ಸಾರಾಂಶ
ಸುಭಾಶ್ಚಂದ್ರ ಬೋಸರ ಪ್ರಭಾವಕ್ಕೆ ಒಳಗಾಗಿದ್ದ ಶಂಕರಗೌಡರು, ಮಹಾತ್ಮ ಗಾಂಧೀಜಿ ಒಡನಾಡಿಯೂ ಹೌದು. ಸಂತರಾಗಿ, ಶರಣರಾಗಿ, ಹೋರಾಟಗಾರರಾಗಿದ್ದ ಅವರು, ವಿದ್ಯಾದಾನಿಯೂ ಆಗಿದ್ದರು ಎಂದು ಚಿಂತಕ ರವೀಂದ್ರನಾಥ ದೊಡ್ಡಮೇಟಿ ಹೇಳಿದರು.
ಧಾರವಾಡ: ಸ್ವಾತಂತ್ರ್ಯ ಚಳವಳಿ ಹಾಗೂ ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ಏಕಕಾಲದಲ್ಲಿ ಭಾಗವಹಿಸಿ, ಸಕ್ರಿಯವಾಗಿ ಪಾಲ್ಗೊಂಡಿದ್ದ ಮಹನೀಯ ಹೋರಾಟಗಾರರಲ್ಲಿ ಅದರಗುಂಚಿ ಶಂಕರಗೌಡರು ಪ್ರಮುಖರು ಎಂದು ಸಾಂಸ್ಕೃತಿಕ ಚಿಂತಕ ರವೀಂದ್ರನಾಥ ದೊಡ್ಡಮೇಟಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ನವಲಗುಂದ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ‘ಅದರಗುಂಚಿ ಶಂಕರಗೌಡರ ದತ್ತಿ’ಯಲ್ಲಿ ಮಾತನಾಡಿದ ಅವರು, ಸುಭಾಶ್ಚಂದ್ರ ಬೋಸರ ಪ್ರಭಾವಕ್ಕೆ ಒಳಗಾಗಿದ್ದ ಶಂಕರಗೌಡರು, ಮಹಾತ್ಮ ಗಾಂಧೀಜಿ ಒಡನಾಡಿಯೂ ಹೌದು. ಸಂತರಾಗಿ, ಶರಣರಾಗಿ, ಹೋರಾಟಗಾರರಾಗಿದ್ದ ಇವರು, ವಿದ್ಯಾದಾನಿಯೂ ಆಗಿದ್ದರು. ಕರ್ನಾಟಕ ಏಕೀಕರಣಕ್ಕಾಗಿಯೇ ‘ಕರ್ನಾಟಕ ಏಕೀಕರಣ ಪರಿಷತ್ತು’ ಸ್ಥಾಪಿಸಿದ್ದರು. ಇಂತಹ ಮಹಾನ್ ವ್ಯಕ್ತಿಗಳ ನಿಸ್ವಾರ್ಥ ಹೋರಾಟದ ಫಲವಾಗಿಯೇ ಕರ್ನಾಟಕದ ಜನತೆ ಒಂದುಗೂಡಲು ಸಾಧ್ಯವಾಯಿತು ಎಂದರು.ಅದರಗುಂಚಿ ಶಂಕರಗೌಡರ ಸಹೋದರ ವಿರೂಪಾಕ್ಷಿಗೌಡ ಪಾಟೀಲ, ಸುತ್ತಮುತ್ತ ಹಳ್ಳಿಯ ರೈತರನ್ನು ಕಟ್ಟಿಕೊಂಡು, ಚಕ್ಕಡಿಗಳ ಮೆರವಣಿಗೆಯ ಮೂಲಕ ಹೋರಾಟ ಮಾಡಿದ ಶಂಕರಗೌಡರು, ಎಲೆಯ ಮರೆಯ ಕಾಯಿಯಾಗಿದ್ದವರು. ಜನರ ಮನಸ್ಸಿನಲ್ಲಿ ಚಳವಳಿಗಳ ಕಿಚ್ಚನ್ನು ಹೊತ್ತಿಸಿದವರು. ನಿಷ್ಠುರವಾದಿ. ಪ್ರತಿಯೊಂದು ಹೋರಾಟದಲ್ಲೂ ಮುಂಚೂಣಿಯಲ್ಲಿ ಇದ್ದು, ಜಯವನ್ನು ಸಾಧಿಸಿದ ಧೀಮಂತರು. ಇಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಪಠ್ಯ ಪುಸ್ತಕಗಳಲ್ಲಿ ಸೇರಿಸುವುದರೊಂದಿಗೆ ಅವರ ಪ್ರಭಾವ ವಿದ್ಯಾರ್ಥಿಗಳ ಮೇಲಾಗಬೇಕು ಎಂದು ಹೇಳಿದರು.
ಡಾ. ಜಿನದತ್ತ ಅ. ಹಡಗಲಿ, ಎಂ.ಬಿ. ಬಾಗಡಿ, ದತ್ತಿದಾನಿ ಡಾ. ರಾಮು ಮೂಲಗಿ, ಗೌಡಪ್ಪಗೌಡ ಪಾಟೀಲ, ಎ.ಬಿ. ಕೊಪ್ಪದ, ಎಸ್.ಜಿ. ಹಿರೇಮಠ ಇದ್ದರು. ಬಿ.ವಿ. ಏಣಗಿ ವಂದಿಸಿದರು. ಡಾ. ಐ.ಬಿ. ಸಾತಿಹಾಳ ನಿರೂಪಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))