ಸಾರಾಂಶ
ರಾಣಿಬೆನ್ನೂರು: ಮಕ್ಕಳ ಸಮಗ್ರ ವಿಕಾಸಕ್ಕೆ ಸೃಜನಾತ್ಮಕ ಕ್ರಿಯಾಶೀಲ ಚಟುವಟಿಕೆಗಳ ಅಗತ್ಯವಿದೆ ಎಂದು ನಿವೃತ್ತ ಉಪನ್ಯಾಸಕ ಪ್ರೊ, ಬಿ.ಬಿ. ನಂದ್ಯಾಲ ಹೇಳಿದರು.ಇಲ್ಲಿನ ವೀರಭದ್ರೇಶ್ವರ ನಗರದ ವಿಕಾರ್ಡ್ ಶಿಕ್ಷಣ ಸಂಸ್ಥೆಯ ನ್ಯೂ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅವರು ಮಾತನಾಡಿದರು. ಶಿಕ್ಷಕರಲ್ಲಿ ಸ್ಪರ್ಧಾ ಮನೋಭಾವನೆ ಜೊತೆಗೆ ವೃತ್ತಿ ಕೌಶಲ್ಯತೆ ಇದ್ದಲ್ಲಿ ಅವರಲ್ಲಿ ಕಲಿತ ಮಕ್ಕಳು ಮತ್ತಷ್ಟು ಸೃಜನಶೀಲತೆ ಅಳವಡಿಸಿಕೊಳ್ಳುತ್ತಾರೆ ಎಂದರು. ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಾರ್ಯನಿರ್ವಾಹಕ ಎಸ್.ಡಿ. ಬಳಿಗಾರ ಮಾತನಾಡಿದರು. ಹಿರಿಯ ನ್ಯಾಯವಾದಿ ಎ.ಎಂ. ನಾಯ್ಕ್ ವಿಜ್ಞಾನ ವಸ್ತು ಪ್ರದರ್ಶನದ ಉದ್ಘಾಟಿಸಿದರು. ವಿಕಾರ್ಡ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಏಕಾಂತ್ ಮುದಿಗೌಡರ ಅಧ್ಯಕ್ಷತೆ ವಹಿಸಿದ್ದರು.ವರ್ತಕರ ಸಂಘದ ಮಾಜಿ ಅಧ್ಯಕ್ಷ ಬಿ.ಎಸ್.ಸಣ್ಣಗೌಡ್ರು, ಗ್ರೀನ್ ಫ್ರೆಶ್ ಸಂಸ್ಥಾಪಕ ಕರಬಸಪ್ಪ ಜಾಡರ, ಶಿಕ್ಷಣ ತಜ್ಞ ಚಂದ್ರಶೇಖರ್ ಗಂಗನಗೌಡ್ರ‍್ರ, ವರ್ತಕ ವಾಸುದೇವ್ ಗುಪ್ತಾ, ಡಾ. ಸಂದೀಪ್ ನಾಯಕ್, ನಿವೃತ್ತ ಶಿಕ್ಷಕ ವಿ.ವಿ.ಪಾಟೀಲ, ಸಾತ್ವಿಕ್ ಕುಸಗೊರ, ಮಂಜು ನಾಯ್ಕ್, ತುಳಜಾ ಭವಾನಿ, ಮುಖ್ಯೋಪಾಧ್ಯಾಯ ಬಸವರಾಜ ಶಿಡೇನೂರ, ವಿನೋದಮ್ಮ ಎಚ್, ಎಂ. ಎನ್ ಸಣ್ಣಿಂಗಣ್ಣನವರ, ಸೌಮ್ಯಶ್ರೀ ಕೆ.ಜೆ, ದಿನೇಶ್ ಹೆಚ್.ಆರ್, ಪ್ರಧಾನ ಗುರುಮಾತೆ ವಂದನಾ ಭಾನುವಳ್ಳಿಕರ ಮತ್ತಿತರರಿದ್ದರು.