ಜನರಿಗೆ ಉಪಯೋಗವಾಗುವ ಕಾರ್ಯಗಳು ಮುಖ್ಯ-ಸ್ವಾಮೀಜಿ

| Published : Jun 26 2024, 12:32 AM IST

ಸಾರಾಂಶ

ಜನರಿಗೆ ಸದುಪಯೋಗವಾಗುವ ಕಾರ್ಯಗಳು ಬಹುಮುಖ್ಯ, ಸಂಪತ್ತಿನ ಮದದಲ್ಲಿ ಎಲ್ಲಿಯೋ ಹಣ ವ್ಯರ್ಥ ಮಾಡುವವರ ಮಧ್ಯ ಜನೋಪಯೋಗಿ ಕಾರ್ಯಗಳನ್ನು ಮಾಡಿದರೆ ದೇವರ ಪ್ರಾಪ್ತಿ ಮತ್ತು ಜನರ ಏಳಿಗೆ ಸಾಧ್ಯವಿದೆ ಎಂದು ಹಿರೇಮಣಕಟ್ಟಿಯ ಮುರುಘೇಂದ್ರ ಮಠದ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಶಿಗ್ಗಾಂವಿ: ಜನರಿಗೆ ಸದುಪಯೋಗವಾಗುವ ಕಾರ್ಯಗಳು ಬಹುಮುಖ್ಯ, ಸಂಪತ್ತಿನ ಮದದಲ್ಲಿ ಎಲ್ಲಿಯೋ ಹಣ ವ್ಯರ್ಥ ಮಾಡುವವರ ಮಧ್ಯ ಜನೋಪಯೋಗಿ ಕಾರ್ಯಗಳನ್ನು ಮಾಡಿದರೆ ದೇವರ ಪ್ರಾಪ್ತಿ ಮತ್ತು ಜನರ ಏಳಿಗೆ ಸಾಧ್ಯವಿದೆ ಎಂದು ಹಿರೇಮಣಕಟ್ಟಿಯ ಮುರುಘೇಂದ್ರ ಮಠದ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಹೊರವಲಯದ ಹಿಂದೂ ರುದ್ರಭೂಮಿಯಲ್ಲಿ ಭಾರತ ಸೇವಾ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ''''ಸಿರಿಬಂದ ಕಾಲಕ್ಕೆ ಕರೆದು ಧಾನವ ಮಾಡು'''' ಎಂಬ ಶರಣರ ಮಾತಿನಂತೆ ತಮ್ಮ ಸಂಪತ್ತಿನ ಭಾಗವನ್ನು ಜೀವನದ ಒಂದು ಭಾಗವಾದ ರುದ್ರಭೂಮಿಯ ಅಭಿವೃದ್ಧಿಗೆ ಮತ್ತು ಅಲ್ಲಿಯ ಪರಿಸರ ಕಾಳಜಿಗೆ ಸಂಸ್ಥೆಯು ಮುಂದಾಗಿದೆ ಎಂದರು. ಮನುಷ್ಯ ಜೀವನದ ಅಂತ್ಯದ ಕಾಲದಲ್ಲಿ ಶಿವನು ಮುಕ್ತಿ ನೀಡುವ ಜಾಗ ರುದ್ರಭೂಮಿಯಾಗಿದ್ದು, ಅಲ್ಲಿಯ ಪರಿಸರ ಸ್ವಚ್ಛವಾಗಿರಬೇಕು ಎಂಬ ಉದ್ದೇಶದಿಂದ ರುದ್ರಭೂಮಿಯ ಅಭಿವೃದ್ಧಿಯ ಜೊತೆಗೆ ಭಾರತ ಸೇವಾ ಸಂಸ್ಥೆಯು ಪಟ್ಟಣದ ವಿವಿಧ ಮುಖಂಡರ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು. ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ರುದ್ರಭೂಮಿಯ ಉತ್ತಮ ಪರಿಸರಕ್ಕಾಗಿ ಪಣ ತೊಡಲಾಗಿದೆ. ರುದ್ರಭೂಮಿಯಲ್ಲಿ ಸ್ವಚ್ಛತೆಯ ಜೊತೆಗೆ ಇಲ್ಲಿ ಪೂಜಾ ಕಾರ್ಯಕ್ಕೆ ಬರುವ ಜನರಿಗೆ ಜೊತೆಗೆ ನಮ್ಮ ಅಕ್ಕ- ತಂಗಿಯರಿಗೆ ಉತ್ತಮ ಪರಿಸರವನ್ನು ನೀಡಬೇಕೆಂಬ ಉದ್ದೇಶದಿಂದ ಪೂಜಾ ಕಾರ್ಯಕ್ಕೆ ಪತ್ರಿಗಿಡ ಮತ್ತು ಬನ್ನಿಗಿಡಗಳು ಸೇರಿದಂತೆ ವಿವಿಧ ಸಸಿಗಳನ್ನು ನೆಡಲಾಗುತ್ತಿದೆ ಎಂದರು. ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ರುದ್ರಭೂಮಿ ಅಭಿವೃದ್ಧಿ ಸೇವಾ ಸಮಿತಿಯ ಅಧ್ಯಕ್ಷ ಜಗದೀಶ ಯಲಿಗಾರ, ಕಾರ್ಯದರ್ಶಿ ಮಾಲತೇಶ ಯಲಿಗಾರ, ಮುಖಂಡರಾದ ಫಕ್ಕೀರಜ್ಜಾ ಯಲಿಗಾರ, ಫಕ್ಕೀರಪ್ಪಾ ಕುಂದೂರ, ಬಸವರಾಜ ಹಾವೇರಿ, ಶಂಕರಗೌಡ ಪಾಟೀಲ, ರಮೇಶ ವನಹಳ್ಳಿ, ಸುರೇಶ ಹರಿಗೊಂಡ, ಆರ್.ಎಸ್. ಪಾಟೀಲ, ಈರಣ್ಣಾ ಬಡ್ಡಿ, ಅಶೋಕ ಕಾಳೆ, ಭರಮಜ್ಜ ನವಲಗುಂದ, ಮಂಜುನಾಥ ಯಲಿಗಾರ, ಶಂಬಣ್ಣಾ ಹಾವೇರಿ, ಶಶಿಧರ ಯಲಿಗಾರ, ಚನ್ನಪ್ಪಾ ಮೋಟೆಪ್ಪನವರ, ಶಿವಪ್ಪಾ ಗಂಜಿಗಟ್ಟಿ, ರುದ್ರಗೌಡ, ಪ್ರಶಾಂತ ಬಡ್ಡಿ, ಚಂದ್ರು ಜವಳಿ, ಶಿವಾನಂದ ಹೊಸಮನಿ, ರವಿ ಮಾಡಿವಾಳರ, ಮುತ್ತು ಯಲಿಗಾರ, ಪ್ರತೀಕ ಕೋಳೆಕಾರ, ವಿಶ್ವನಾಥ ಗಾಣಗೇರ, ನವೀನ ಸಾಸನೂರ ಸೇರಿ ಸಮಿತಿ ಸದಸ್ಯರು, ಭಾರತ ಸೇವಾ ಸಂಸ್ಥೆಯ ಸದಸ್ಯರು ಹಾಗೂ ಪಟ್ಟಣದ ವಿವಿಧ ಮುಖಂಡರು ಇದ್ದರು.