ಕೆಲವು ತಾಂತ್ರಿಕ ಕಾರಣಗಳಿಂದಾಗಿ ನಾವು ಸಕ್ರಿಯ ಹೋರಾಟ ಮಾಡಲಾಗುತ್ತಿಲ್ಲ, ಮುಂದಿನ ದಿನಗಳಲ್ಲಿ ಕೊಳ್ಳೇಗಾಲದಲ್ಲಿ ತಡೆಯಾಗಿರುವ ಎಲ್ಲಾ ಸಾರ್ವಜನಿಕರ ಕೆಲಸಗಳನ್ನು ಪಟ್ಟಿ ಮಾಡಿ ನ್ಯಾಯ ಸಲ್ಲಿಸುವ ನಿಟ್ಟಿನಲ್ಲಿ ಹೋರಾಟ ನಡೆಸಲಾಗುವುದು.

ಕೊಳ್ಳೇಗಾಲ:

ಮುಂದಿನ ದಿನಗಳಲ್ಲಿ ಸಾಮಾಜಿಕ ಕಾಳಜಿ, ಸಾವ೯ಜನಿಕ ಸಮಸ್ಯೆ, ಭ್ರಷ್ಟಾಚಾರ ವಿಚಾರಗಳನ್ನು ಮುಂದಿಟ್ಟುಕೊಂಡು ನಿರಂತರ ಹೋರಾಟಕ್ಕೆ ರಕ್ಷಣಾ ವೇದಿಕೆ ಸಜ್ಜಾಗಲಿದೆ ಎಂದು ತಾಲೂಕು ಅಧ್ಯಕ್ಷ ಜಗದೀಶ್ ಶಾಸ್ತ್ರೀ ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ) ಬಣ ಅಯೋಜಿಸಿದ್ದ ಸೇಪ೯ಡೆ ಸಮಾರಂಭದಲ್ಲಿ ಮಾತನಾಡಿ, ಇಂದು ಹಲವು ಮುಖಂಡರು ಕರವೇ ಸೇರ್ಪಡೆಯಿಂದ ಹೆಚ್ಚಿನ ಬಲ ಬಂದಿದೆ. ಇಂದು ನಮ್ಮ ಸಂಘಟನೆಯ ಹರಳೆ ಗ್ರಾಮ ಘಟಕದ ಅನೇಕ ಯುವಕರು ಸಂಘಟನೆ ನಂಬಿ ಸೇರ್ಪಡೆಯಾಗಿರುವುದು ಸಂತಸವಾಗಿದೆ. ಕೆಲವು ತಾಂತ್ರಿಕ ಕಾರಣಗಳಿಂದಾಗಿ ನಾವು ಸಕ್ರಿಯ ಹೋರಾಟ ಮಾಡಲಾಗುತ್ತಿಲ್ಲ, ಮುಂದಿನ ದಿನಗಳಲ್ಲಿ ಕೊಳ್ಳೇಗಾಲದಲ್ಲಿ ತಡೆಯಾಗಿರುವ ಎಲ್ಲಾ ಸಾರ್ವಜನಿಕರ ಕೆಲಸಗಳನ್ನು ಪಟ್ಟಿ ಮಾಡಿ ನ್ಯಾಯ ಸಲ್ಲಿಸುವ ನಿಟ್ಟಿನಲ್ಲಿ ಹೋರಾಟ ನಡೆಸಲಾಗುವುದು ಎಂದರು.

ಈ ವೇಳೆ ಉಪಾಧ್ಯಕ್ಷ ಯೂನುಸ್, ಸ್ವೀಟ್ ಗಿರಿ, ಸಂಘಟನಾ ಕಾರ್ಯದರ್ಶಿ ಮೊಹಮ್ಮದ್ ಅಸ್ವಾಕ್, ಪ್ರಧಾನ ಕಾರ್ಯದರ್ಶಿ ಚಂದನ್, ಹೊಸ ಹಂಪಾಪುರ ಅಧ್ಯಕ್ಷ ರೇವಣ್ಣ ನಾಯಕ, ಗೋಪಾಲನಾಯಕ, ಮಂಜುನಾಯಕ, ಪ್ರಧಾನ ಕಾರ್ಯದರ್ಶಿ ಮಹದೇವ ಎಂ, ಬಾಲರಾಜು, ದರ್ಶನ್, ನಾಗರಾಜು, ಕೃಷ್ಣ.ಡಿ ಧನಗೆರೆ, ಕುಮಾರ್, ಸುರೇಶ್, ಮಹೇಶ ಇನ್ನಿತರಿದ್ದರು.

---- 29ಕೆಜಿಎಲ್ 33ಕೊಳ್ಳೇಗಾಲದ ಪ್ರವಾಸಿ ಮಂದಿರದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣಕ್ಕೆ ಹಲವು ಯುವಕರು ಸೇರ್ಪಡೆಯಾದರು. ಅಧ್ಯಕ್ಷ ಜಗದೀಶಶಾಸ್ತ್ರಿ, ಗಿರಿ, ಚಂದನ್ ಇನ್ನಿತರಿದ್ದರು.

--