ಸಾರಾಂಶ
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷಗಳ ಇತಿಹಾಸ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಜೈ ಭೀಮ್, ಜೈ ಭಾಪು, ಜೈ ಸಂವಿಧಾನ್ ಹೆಸರಲ್ಲಿ ಸಮಾವೇಶವನ್ನು ಆಯೋಜಿಸಲಾಗಿದೆ .
ರಾಮನಗರ: ಜೈ ಭೀಮ್, ಜೈ ಭಾಪು , ಜೈ ಸಂವಿಧಾನ್ ಘೋಷಣೆಗಳೊಂದಿಗೆ ಬೆಳಗಾವಿ ಸಮಾವೇಶಕ್ಕೆ ರಾಮನಗರ ಕ್ಷೇತ್ರದಿಂದ 500ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬೆಳಗ್ಗೆ ತೆರಳಿದರು.
ಸೋಮವಾರ ಬೆಳಗ್ಗೆ ರಾಮನಗರದ ಶಾಸಕರ ಕಚೇರಿ ಬಳಿ ಬೆಳಗಾವಿ ಪ್ರಯಾಣಕ್ಕೆ ಚಾಲನೆ ನೀಡಲಾಯಿತು.ಈ ವೇಳೆ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷಗಳ ಇತಿಹಾಸ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಜೈ ಭೀಮ್, ಜೈ ಭಾಪು, ಜೈ ಸಂವಿಧಾನ್ ಹೆಸರಲ್ಲಿ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.
ಈ ಐತಿಹಾಸಿಕ ಸಮಾವೇಶವನ್ನು ಯಶಸ್ವಿಗೊಳಿಸಲು ಶಾಸಕರಾದ ಇಕ್ಬಾಲ್ ಹುಸೇನ್ ಅವರು ಹೆಚ್ಚಿನ ಶ್ರಮ ಹಾಕಿದ್ದಾರೆ. ಬಸ್ ವ್ಯವಸ್ಥೆ, ವಸತಿ ಮತ್ತಿತರ ವ್ಯವಸ್ಥೆಗಳನ್ನು ಮಾಡಿಕೊಟ್ಟಿದ್ದಾರೆ. ರಾಮನಗರ ಕ್ಷೇತ್ರದಿಂದ ಸುಮಾರು 500ಕ್ಕೂ ಅಧಿಕ ಕಾರ್ಯಕರ್ತರು ತೆರಳುತ್ತಿದ್ದಾರೆ. 5 ಬಸ್ ಹಾಗೂ 25 ಕ್ಕೂ ಅಧಿಕ ಕಾರುಗಳ ಮೂಲಕ ಕಾರ್ಯಕರ್ತರು ಬೆಳಗಾವಿ ಸಮಾವೇಶದ ಯಶಸ್ಸಿಗಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ತಾಲೂಕು ಅಧ್ಯಕ್ಷರಾದ ವಿ.ಎಚ್ ರಾಜು, ಮುಖಂಡರಾದ ಜಯಕರ್ನಾಟಕ ರವಿ, ಚಿಕ್ಕಸ್ವಾಮಿ, ರಘು ಕುರುಬಹಳ್ಳಿ, ಗೋವಿಂದು, ಮಾಜಿ ನಗರಸಭೆ ಅಧ್ಯಕ್ಷ ಲೋಹಿತ್ ಬಾಬು, ರಂಜಿತ್, ವಿನೋದ್ ಮತ್ತಿತರರು ಇದ್ದರು.