಲಿ ಮಾತನಾಡಿ, ಇದುವೆರೆಗೂ ಪಟ್ಟಣದಲ್ಲಿ ೩೨೯ ಸಿ.ಎ.ನಿವೇಶನಗಳನ್ನು ಗುರುತಿಸಲಾಗಿದ್ದು, ಇದೇ ತಿಂಗಳ ೨೦ ರಂದು ನಡೆಯಲಿರುವ ಪುರಸಭೆಯ ಸಭೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ವರದಿ ಸಲ್ಲಿಕೆಗೆ ಸೂಚನೆಈಗಾಗಲೇ ೧೭೩ ಅಕ್ರಮ ಆಸ್ತಿಯ ಅಕ್ರಮದಾರ ಹೆಸರುಗಳನ್ನು ಪತ್ತೆ ಹಚ್ಚಲಾಗಿದ್ದು ,ಉಳಿದ ಅಕ್ರಮದಾರರ ಹೆಸರುಗಳು ಸೇರಿದಂತೆ ಅಕ್ರಮ ಹೇಗೆ ನಡೆದಿದೆ ಎಂಬ ಬಗ್ಗೆ ವರದಿಯನ್ನು ಶನಿವಾರ ನಡೆಯುವ ಸಭೆಯಲ್ಲಿ ನೀಡುವಂತೆ ಅಧಿಕಾರಿಗಳಿಗೆ ಖಡಕ್ ಆದೇಶ ಮಾಡಲಾಗಿದೆ ಎಂದರು.
ಇದಲ್ಲದೇ ಪಟ್ಟಣದಲ್ಲಿರುವ ರ‍್ಕಾರಿ ರೆವಿನ್ಯೊ ಜಮೀನುಗಳು ಅಕ್ರಮವಾಗಿ ಖಾತೆ ಮಾಡಿರುವುದನ್ನು ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದು ,ಅಕ್ರಮ ಖಾತೆಯನ್ನು ರದ್ದುಗೊಳಿಸುವ ಜತೆಯಲ್ಲಿ ಅ ಅಕ್ರಮ ಜಾಗಗಳನ್ನು ಹರಾಜು ಮಾಡಲು ಅವಕಾಶ ನೀಡುವಂತೆ ಅಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಇಲ್ಲಿನ ಸಭೆಯ ಒಕ್ಕೂರಲಿನ ತರ‍್ಮಾನದ ನಡುವಳಿಕೆ ಹಾಗೂ ವರದಿಯನ್ನು ಕಳುಹಿಸಲಾಗುವುದು ಎಂದರು.ಪುರಸಭೆಗೆ ನೂರಾರು ಕೋಟಿ ಆದಾಯ
ಇದರಿಂದ ನೂರಾರು ಕೋಟಿ ಅದಾಯ ಪುರಸಭೆಗೆ ಹರಿದು ಬರಲಿದ್ದು, ಪಟ್ಟಣದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳೂಡನೆ ಚರ್ಚಿಸಿದ್ದು, ಅಧಿಕಾರಿಗಳೂಡನೆ ಮಾತನಾಡಿ ಸಕಾರಾತ್ಮಕ ತಾರ್ಮಾನ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದರು.ಪಟ್ಟಣದಲ್ಲಿ ನಿಗದಿ ಪಡಿಸಿರುವುದಕ್ಕಿಂತ ಹೆಚ್ಚಿನ ಅಂತಸ್ತು ಕಟ್ಟಿರುವ ಕಟ್ಟಡವನ್ನು ಗುರುತಿಸಿ ದಂಡ ವಿಧಿಸಲು ಹಿಂಜರಿಯಬಾರದೆಂದು ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ವಸತಿ ಪ್ರದೇಶದಲ್ಲಿ ವಾಣಿಜ್ಯ ಮಳಿಗೆ ತೆರೆಯಲು ಅವಕಾಶ ನೀಡಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಇಲ್ಲಿನ ಪುರಸಭೆ ಸಂಪನ್ಮೂಲ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ವಿಫಲವಾಗಿದೆ. ಕೆ.ಐ.ಡಿ.ಬಿ.ಯು ಇತ್ತಿಚೆಗೆ ಕೈಗಾರಿಕಾ ವಲಯದಿಂದ ಸಂಗ್ರಹವಾಗುತ್ತಿದ್ದ ಅದಾಯವನ್ನು ಪಂಚಾಯ್ತಿ ಗೆ ಶೇ.೩೦ ಹಾಗೂ ಉಳಿದ ಶೇ.೭೦ ರಷ್ಟು ಹಣ ಕೆಐಡಿಬಿಗೆ ಎಂದು ತೀರ್ಮಾನಿಸಿ ಒಪ್ಪಿಗೆಗಾಗಿ ತಾವು ಸದಸ್ಯನಾಗಿರುವ ಸದನ ಸಮಿತಿಗೆ ಕಳುಹಿಸಿದ್ದರು. ಆದರೆ ಅಲ್ಲಿ ತಾವು ತೀವ್ರ ಅಕ್ಷೇಪ ವ್ಯಕ್ತಪಡಿಸಿದ ಕಾರಣ ಸಮಿತಿಯು ಶೇ.೫೦: ೫೦ ಅನುಪಾತ ಮಾಡಿ ಆದೇಶಿಸಿತು. ಇದರಿಂದ ಪಂಚಾಯ್ತಿ ,ಪುರಸಭೆಗಳ ಅದಾಯ ಹೆಚ್ಚಾಗಲಿದೆ ಎಂದರು.
ಪ್ರಾಧಿಕಾರದ ಆದಾಯ ಹೆಚ್ಚಳಮಾಲೂರು ಪ್ರಾಧಿಕಾರಕ್ಕೆ ಪಟ್ಟಣ ಸೇರಿದಂತೆ ಕಸಬಾ ಹಾಗೂ ಲಕ್ಕೂರು ಹೋಬಳಿಯ ಶೇ.೮೦ ರಷ್ಟು ಪ್ರದೇಶ ಮಾತ್ರ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುತ್ತಿದ್ದು, ಈಗ ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ನಂತರ ತಾಲೂಕಿನ ನಾಲ್ಕು ಹೋಬಳಿಗಳನ್ನು ಮಾಲೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಿಸಲು ಸಕಾರತ್ಮಕವಾಗಿ ಸ್ಪಂದಿಸಿದೆ. ಇದರಿಂದ ಪ್ರಾಧಿಕಾರದ ಅದಾಯ ನಾಲ್ಕು ಪಟು ಹೆಚ್ಚಾಗಲಿದೆ ಎಂದರು.ಪಕ್ಷಾತೀತ ಬೆಂಬಲ ನೀಡಿ
ತಾಲೂಕಿನ ಯಾವೂದೇ ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರದಿಂದ ನೆರವು ನಿರೀಕ್ಷಿಸದೆ ಚಾಲನೆ ನೀಡಬಹುದಾಗಿದೆ. ಪುರಸಭೆ ಸದಸ್ಯರುಗಳು ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಶನಿವಾರ ನಡೆಯುವ ಸಭೆಯಲ್ಲಿ ಮಾತನಾಡಬೇಕೆ ಹೊರತು ರಾಜಕೀಯ ಉದ್ದೇಶದಿಂದ ಸಭೆಯನ್ನು ಹಾಳುಗೆಡಬಾರದು. ಪಕ್ಷಾತೀತವಾಗಿ ಪಟ್ಟಣವನ್ನು ಅಭಿವೃದ್ಧಿಪಡಿಸಲು ಎಲ್ಲರೂ ಕೈ ಜೋಡಿಸಿ ಎಂದು ಸದಸ್ಯರಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಕೃಷ್ಣಪ್ಪ, ಪುರಸಭೆ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್, ನವೀನ್ ಚಂದ್ರ, ಪ್ರಾಧಿಕಾರ ಅಧ್ಯಕ್ಷ ನಯೀಮ್, ಕೃಷ್ಣಪ್ಪ, ಇನ್ಸ್‌ಪೆಕ್ಟರ್ ವಸಂತ್ ಕುಮಾರ್, ಮಂಜುನಾಥ್ ಇನ್ನಿತರರು ಇದ್ದರು.