ಕಾರ್ಯಕರ್ತರೇ ಬಿಜೆಪಿಯ ಗೆಲುವಿನ ರೂವಾರಿಗಳು: ಡಾ.ವೀರಣ್ಣ ಚರಂತಿಮಠ

| Published : Jun 11 2024, 01:31 AM IST

ಕಾರ್ಯಕರ್ತರೇ ಬಿಜೆಪಿಯ ಗೆಲುವಿನ ರೂವಾರಿಗಳು: ಡಾ.ವೀರಣ್ಣ ಚರಂತಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕರ್ತರೇ ಬಿಜೆಪಿಯ ರೂವಾರಿಗಳು. ಅವರಿಂದಲೇ ಪಕ್ಷದ ಗೆಲುವು ಸಾಧ್ಯವಾಗಲಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕಾರ್ಯಕರ್ತರೇ ಬಿಜೆಪಿಯ ರೂವಾರಿಗಳು. ಅವರಿಂದಲೇ ಪಕ್ಷದ ಗೆಲುವು ಸಾಧ್ಯವಾಗಲಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಭಾನುವಾರ ಬಿ.ವಿ.ವಿ. ಸಂಘದ ಹೊಸ ಸಭಾಭವನದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಬಾಗಲಕೋಟೆ ಮತಕ್ಷೇತ್ರದ ನಗರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಕಾರ್ಯಕರ್ತರಿಗೆ ಬಿಜೆಪಿ ಧ್ವಜ ನೀಡುವ ಮೂಲಕ ಪ್ರದಗ್ರಹಣ ನೆರವೇರಿಸಿ ಮಾತನಾಡಿದರು.

ನಗರಸಭೆ ಸದಸ್ಯರು ಸೇರಿದಂತೆ ಮುಖಂಡರು ಗೆಲ್ಲುವುದು ಕಾರ್ಯಕರ್ತರಿಂದ. ಅವರು ಪಕ್ಷದ ರಾಯಬಾರಿಗಳಿದ್ದಂತೆ, ಅವರ ಮುಖಾಂತರ ಪಕ್ಷದ ಬೆಳವಣಿಗೆ, ಪಕ್ಷಕ್ಕೆ ಮತ ತಂದುಕೊಂಡುವವರು ಕಾರ್ಯಕರ್ತರು, ಪಕ್ಷದ ಕಾರ್ಯಕರ್ತರ ಜೊತೆ ಮುಖಂಡರು, ನಗರಸಭೆ ಸದಸ್ಯರು ಸಂಘಟನೆಯಿಂದ ಒಂದಾಗಿ ಪರಸ್ಪರ ಎಲ್ಲರೂ ಗೌರವ ಕೊಟ್ಟು ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರಿಂದ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಮತಗಳ ಅಂತರದ ಜಯಗಳಿಸಲು ಸಾಧ್ಯವಾಗಿದೆ ಎಂದರು.

ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್. ಪಾಟೀಲ ಮಾತನಾಡಿ, ಒಂದು ದೇಶ ಒಂದು ಕಾನೂನು, ಒಂದು ದೇಶ ಒಂದು ಚುನಾವಣೆ, ದೇಶದಲ್ಲಿ ಜಾರಿಯಾಗಲಿವೆ. ಕಾರ್ಯಕರ್ತರ ಸಂಘಟನೆಯಿಂದ ಪಕ್ಷ ಮತ್ತೆ ಅಧಿಕಾರ ಹಿಡಿದಿದೆ, ಬಾಗಲಕೋಟೆಯಲ್ಲಿ ಬಿಜೆಪಿ ಭದ್ರವಾಗಿದೆ, ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿಯಾಗುತ್ತಿರುವುದು ಕಾರ್ಯಕರ್ತರ ಸಂಭ್ರಮ ಇಮ್ಮಡಿಸಿದೆ ಎಂದರು.

ಮುಖಂಡ ಡಾ.ಎಂ.ಎಸ್. ದಡ್ಡೆನ್ನವರ, ಬಸಲಿಂಗಪ್ಪ ನಾವಲಗಿ, ಗುಂಡುರಾವ ಶಿಂಧೆ, ಬಸವರಾಜ ಯಂಕಂಚಿ, ರಾಜು ರೇವಣಕರ, ಭಾಗೀರಥಿ ಪಾಟೀಲ, ಜ್ಯೋತಿ ಭಜಂತ್ರಿ, ಬಸವರಾಜ ಹುನಗುಂದ, ವೀರಣ್ಣ ಹಳೆಗೌಡರ, ಸದಾನಂದ ನಾರಾ, ಬಸವರಾಜ ಅವರಾದಿ, ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ, ಮಲ್ಲೇಶ ವಿಜಾಪುರ, ಕಲ್ಲಪ್ಪ ಭಗವತಿ, ರಾಜು ಶಿಂತ್ರೆ, ಪರಮೇಶ್ವರ ಮಧುರ, ಪಾಲಾಕ್ಷಿ ಕಟ್ಟಿಮಠ, ಚಂದ್ರಕಾಂತ ಪತ್ತಾರ, ಶಾಂತಪ್ಪ ಬಾಡದ, ನಗರ ಸದಸ್ಯರು ಸೇರಿದಂತೆ ಅನೇಕರು ಇದ್ದರು.

ಬಾಕ್ಸ್‌ ಪದಗ್ರಹಣ :

ಯುವ ಮೋರ್ಚಾ ಅಧ್ಯಕ್ಷರಾಗಿ ಚಂದ್ರು ರಾಮೋಡಗಿ, ರೈತ ಮೋರ್ಚಾ ಅಧ್ಯಕ್ಷರಾಗಿ ದೂಳಪ್ಪ ಕೊಪ್ಪದ, ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಶಶಿಕಲಾ ಮಜ್ಜಗಿ, ಓಬಿಸಿ ಮೋರ್ಚಾ ಅಧ್ಯಕ್ಷರಾಗಿ ಅಶೋಕ ಪವಾರ, ಎಸ್ಟಿ ಮೋರ್ಚಾ ಅಧ್ಯಕ್ಷರಾಗಿ ರವಿ ನಾಯಕ, ಎಸ್ಸಿ ಮೋರ್ಚಾ ಅಧ್ಯಕ್ಷರಾಗಿ ನಾಗರಾಜ ನಾರಾಯಣಕರ, ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷರಾಗಿ ವಿಲಾಸ ಒಂದಕುದರಿ, ಸ್ವಚ್ಛ ಭಾರತ ಅಭಿಯಾನ ಸಂಚಾಲಕರಾಗಿ ರಜತ ಡಾವಣಗೇರಿ, ಸಹ ಸಂಚಾಲಕ ರಾಜು ದಂಡಗಿ, ಮಹಾಶಕ್ತಿ ಕೇಂದ್ರದ ಸಂಚಾಲಕ ಸುರೇಶ ಮಜ್ಜಗಿ, ಮಲ್ಲು ಮುತ್ತಪ್ಪನ್ನವರ, ರಾಮಣ್ಣ ಜುವಮನಾಳ, ಸಹ ಸಂಚಾಲಕರಾಗಿ ಮಾನೇಶ ಅಂಬಿಗೇರ, ಹೇಮಂತ ಸೀಮಿಕೇರಿ, ಗಣೆಶ ಲಗಳಿ, ಸಂಗಯ್ಯ ಸರಗಣಾಚಾರಿ, ಸಂಗಯ್ಯ ಶಿರೂರ, ಯಲ್ಲಪ್ಪ ಭಜಂತ್ರಿ, ಚಂದ್ರಶೇಖರ ಉಕ್ಕಲಿ, ತಿಮ್ಮಣ್ಣ ವಡ್ಡರ, ಮಲ್ಲಿಕಾರ್ಜುನ ಮಠ, ಜಿ.ಎಸ್. ಬಡಿಗೇರ ಸೇರಿದಂತೆ ನೂತನ ಪದಾಧಿಕಾರಿಗಳ ಪದಗ್ರಹಣ ಜರುಗಿತು.

2ಂ47ಕ್ಕೆ ವಿಕಸಿತ ಭಾರತ: ಗ್ಯಾರಂಟಿಗಳಿಂದಾಗಿ ಜನರಲ್ಲಿ ಡುಡಿಯುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಕೃಷಿ ಕೆಲಸಕ್ಕೆ ಜನ ಮುಂದಾಗುತ್ತಿಲ್ಲ. ದುಡಿಯುವರಿಗೆ, ಕೆಲಸ ಮಾಡುವರಿಗೆ ಸಾಕಷ್ಟು ಕೆಲಸಗಳು ಇವೆ. ಆದರೆ, ಕೆಲಸಗಾರ ಸಿಗುತ್ತಿಲ್ಲ. ಇದಕ್ಕಾಗಿ ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ತರಬೇತಿ ಪ್ರಾರಂಭಿಸಿದ್ದರಿಂದ ಅತ್ಯುತ್ತಮ ಕೆಲಸಗಾರರು ಹೊರಹೊಮ್ಮುತ್ತಿದ್ದಾರೆ, ಬದಲಾವಣೆ ಮತ್ತು ಸುಧಾರಣೆ ಎರಡು ಕಠಿಣವಾದ ಕೆಲಸಗಳಾಗಿವೆ. ದೇಶದಲ್ಲಿ ಎನ್.ಡಿ.ಎ ಉತ್ತಮ ಆಡಳಿತ ನೀಡುವ ಭರವಸೆ ಇದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ವಿಶ್ವದಲ್ಲಿಯೇ 3ನೇ ಆರ್ಥಿಕತೆಯಾಗಲಿದೆ. 2047ಕ್ಕೆ ವಿಕಸಿತ ಭಾರತವಾಗಲಿದೆ ಎಂದು ಡಾ.ಚರಂತಿಮಠ ಹೇಳಿದರು.