ಸಾರಾಂಶ
ಟ್ರಸ್ಟ್‌ನಿಂದ ಪಟ್ಟಣದ ಪುರಸಭೆ ಬಸ್ ನಿಲ್ದಾಣದ ಹಿಂದಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ, ನೇತ್ರದಾನ ನೋಂದಣಿ ಕಾರ್ಯಕ್ರಮವನ್ನು ಪಟ್ಟಣದ ವಿರಕ್ತಮಠದ ಪ್ರಭುಸ್ವಾಮೀಜಿ ಉದ್ಘಾಟಿಸಿದರು.
ಸಂಡೂರು: ಡಾ. ಪುನೀತ್ ರಾಜಕುಮಾರ ಜನ್ಮದಿನ ಸ್ಮರಣಾರ್ಥ ಭಾನುವಾರ ಪಟ್ಟಣದ ಡಾ. ಪುನೀತ್ ರಾಜಕುಮಾರ ಸೇವಾ ಟ್ರಸ್ಟ್‌ನಿಂದ ₹೨.೫೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಮನೆಯೊಂದನ್ನು ತಾಲೂಕಿನ ನಂದಿಹಳ್ಳಿಯಲ್ಲಿರುವ ಗುಡಿಸಲುವಾಸಿ ಬಡ ಮಹಿಳೆ ಬಸಮ್ಮ ಅವರಿಗೆ ಹಸ್ತಾಂತರಿಸಲಾಯಿತು.
ಜಿ.ಎಂ. ಲಾಜಿಸ್ಟಿಕ್ಸ್ ಜನರಲ್ ಮ್ಯಾನೇಜರ್ ಎಸ್.ಎ. ಶ್ರೀನಿವಾಸ್ ಸೇವಾ ಟ್ರಸ್ಟ್‌ನಿಂದ ನಿರ್ಮಿಸಲಾದ ಮನೆ ಉದ್ಘಾಟಿಸಿದರು. ಟ್ರಸ್ಟ್‌ನಿಂದ ಪಟ್ಟಣದ ಪುರಸಭೆ ಬಸ್ ನಿಲ್ದಾಣದ ಹಿಂದಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ, ನೇತ್ರದಾನ ನೋಂದಣಿ ಕಾರ್ಯಕ್ರಮವನ್ನು ಪಟ್ಟಣದ ವಿರಕ್ತಮಠದ ಪ್ರಭುಸ್ವಾಮೀಜಿ ಉದ್ಘಾಟಿಸಿದರು.೪೦ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ೩೫ ಜನರು ನೇತ್ರದಾನಕ್ಕೆ ತಮ್ಮ ಹೆಸರನ್ನು ನೋಂದಣಿ ಮಾಡಿಸಿದರು.
ಕಾರ್ಯಕ್ರಮದಲ್ಲಿ ಡಾ. ಪುನೀತ್ ರಾಜಕುಮಾರ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್.ಪಿ. ಶಶಿಕಿರಣ್, ಗೌರವ ಅಧ್ಯಕ್ಷ ಆರ್.ಟಿ. ರಘುನಾಥ, ಉಪಾಧ್ಯಕ್ಷರಾದ ವೀರೇಶ್ ಹಾಗೂ ಉಗ್ರ ನರಸಿಂಹ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಸಹ ಕಾರ್ಯದರ್ಶಿಗಳಾದ ಷರೀಫ್, ವಿನಯ್, ಸದಸ್ಯರಾದ ಗುರು, ಪರಶುರಾಮ್, ವಿಜಯ್, ದರ್ಶನ್ ಉಪಸ್ಥಿತರಿದ್ದರು.