ಹುಟ್ಟೂರಲ್ಲಿ ನಟ ದರ್ಶನ್ ಕ್ರೌರ್ಯ ಮೆರೆದ ಆರೋಪ

| Published : Jun 14 2024, 01:00 AM IST

ಸಾರಾಂಶ

ದರ್ಶನ್ ಮತ್ತು ತಾಯಿ ದಶಕದ ಹಿಂದೆ, ತಾವು ಹುಟ್ಟಿ ಬೆಳೆದ ಮನೆಯನ್ನೇ ಕೆಡವಿದ ಪ್ರಕರಣದ ಆರೋಪ ಎದುರಿಸುತ್ತಿದ್ದಾರೆ. ತಾನು ಬೆಳೆದ ಮನೆಯನ್ನೇ ಧ್ವಂಸ ಮಾಡಿದ್ದ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿದ್ದರು. ಆಸ್ತಿ ವಿಚಾರವಾಗಿ ಸೋದರ ಮಾವಂದಿರ ಜೊತೆ ಗಲಾಟೆ ಮಾಡಿಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಟ ದರ್ಶನ್ ತೋರಿಸಿದ್ದಾರೆ ಎನ್ನಲಾದ ಕ್ರೌರ್ಯಕ್ಕೆ ಹುಟ್ಟೂರು ಪೊನ್ನಂಪೇಟೆಯಲ್ಲಿ ದರ್ಶನ್ ಮಾವ ಮತ್ತು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ತನ್ನ ಹುಟ್ಟೂರಿನಲ್ಲಿ ಕೂಡ ತಾಯಿ ಮೀನಾ ಮತ್ತು ನಟ ದರ್ಶನ್ ಕ್ರೌರ್ಯ ನಡೆಸಿದ್ದರು ಎನ್ನಲಾಗಿದೆ.

ದರ್ಶನ್ ಮತ್ತು ತಾಯಿ ದಶಕದ ಹಿಂದೆ, ತಾವು ಹುಟ್ಟಿ ಬೆಳೆದ ಮನೆಯನ್ನೇ ಕೆಡವಿದ ಪ್ರಕರಣದ ಆರೋಪ ಎದುರಿಸುತ್ತಿದ್ದಾರೆ. ತಾನು ಬೆಳೆದ ಮನೆಯನ್ನೇ ಧ್ವಂಸ ಮಾಡಿದ್ದ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿದ್ದರು. ಆಸ್ತಿ ವಿಚಾರವಾಗಿ ಸೋದರ ಮಾವಂದಿರ ಜೊತೆ ಗಲಾಟೆ ಮಾಡಿಕೊಂಡಿದ್ದರು. ತಾಯಿ ಮೀನಾ ಜೊತೆ 10 ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಪ್ರಕರಣ ಈಗಲೂ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ.

ಕೆಲ ವರ್ಷಗಳ ಹಿಂದೆ ಹೆಂಡತಿ ಜೊತೆ ಗಲಾಟೆ ಮಾಡಿಕೊಂಡು ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟ ದರ್ಶನ್ ಈಗ ಪವಿತ್ರಗೌಡ ಜೊತೆ ಸಂಬಂಧ ಇಟ್ಟುಕೊಂಡ ಕಾರಣ ಈ ಪರಿಸ್ಥಿತಿ ಬಂದಿದೆ. ಈತ ಶೌರ್ಯದ ಮೂವಿ ಮಾಡಿ ಕ್ರೌರ್ಯ ಮೆರೆದಿದ್ದಾನೆ. ಆತ ಕೊಲೆ ಮಾಡುವ ಹಂತಕ್ಕೆ ಹೋಗಬಾರದಿತ್ತು ಎಂದು ನಟ ದರ್ಶನ್ ಮಾವ ಟಿ ಎಲ್ ಶ್ರೀನಿವಾಸ್ ಪೊನ್ನಪೇಟೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಕೊಲೆ ಆಗಿರುವ ವ್ಯಕ್ತಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ನಾವು ಎತ್ತಿ ಆಡಿಸಿ ಬೆಳೆಸಿದ ದರ್ಶನ್ ಕೊಲೆಯಲ್ಲಿ ಭಾಗಿರುವುದು ಬೇಸರವಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಕೊಡಗಿನ ಹೋಂ ಸ್ಟೇ ಒಂದರಲ್ಲಿ ಮಹಿಳೆ ಮೇಲೆ ದರ್ಶನ್ ಕ್ರೌರ್ಯ ಮೆರೆದಿದ್ದರು. ಸ್ನೇಹಿತರ ಜೊತೆ ಹೋಂ ಸ್ಟೇಯಲ್ಲಿ ಉಳಿದಿದ್ದ ದರ್ಶನ್, ಹೋಂ ಸ್ಟೇಯಲ್ಲಿ ಕೆಲಸ ಮಾಡುವ ಮಹಿಳೆಗೆ ಸಿಗರೇಟ್ ನಿಂದ ಸುಟ್ಟು ಹಲ್ಲೆ ಮಾಡಿರುವ ಆರೋಪ‌ ಇದೆ ಎಂದು ದರ್ಶನ್ ಹುಟ್ಟೂರು ಪೊನ್ನಂಪೇಟೆಯಲ್ಲಿ ಕೆಲವು ಸ್ಥಳೀಯರು ಆರೋಪಿಸಿದ್ದಾರೆ.