ವೃದ್ಧಾಪ್ಯ ವೇತನ, ಪಿಂಚಣಿ ಹೆಚ್ಚಿಸುವಂತೆ ಕಾರ್ಯಕರ್ತರ ಪ್ರತಿಭಟನೆ

| Published : Nov 07 2025, 01:45 AM IST

ವೃದ್ಧಾಪ್ಯ ವೇತನ, ಪಿಂಚಣಿ ಹೆಚ್ಚಿಸುವಂತೆ ಕಾರ್ಯಕರ್ತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ದಿನೇದಿನೇ ಹೆಣ್ಣು ಮಕ್ಕಳು, ಮಹಿಳೆಯರ ಮೇಲೆ ದೌರ್ಜನ್ಯ, ಕಿರುಕುಳ, ಅತ್ಯಾಚಾರಗಳು ನಡೆಯುತ್ತಿವೆ. ಇವುಗಳನ್ನು ತಡೆಗಟ್ಟುವಲ್ಲಿ ಸರ್ಕಾರ, ಪೊಲೀಸ್ ಇಲಾಖೆ ವಿಫಲವಾಗುತ್ತಿವೆ. ಮಹಿಳೆಯರ ಮೇಲಿನ ದೌರ್ಜನ್ಯ ನಡೆಯುವ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಯಾಗಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿಸಿ ವೃದ್ಧಾಪ್ಯ ವೇತನ, ವಿಶೇಷಚೇತರ ಪಿಂಚಣಿ ಹೆಚ್ಚಿಸುವಂತೆ ಆಗ್ರಹಿಸಿ ಮಹಿಳೋದಯ ಮಹಿಳಾ ಒಕ್ಕೂಟದ ಕಾರ್ಯಕರ್ತೆಯರು ಗುರುವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಚರ್ಜ್ ಬಳಿಯಿಂದ ಮೆರವಣಿಗೆ ಮೂಲಕ ತಾಲೂಕು ಕಚೇರಿವರೆಗೆ ಆಗಮಿಸಿದ ಪ್ರತಿಭಟನಾಕಾರರು ತಹಸೀಲ್ದಾರ್ ಎಸ್.ಸಂತೋಶ್ ಅವರಿಗೆ ಮನವಿ ಸಲ್ಲಿಸಿದರು.

ಅರ್ಗನೈಜೇಷನ್ ಪ್ರಾರ್ ದ ಡೆವಲಪ್‌ಮೆಂಟ್ ಆಫ್ ಪೀಪಲ್(ಓ.ಡಿ.ಪಿ) ಮೈಸೂರು ಮತ್ತು ಮಹಿಳೋದಯ ಮಹಿಳಾ ಒಕ್ಕೂಟ ಸಹಯೋಗದಲ್ಲಿ ಹೆಣ್ಣು ಮಕ್ಕಳ ಮತ್ತು ಮಹಿಳೆಯರ ರಕ್ಷಣೆ ಹಾಗೂ ಲೈಗಿಂಕ ಕಿರುಕುಳ, ಅತ್ಯಾಚಾರ ಖಂಡಿಸಿ ಆರೋಪಿಗಳಿಗೆ ಜಾಮೀನು ನೀಡದೆ ಕಠಿಣ ಶಿಕ್ಷೆ ನೀಡುವಂತೆ ಕೋರಿ, ವಿಧವಾ ಮತ್ತು ವೃದ್ದಾಪ್ಯ ಪಿಂಚಣೆ ಮತ್ತು ವಿಶೇಷ ಚೇತನರಿಗೆ ಪಿಂಚಣಿ 63 ಸಾವಿರಕ್ಕೆ ಹೆಚ್ಚಿಸಲು ಹಕ್ಕೋತ್ತಾಯ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ದಿನೇದಿನೇ ಹೆಣ್ಣು ಮಕ್ಕಳು, ಮಹಿಳೆಯರ ಮೇಲೆ ದೌರ್ಜನ್ಯ, ಕಿರುಕುಳ, ಅತ್ಯಾಚಾರಗಳು ನಡೆಯುತ್ತಿವೆ. ಇವುಗಳನ್ನು ತಡೆಗಟ್ಟುವಲ್ಲಿ ಸರ್ಕಾರ, ಪೊಲೀಸ್ ಇಲಾಖೆ ವಿಫಲವಾಗುತ್ತಿವೆ. ಮಹಿಳೆಯರ ಮೇಲಿನ ದೌರ್ಜನ್ಯ ನಡೆಯುವ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಸರ್ಕಾರಗಳು ವಿಧವಾವೇತನ, ವೃದ್ಧಾಪ್ಯ, ವೇತನ, ವಿಶೇಷಚೇತನರ ಪಿಂಚಣಿಯನ್ನು ಮೂರು ಸಾವಿರಕ್ಕೆ ಏರಿಕೆ ಮಾಡುವ ಮೂಲಕ ಸರಕಾರಗಳು ಇವರ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಧ್ಯಕ್ಷೆ ಭಾಗ್ಯಮ್ಮ, ವಿದ್ಯಾವತಿ, ಜೆ.ಎ.ಉಮಾ, ಭಾರತಿ ಎಂ.ಆರ್, ಪ್ರಕಾಶ್‌ಮೇರಿ, ರಮೇಶ್, ರೀಟ, ಜಯಶ್ರೀ, ಸಾವಿತ್ರಿ ಸೇರಿದಂತೆ ಹಲವರು ಹಾಜರಿದ್ದರು.

ಮಳವಳ್ಳಿಯಲ್ಲಿ ಜಯಂತಿ ವಸ್ತುಪ್ರದರ್ಶನ

ಮೈಸೂರು:

ಮಳವಳ್ಳಿಯಲ್ಲಿ ಆದಿಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳವರ 1066ನೇ ಜಯಂತಿ ಮಹೋತ್ಸವವು ಡಿ.18 ರಿಂದ 24ರವರೆಗೆ ಜರುಗಲಿದೆ. ಇದರ ಅಂಗವಾಗಿ ವಸ್ತು ಪ್ರದರ್ಶನವನ್ನು ಏರ್ಪಡಿಸಿದೆ.

ವಸ್ತುಪ್ರದರ್ಶನದಲ್ಲಿ ಜೆಎಸ್ಎಸ್ ಸಂಸ್ಥೆಯಿಂದ ಶ್ರೀಸುತ್ತೂರು ಮಠದ ಗುರು ಪರಂಪರೆ ಪರಿಚಯ, ವೈದ್ಯಕೀಯ ಸೇವೆಗಳಿರುತ್ತವೆ. ಸರ್ಕಾರದ ವಿವಿಧ ಇಲಾಖೆಗಳ ಪ್ರದರ್ಶನಗಳಿರುತ್ತವೆ.

250ಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶವಿದೆ. ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯೂ ಇರುತ್ತದೆ. ಉದ್ಯಮಿಗಳು, ಕರಕುಶಲಕರ್ಮಿಗಳು, ಆಹಾರ ತಿನಿಸು ತಯಾರಕರು (ಫುಡ್ ಕೋರ್ಟ್), ಅಮ್ಯೂಸ್ ಮೆಂಟ್ ಪಾರ್ಕ್, ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರು ವಸ್ತುಪ್ರದರ್ಶನದಲ್ಲಿ ಪಾಲ್ಗೊಂಡು ಮಳಿಗೆಗಳನ್ನು ತೆರೆಯಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು ಮಳವಳ್ಳಿಯ ಜಯಂತಿ ಮಹೋತ್ಸವ ಕಾರ್ಯಾಲಯ ಅಥವಾ ಎಂ. ಚನ್ನಮಲ್ಲಿಕಾರ್ಜುನ, ಆರ್.ಎಸ್.ನಂಜುಂಡಸ್ವಾಮಿ ಹಾಗೂ ಬಿ.ಎಂ.ಸದಾಶಿವಮೂರ್ತಿ ಇವರನ್ನು ನೇರವಾಗಿ ಅಥವಾ ಕ್ರಮವಾಗಿ ಮೊ.9964096224, 8970890466, 9900504023 ಸಂಪರ್ಕಿಸಿ ಮಳಿಗೆಗಳನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ.