ನಟ ಪುನೀತ್ ರಾಜ್ ಕುಮಾರ್ ನೆನಪು ಎಂದಿಗೂ ಮಾಸುವುದಿಲ್ಲ: ಜಿ.ಜಯರಾಮ್

| Published : Oct 30 2025, 01:30 AM IST

ಸಾರಾಂಶ

ದೊಡ್ಡ ಮನೆಯಲ್ಲಿ ಹುಟ್ಟಿ ಬೆಳೆದು ಅವರು ಮಾಡಿರುವ ನೂರಾರು ಸತ್ಕಾರ್ಯಗಳು ಜನರಲ್ಲಿ ಉಳಿದಿವೆ. ಅಭಿಮಾನಿಗಳಾದ ನಾವುಗಳು ಅವರ ನೆನಪುಗಳ ಮೂಲಕ ಮುನ್ನೆಡಲು ಮುಂದಾಗಿದ್ದೇವೆ. ಬಡ ಜನರ ಪರವಾಗಿ ನಿಲ್ಲುವ ಕೆಲಸ ಮಾಡುತ್ತೇವೆ. ಇದರಿಂದ ಪುನೀತ್ ಅವರ ಆತ್ಮಕ್ಕೂ ಸಮಾಧಾನ ತರುತ್ತದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಅಭಿಮಾನಿಗಳಿಗೆ ಪುನೀತ್ ರಾಜ್ ಕುಮಾರ್ ನೆನಪು ಎಂದಿಗೂ ಮಾಸುವುದಿಲ್ಲ. ನೂರು ವರ್ಷದವರೆಗೂ ಉಳಿಯುತ್ತದೆ ಎಂದು ಪುನೀತ್ ರಾಜ್ ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಜಿ.ಜಯರಾಮ್ ಹೇಳಿದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಟ ಪುನೀತ್ ರಾಜಕುಮಾರ್ ಅವರ 4ನೇ ವರ್ಷದ ಪುಣ್ಯ ಸ್ಮರಣೆಯಲ್ಲಿ ಪುಷ್ಪಾರ್ಚನೆ ಮಾಡಿ ಮಾತನಾಡಿ, ನಟ ಪುನೀತ್ ಅವರು ನಮ್ಮನ್ನು ಅಗಲಿ 4 ವರ್ಷಗಳಾಗಿವೆ. ಅವರ ನೆನಪು ಮಾತ್ರ ನೂರು ವರ್ಷ ಇರುತ್ತದೆ ಎಂದರು.

ದೊಡ್ಡ ಮನೆಯಲ್ಲಿ ಹುಟ್ಟಿ ಬೆಳೆದು ಅವರು ಮಾಡಿರುವ ನೂರಾರು ಸತ್ಕಾರ್ಯಗಳು ಜನರಲ್ಲಿ ಉಳಿದಿವೆ. ಅಭಿಮಾನಿಗಳಾದ ನಾವುಗಳು ಅವರ ನೆನಪುಗಳ ಮೂಲಕ ಮುನ್ನೆಡಲು ಮುಂದಾಗಿದ್ದೇವೆ. ಬಡ ಜನರ ಪರವಾಗಿ ನಿಲ್ಲುವ ಕೆಲಸ ಮಾಡುತ್ತೇವೆ. ಇದರಿಂದ ಪುನೀತ್ ಅವರ ಆತ್ಮಕ್ಕೂ ಸಮಾಧಾನ ತರುತ್ತದೆ ಎಂದರು.

ಇದಕ್ಕೂ ಮುನ್ನ ನಟ ಪುನೀತ್ ಅಭಿಮಾನಿಗಳು ಪುನೀತ್ ಅವರ ಭಾವಚಿತ್ರ ವಿರಿಸಿ, ಪುಷ್ಪಾಲಂಕಾರ ಮಾಡಿ, ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು. ಬಳಿಕ ಖಾಸಗಿ ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಸೇರಿದಂತೆ ನೂರಾರು ಮಂದಿಗೆ ಪ್ರಸಾದ ವಿತರಿಸಿದರು.

ಈ ವೇಳೆ ನಂದೀಶ್, ಸಿ.ಸ್ವಾಮಿಗೌಡ, ಮಂಜು, ಕೃಷ್ಣೇಗೌಡ, ಪ್ರಕಾಶ್ ಈ. ಕೃಷ್ಣ, ಪಾಲಹಳ್ಳಿ ಯೋಗೇಶ್, ರವಿ, ಮುರುಳಿ, ಪಾಪು ಸೇರಿದಂತೆ ನೂರಾರು ಅಭಿಮಾನಿಗಳು ಇದ್ದರು.

ಇಂದಿನಿಂದ ಶ್ರೀಕಾಳಮ್ಮ, ಶ್ರೀಮಾರಮ್ಮ ದೇವರ ಕಳಸ ಪ್ರತಿಷ್ಠಾಪನೆ

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಸ್ವರ್ಣಸಂದ್ರದ ಶ್ರೀಕಾಳಮ್ಮ ಮತ್ತು ಶ್ರೀಮಾರಮ್ಮ ದೇವಸ್ಥಾನದ ಜೀರ್ಣೋದ್ಧಾರ ನೂತನ ಸ್ಥಿರಬಿಂಬ ಪ್ರತಿಷ್ಠಾಪನೆ ಹಾಗೂ ನೂತನ ಕಳಸ ಪ್ರತಿಷ್ಠಾಪನಾ ಕುಂಭಾಭಿಷೇಕ ಸಮಾರಂಭ ಅ.೩೦ ಹಾಗೂ ೩೧ರಂದು ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.

ಅ.೩೦ರಂದು ಮುಂಜಾನೆಯಿಂದ ದೇವರಿಗೆ ಅಗ್ರೋಧಕಸಂಗ್ರಹಣ, ಅನುಜ್ಞೆ ಸ್ವಸ್ತಿವಾಚನ ಪುಣ್ಯಾಹವಾಚನ, ಪಂಚಗವ್ಯಸಮ್ಮೇಳನ, ರಕ್ಷಾಬಂಧನ, ವಾಸ್ತುಹೋಮ, ಬಲಿಹರಣ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

ಅ.೩೧ರಂದು ಕಲಶ ಪ್ರತಿಷ್ಠೆ ಕಲಶಾರಾಧನೆ, ಗಣಹೋಮ, ನಿತ್ಯಹೋಮ, ಮೂರ್ತಿಹೋಮ, ಪ್ರತಿಷ್ಠಾಂಗ ಹೋಮ, ದುರ್ಗಾಹೋಮ, ಮಹಾಪೂರ್ಣಾಹುತಿ, ಕುಂಭ ಉದ್ವಾಸನೆ ನಡೆಯಲಿದೆ.

ಬೆಳಗ್ಗೆ ೧೦ ಗಂಟೆಗೆ ನಡೆಯುವ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಕೊಮ್ಮೇರಹಳ್ಳಿಯ ಆದಿಚುಂಚನಗಿರಿ ಶಾಖಾಮಠದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಅಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ವಹಿಸುವರು. ಉದ್ಘಾಟನೆಯನ್ನು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ನೆರವೇರಿಸುವರು. ಅಧ್ಯಕ್ಷತೆಯನ್ನು ಶಾಸಕ ಪಿ.ರವಿಕುಮಾರ್ ವಹಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಒಕ್ಕಲಿಗರ ನಿಗಮ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ಎಂ.ಶ್ರೀನಿವಾಸ್, ರಾಜ್ಯ ಯುವ ಜನತಾದಳದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಬಿಜೆಪಿ ರಾಜ್ಯ ಕಾರ‌್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಸೇರಿದಂತೆ ಇತರರು ಪಾಲ್ಗೊಳ್ಳುವರು. ಬೆಳಗ್ಗೆ ೧೧.೩೦ ಗಂಟೆಯಿಂದ ಅನ್ನಸಂತರ್ಪಣೆ ನಡೆಯಲಿದೆ.

ಅದೇ ದಿನ ಸಂಜೆ ೬ ಗಂಟೆಗೆ ನಡೆಯುವ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಹಿಸುವರು. ಉದ್ಘಾಟನೆಯನ್ನು ಶಾಸಕ ಪಿ.ರವಿಕುಮಾರ್ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್, ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಮಹಿಳಾಧ್ಯಕ್ಷೆ ಎಚ್.ಬಿ.ಶುಭದಾಯಿನಿ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು ಸೇರಿದಂತೆ ಇತರರು ಭಾಗವಹಿಸುವರು.