ಸರ್ಕಾರಿ ಯೋಜನೆ ಮನೆ ಬಾಗಿಲಿಗೆ ತಲುಪಿಸಲು ಕ್ರಮ: ಅಂಬಿಕಾ ಎಂ.ಹುಲಿನಾಯ್ಕರ್‌

| Published : Oct 27 2024, 02:05 AM IST

ಸರ್ಕಾರಿ ಯೋಜನೆ ಮನೆ ಬಾಗಿಲಿಗೆ ತಲುಪಿಸಲು ಕ್ರಮ: ಅಂಬಿಕಾ ಎಂ.ಹುಲಿನಾಯ್ಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಜನರ ಎಲ್ಲಾ ಭಾಗದವರಿಗೂ ಒಂದು ಆರೋಗ್ಯ ಸೇವೆ ನೀಡುವ ಅವಕಾಶ ಕಲ್ಟಿಸಲಾಗಿದೆ ಎಂದು ಶ್ರೀದೇವಿ ಚಾರಿಟಬಲ್ ಟ್ರಸ್ಟಿ ಅಂಬಿಕಾ ಎಂ ಹುಲಿನಾಯ್ಕರ್‌ ತಿಳಿಸಿದರು. ತುಮಕೂರಿನಲ್ಲಿ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜ ಅಭಿವೃದ್ಧಿಗೆ ಆದ್ಯತೆ । ಕುಟುಂಬ ದತ್ತು ಸ್ವೀಕಾರ ಕಾರ್ಯಕ್ರಮಕನ್ನಡಪ್ರಭ ವಾರ್ತೆ ತುಮಕೂರುಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಜನರ ಎಲ್ಲಾ ಭಾಗದವರಿಗೂ ಒಂದು ಆರೋಗ್ಯ ಸೇವೆ ನೀಡುವ ಅವಕಾಶ ಕಲ್ಟಿಸಲಾಗಿದೆ ಎಂದು ಶ್ರೀದೇವಿ ಚಾರಿಟಬಲ್ ಟ್ರಸ್ಟಿ ಅಂಬಿಕಾ ಎಂ ಹುಲಿನಾಯ್ಕರ್‌ ತಿಳಿಸಿದರು.ತಾಲೂಕಿನ ನರಸೀಪುರ ಗ್ರಾಮದ ಆತ್ಮರಾಮ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕುಟುಂಬ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ನರಸೀಪುರ ಗ್ರಾಮದ ಸುಮಾರು 500 ಕುಟುಂಬದವರನ್ನು ದತ್ತು ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಇಲ್ಲಿನ ರಾಷ್ಟ್ರಮಟ್ಟದ ಮತ್ತು ರಾಜ್ಯ ಮಟ್ಟದ ಎಲ್ಲಾ ಆರೋಗ್ಯ ಶಿಬಿರಗಳು, ಕಾರ್ಯಕ್ರಮಗಳು ಮತ್ತು ಸರ್ಕಾರದಿಂದ ಬರುವ ಕಾರ್ಯಕ್ರಮಗಳು ಅವರ ಮನೆ ಬಾಗಿಲಿಗೆ ಲಭಿಸುವ ಕೆಲಸ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ವತಿಯಿಂದ ಕಲ್ಪಿಸಲಾಗಿದೆ ಎಂದರು.

ಸಮಾಜ ಸೇವಕ ಭೈರಣ್ಣ ಮಾತನಾಡಿ, ವೈದ್ಯ ಶಾಸ್ತ್ರ ಬಹಳ ಪುರಾತನ ವರ್ಷಗಳಿಂದ ತಿಳಿದಿದ್ದೇನೆ. ಹಿಂದಿನ ವೈದ್ಯಶಾಸ್ತ್ರದವರು ಎಲ್ಲಿ ಅನಾರೋಗ್ಯ ಹೊಂದಿರುತ್ತಿದ್ದರೋ ಅಲ್ಲಿ ಮಾತ್ರ ವೈದ್ಯಶಾಸ್ತ್ರದವರಿದ್ದರು. ಮನೆ ಮದ್ದು ದೂರಸರಿದಿದೆ. ಪ್ರತಿಯೊಂದಕ್ಕೂ ವೈದ್ಯರ ಸೇವೆಗೆ ಅವಶ್ಯಕವಾಗಿದೆ. ಇಂದಿನ ಕಾಲದಲ್ಲಿ ವೈದ್ಯರ ಪ್ರೀತಿ ವಿಶ್ವಾಸದಿಂದ ನಗುಮುಖದಿಂದ ಚಿಕಿತ್ಸೆ ನೀಡಿದರೆ ಗುಣಮುಖರಾಗಿರುತ್ತಾರೆ ಎಂದರು.ದತ್ತು ಸ್ವೀಕಾರ ಪಡೆದ ನರಸೀಪುರ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಡಾ.ಎಂ.ಆರ್.ಹುಲಿನಾಯ್ಕರ್ ಹಾಗೂ ಟ್ರಸ್ಟಿ ಅಂಬಿಕಾ ಎಂ ಹುಲಿನಾಯ್ಕರ್ ಹಾಗೂ ಇದರ ಪೂರಕವಾಗಿ ಎಲ್ಲಾ ವೈದ್ಯರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು. ಗ್ರಾಮ ಪಂಚಾಯತಿ ಅಧ್ಯಕ್ಷ ರಾಮಾಂಜಿನಪ್ಪ ಮಾತನಾಡಿ, ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ವತಿಯಿಂದ ಆರೋಗ್ಯ ಸೇವೆಯ 500 ಮನೆಗಳನ್ನು ದತ್ತು ತೆಗೆದುಕೊಂಡು ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ಅಲ್ಲಿರುವ ಸಮಸ್ಯೆಗಳನ್ನು ಗುರುತಿಸಿದೆ. ಆ ಸಮಸ್ಯೆಗಳನ್ನು ಪರಿಹಾರ ನೀಡುವುದು ತುಂಬಾ ಖುಷಿಯ ವಿಚಾರವಾಗಿದೆ ಎಂದು ತಿಳಿಸಿದರು.ಗ್ರಾಮ ಪಂಚಾಯಿತಿ ಸದಸ್ಯರಾದ ಜಿ.ನಾಗರಾಜು, ಶೋಭಾರಾಣಿ, ನರೇಂದ್ರಬಾಬು, ಪ್ರಕಾಶ್, ಸಿದ್ದಲಕ್ಷಮ್ಮ, ವೆಂಕಟಾಚಲಯ್ಯ, ಭೀಮರಾಜು, ರಾಮಮೂರ್ತಿ, ರಾಮಗಿರಿಗೌಡ, ಲಿಂಗಮೂರ್ತಿ, ಬೈಲಪ್ಪ, ಮಂಜುನಾಥ್, ಶ್ರೀದೇವಿ ಆಸ್ಪತ್ರೆಯ ಸಿ.ಎ.ಓ ಪ್ರದೀಪ್‌ಕುಮಾರ್ ವೆಗ್ಗಿ, ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಪಿ.ಎನ್.ರವೀಶ್, ಡಾ.ಕುಸುಮ, ಡಾ.ಸೌಂದರ್ಯ, ಡಾ.ಸೌಜನ್ಯ, ಡಾ.ಪ್ರೀತಿ ಭಾಗವಹಿಸಿದ್ದರು.