ಸಾರಾಂಶ
ಯಮಕನಮರಡಿ: ಯಮಕನಮರಡಿ ಕ್ಷೇತ್ರದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ಬಹುತೇಕ ಗ್ರಾಮಗಳಲ್ಲಿ ಕಾರ್ಯಕರ್ತರು ಗುಲಾಲು ಎರಚಿ, ಕುಣಿದು ಕುಪ್ಪಳಿಸಿದರು. ಅಭಿಮಾನಿಗಳು ಭವ್ಯವಾದ ವಾದ್ಯ ಮೇಲಗಳೊಂದಿಗೆ ಮೆರವಣಿಗೆ ನಡೆಸಿದರು.
ಯಮಕನಮರಡಿ: ಯಮಕನಮರಡಿ ಕ್ಷೇತ್ರದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ಬಹುತೇಕ ಗ್ರಾಮಗಳಲ್ಲಿ ಕಾರ್ಯಕರ್ತರು ಗುಲಾಲು ಎರಚಿ, ಕುಣಿದು ಕುಪ್ಪಳಿಸಿದರು. ಅಭಿಮಾನಿಗಳು ಭವ್ಯವಾದ ವಾದ್ಯ ಮೇಲಗಳೊಂದಿಗೆ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಕಿರಣಸಿಂಗ್ ರಜಪೂತ ಮಾತನಾಡಿ, ಚಿಕ್ಕ ವಯಸ್ಸಿನಲ್ಲೆ ಸಂಸದೆಯಾಗಿ ಆಯ್ಕೆಯಾದ ಪ್ರಿಯಾಂಕಾ ಜಾರಕಿಹೊಳಿ ಗೆಲುವು ಡಾ.ಬಾಬಾಸಾಹೇಬ ಅಂಬೇಡ್ಕರರು ಬರೆದ ಸಂವಿಧಾನದ ಗೆಲುವಾಗಿದೆ. ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಕೈಗೊಂಡ ಪ್ರಗತಿ ಕಾರ್ಯಗಳೇ ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಿದೆ ಎಂದರು. ಈ ಸಂದರ್ಭದಲ್ಲಿ ವೀರಣ್ಣ ಬಿಸಿರೊಟ್ಟಿ, ಭರಮ ದೂಪದಾಳ, ಅಭಿಜಿತ ಪಾಟೀಲ, ಉಲ್ಲಾಸ ಕಾಪಸಿ, ಜಾವೇದ ಜಕಾತಿ, ಗಿರೀಶ್ ಮಿಶ್ರಕೋಟಿ, ರಾಜೇಸಾಬ ಫಣಿಬಂಧ, ಸಿದ್ದಪ್ಪಾ ಶಿಳ್ಳಿ ಇದ್ದರು.