ಸಾರಾಂಶ
ಖ್ಯಾತ ನಟ ವಿಜಯರಾಘವೇಂದ್ರ ಹಾಗೂ ನಿರ್ಮಾಪಕ ಸಾ.ರಾ. ಗೋವಿಂದ್ ಅವರು ಸೋಮವಾರ ಹಾಸನಾಂಬೆ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದರು. ದೂರದೂರಿನಿಂದ ಸಾವಿರಾರು ಭಕ್ತರು ಇಲ್ಲಿ ಆಗಮಿಸಿ ದೇವಿ ದರ್ಶನ ಪಡೆಯುತ್ತಿದ್ದಾರೆ. ದೇವಾಲಯದ ವ್ಯವಸ್ಥೆ ಅಚ್ಚುಕಟ್ಟಾಗಿ, ಶಿಸ್ತಿನ ರೀತಿಯಲ್ಲಿ ನಡೆದಿದೆ. ಎಲ್ಲರಿಗೂ ದರ್ಶನದ ಅವಕಾಶ ದೊರೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲರೂ ದೇವಿಯ ಆಶೀರ್ವಾದದಿಂದ ಆರೋಗ್ಯ, ಸುಖ, ಶಾಂತಿ ಹಾಗೂ ಸಮೃದ್ಧಿ ಹೊಂದಲಿ ಎಂಬುದು ನನ್ನ ಪ್ರಾರ್ಥನೆ ಎಂದರು.
ಹಾಸನ: ಕನ್ನಡ ಚಲನಚಿತ್ರರಂಗದ ಖ್ಯಾತ ನಟ ವಿಜಯರಾಘವೇಂದ್ರ ಹಾಗೂ ನಿರ್ಮಾಪಕ ಸಾ.ರಾ. ಗೋವಿಂದ್ ಅವರು ಸೋಮವಾರ ಹಾಸನಾಂಬೆ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದರು.
ಹಾಸನಾಂಬೆ ದೇವಿ ದರ್ಶನದ ನಂತರ ಇಬ್ಬರೂ ದರ್ಬಾರ್ ಗಣಪತಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಅಲ್ಲಿಂದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೂ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಜಿಲ್ಲೆಯ ಶಾಂತಿ ಹಾಗೂ ಜನರ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು. ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯರಾಘವೇಂದ್ರ ಮತ್ತು ಸಾ.ರ. ಗೋವಿಂದ್, ಇದೊಂದು ವಿಶಿಷ್ಟ ಹಾಗೂ ಆಧ್ಯಾತ್ಮಿಕ ಅನುಭವ. ಹಾಸನಾಂಬೆ ದೇವಿಯ ದರ್ಶನ ಪಡೆಯುವುದು ನನಗೆ ಭಾಗ್ಯ. ದೂರದೂರಿನಿಂದ ಸಾವಿರಾರು ಭಕ್ತರು ಇಲ್ಲಿ ಆಗಮಿಸಿ ದೇವಿ ದರ್ಶನ ಪಡೆಯುತ್ತಿದ್ದಾರೆ. ದೇವಾಲಯದ ವ್ಯವಸ್ಥೆ ಅಚ್ಚುಕಟ್ಟಾಗಿ, ಶಿಸ್ತಿನ ರೀತಿಯಲ್ಲಿ ನಡೆದಿದೆ. ಎಲ್ಲರಿಗೂ ದರ್ಶನದ ಅವಕಾಶ ದೊರೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲರೂ ದೇವಿಯ ಆಶೀರ್ವಾದದಿಂದ ಆರೋಗ್ಯ, ಸುಖ, ಶಾಂತಿ ಹಾಗೂ ಸಮೃದ್ಧಿ ಹೊಂದಲಿ ಎಂಬುದು ನನ್ನ ಪ್ರಾರ್ಥನೆ ಎಂದರು.ದರ್ಶನದ ವೇಳೆ ಹಾಸನಾಂಬೆ ದೇವಾಲಯ ಆವರಣದಲ್ಲಿ ಭಕ್ತರ ಹರ್ಷೋದ್ಗಾರಗಳು ಕೇಳಿ ಬಂದಿದ್ದು, ನಟರ ಆಗಮನದಿಂದ ಭಕ್ತರಲ್ಲಿ ಉತ್ಸಾಹದ ಸಂಭ್ರಮ ಮೂಡಿತ್ತು.