ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ದೊಡ್ಡಲತ್ತೂರು ಗ್ರಾಮದ ಶ್ರೀ ಮಕ್ಕಳೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ತೊಟ್ಟಿಲು ಶಾಸ್ತ್ರ, ಸಿದ್ದಪ್ಪಾಜಿ ಕಂಡಾಯೋತ್ಸವದ ವಿಶೇಷ ಪೂಜೆಯಲ್ಲಿ ನಟಿ ತಾರಾ ಹಾಗೂ ನಟ ಶಶಿಕುಮಾರ್ ಭಾಗವಹಿಸಿ ದೇವರ ದರ್ಶನ ಪಡೆದುಕೊಂಡರು.ಶಶಿಕುಮಾರ್ ಮಾತನಾಡಿ, ದೊಡ್ಡಲತ್ತೂರು ಗ್ರಾಮದ ಬೆಟ್ಟದ ಶಂಕ್ರಪ್ಪರವರು ಮಕ್ಕಳಿಲ್ಲದ ಹೆಂಗಸರಿಗೆ ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟ ನಾಟಿ ಔಷಧಿಯನ್ನು ಕೊಟ್ಟು ಹಲವಾರು ವರ್ಷಗಳಿಂದ ತೊಟ್ಟಿಲು ಪೂಜೆ ಮಾಡಿಸಿಕೊಂಡು ಹೋಗಿರುವ ಸಾವಿರಾರು ಸ್ತ್ರೀಯರಿಗೆ ಮಕ್ಕಳಾಗಿದೆ. ಸುಮಾರು 300ರಿಂದ 400 ವರ್ಷಗಳಿಂದ ನಡೆದುಕೊಂಡು ಬಂದಿರುವ ಕಾರ್ಯಕ್ರಮ ಇದಾಗಿರುವುದು ಸಂತಸದ ವಿಚಾರ ಎಂದರು.
ಬೆಟ್ಟದ ಶಂಕರಪ್ಪನವರು ಮಕ್ಕಳಿಲ್ಲದ ಹೆಣ್ಣು ಮಕ್ಕಳಿಲ್ಲದವರಿಗೆ ಹಲವಾರು ವರ್ಷಗಳಿಂದ ನಾಟಿ ಔಷಧ ಕೊಡುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಮಕ್ಕಳಿಲ್ಲದವರಿಗೆ ನಾಟಿ ಗಿಡಮೂಲಿಕೆಗಳಿಂದ ಔಷಧಿ ಕೊಟ್ಟ ನಂತರ ಮಕ್ಕಳಾಗಿದೆ. ವೈದ್ಯರು ಮಕ್ಕಳೇ ಆಗುವುದಿಲ್ಲವೆಂದು ಹೇಳಿದ ನಂತರ ದಂಪತಿಗಳು ಲಕ್ಷಾಂತರ ರುಪಾಯಿ ಖರ್ಚು ಮಾಡಿ ಈ ಕ್ಷೇತ್ರಕ್ಕೆ ಬಂದು ಔಷಧಿ ಪಡೆದುಕೊಂಡು ಮಕ್ಕಳಾಗಿರುವ ಹಲವು ನಿರ್ದೇಶನಗಳಿವೆ ಎಂದರು.ನಟಿ ತಾರಾ ಮಾತನಾಡಿ, ಒಂದು ಹೆಣ್ಣು ಮಗಳು ತಾಯಿಯಾದಾಗ ಅದರಲ್ಲಿ ಸಿಗುವ ಸಂತೋಷ ಎಲ್ಲಿಯೂ ಸಿಗುವುದಿಲ್ಲ. ಬಂಜೆತನ ಎಂಬುದನ್ನು ಯಾವ ಮಹಿಳೆಯು ಊಹೆ ಮಾಡಲು ಸಾಧ್ಯವಿಲ್ಲ. ಇದರಿಂದ ಪ್ರತಿನಿತ್ಯ ಕೊರಗಿ ಕೊರಗಿ ಹಾಸಿಗೆ ಹಿಡಿದುಕೊಂಡಿರುವುದು ನಮ್ಮ ಕಣ್ಣಮುಂದೆ ಇದೆ. ಒಂದು ಕುಟುಂಬದಲ್ಲಿ ಮಕ್ಕಳಿದ್ದರೆ ಅಲ್ಲಿರುವ ಸಂತೋಷವೇ ಬೇರೆ, ಮಕ್ಕಳಿಗೆ ಮಕ್ಕಳಾಗದಿದ್ದರೆ ನೆರೆಹೊರೆಯರವರ ಚುಚ್ಚು ಮಾತುಗಳಿಂದ ಜೀವನವೇ ಬೇಡ ಎಂಬಂತಹ ಪರಿಸ್ಥಿತಿ ಉಂಟಾಗುತ್ತದೆ. ಬೆಟ್ಟದ ಶಂಕರಪ್ಪರವರು ಮಕ್ಕಳಾಗದವರಿಗೆ ನಾಟಿ ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟ ಔಷಧ ಕೊಟ್ಟು ತೊಟ್ಟಿಲು ಪೂಜೆ ಮಾಡಿಸಿದ ನಂತರ ಹೆಣ್ಣು ಮಕ್ಕಳಿಗೆ ಮಕ್ಕಳಾಗಿದೆ ಎಂದರು.
ಬೆಟ್ಟದ ಶಂಕರಪ್ಪ ಮಾತನಾಡಿ, ತಾಯ್ತನ ಎಂಬುದು ಎಲ್ಲರಿಗೂ ಸಿಗುವುದಿಲ್ಲ, ಹಲವಾರು ವರ್ಷಗಳ ಕಾಲ ಮಕ್ಕಳಿಲ್ಲದೆ ನಮ್ಮ ಬಳಿ ತಮ್ಮ ಕಷ್ಟ ಹೇಳಿಕೊಂಡು ಬಂದಂತಹ ದಂಪತಿಗಳಿಗೆ ಧೈರ್ಯ ತುಂಬಿ ನಾಟಿ ಔಷಧಿ ನೀಡಿ ತೊಟ್ಟಿಲು ಪೂಜೆ ಮಾಡಿಸಿ ಕಳುಹಿಸಿರುವ ಸಾವಿರಾರು ಹೆಣ್ಣು ಮಕ್ಕಳಿಗೆ ಮಕ್ಕಳಾಗಿದೆ ಎಂದರು.
ಇದೆ ಸಂದರ್ಭದಲ್ಲಿ ದಂಪತಿಗಳು, ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹಾಜರಿದ್ದರು.
--24ಸಿಎಚ್‌ಎನ್52
ಹನೂರು ತಾಲೂಕಿನ ದೊಡ್ಡಲತ್ತೂರು ಗ್ರಾಮದ ಶ್ರೀ ಮಕ್ಕಳೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ತೊಟ್ಟಿಲು ಶಾಸ್ತ್ರ, ಸಿದ್ದಪ್ಪಾಜಿ ಕಂಡಾಯೋತ್ಸವದ ವಿಶೇಷ ಪೂಜೆಯಲ್ಲಿ ಚಲನಚಿತ್ರ ನಟಿ ತಾರಾ ಹಾಗೂ ನಟ ಶಶಿಕುಮಾರ್ ಭಾಗವಹಿಸಿದರು.----------------