ಸಾರಾಂಶ
ಪ್ರಗತಿ ಕಾಲನಿ ಯೋಜನೆಯಡಿ ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಮುಂಭಾಗದಲ್ಲಿ ₹೧೦ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಸಿಡಿ ನಿರ್ಮಾಣಕ್ಕೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು.
ಹಾನಗಲ್ಲ: ಪ್ರಗತಿ ಕಾಲನಿ ಯೋಜನೆಯಡಿ ತಾಲೂಕಿನ ಅಕ್ಕಿಆಲೂರಿನ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಮುಂಭಾಗದಲ್ಲಿ ₹೧೦ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಸಿಡಿ ನಿರ್ಮಾಣಕ್ಕೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು.
೨೦೨೩-೨೪ನೇ ಸಾಲಿನ ಪ್ರಗತಿ ಕಾಲನಿ ಯೋಜನೆಯಡಿ ವಿವಿಧ ಗ್ರಾಮಗಳ ಪರಿಶಿಷ್ಟ ಜಾತಿ ಕಾಲನಿಗಳಲ್ಲಿ ಸಿಸಿ ರಸ್ತೆ, ಸಿಡಿ ನಿರ್ಮಾಣ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಹಾನಗಲ್ಲ ತಾಲೂಕಿಗೆ ಒಂದು ಕೋಟಿ ರು. ಅನುದಾನ ಲಭಿಸಿದೆ. ಅನುದಾನ ಸದ್ಬಳಕೆ ಮಾಡಿಕೊಂಡು ಬೇರೆ ಬೇರೆ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಶ್ರೀನಿವಾಸ ಮಾನೆ ತಿಳಿಸಿದರು. ಗ್ರಾಪಂ ಅಧ್ಯಕ್ಷ ಮಕ್ಬೂಲ್ ರುಸ್ತುಂಖಾನವರ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ತಾಪಂ ಮಾಜಿ ಅಧ್ಯಕ್ಷ ಎಲ್.ಕೆ. ಶೇಷಗಿರಿ, ಟಿಎಪಿಸಿಎಂಎಸ್ ನಿರ್ದೇಶಕ ಬಸವರಾಜ ಹಾಲಬಾವಿ, ಗ್ರಾಪಂ ಸದಸ್ಯರಾದ ಇಂದೂಧರ ಸಾಲಿಮಠ, ಪ್ರಭುಗೌಡ ಪಾಟೀಲ, ಇನಾಯತ್ ಪಠಾಣ, ಮಹಾಂತೇಶ ಕುಳೇನೂರ, ಸುಲೇಮಾನ ಶಿಲಾರ, ರಜಿಯಾಬೇಂ ಹಿತ್ತಲಮನಿ, ಗೌರಮ್ಮ ಪಾಟೀಲ, ಫರೀದಾ ಪಠಾಣ, ಗಿರಿಜಮ್ಮ, ಮುಖಂಡರಾದ ಸತ್ತಾರಸಾಬ ಅರಳೇಶ್ವರ, ಖ್ವಾಜಾಮೊಹಿದ್ದೀನ್ ಅಣ್ಣಿಗೇರಿ, ಅಬ್ದುಲ್‌ಕರೀಂ ಹಿತ್ತಲಮನಿ, ಕೃಷ್ಣ ಅರ್ಕಸಾಲಿ, ನಸರುಲ್ಲಾ ಉಪ್ಪಣಸಿ, ಜಾಫರ್ ಮಾಸನಕಟ್ಟಿ, ಮೆಹೆದ್ದೀನಸಾಬ್ ಮಿಠಾಯಿಗಾರ, ಗನಿಸಾಬ್ ಲಾಲಾನವರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗಂಗಮ್ಮ ಹಿರೇಮಠ, ಪಿಡಿಒ ಕುಮಾರ ಮಕರವಳ್ಳಿ ಈ ಸಂದರ್ಭದಲ್ಲಿದ್ದರು.