ಬಯಲಲ್ಲೆ ಪರೀಕ್ಷೆ ಬರೆದ ಆದರ್ಶ ಶಾಲೆ ಮಕ್ಕಳು!

| Published : Mar 17 2024, 01:49 AM IST

ಸಾರಾಂಶ

ಪಾವಗಡ: ಪಟ್ಟಣದ ಪ್ರತಿಷ್ಠಿತ ಸರ್ಕಾರಿ ಆದರ್ಶ ಶಾಲೆಯ ಕೊಠಡಿಯ ಕೊರತೆ ಹಾಗೂ ದುರಸ್ತಿ ನೆಪದಲ್ಲಿ ಶುಕ್ರವಾರ ಶಾಲೆಯ 6ಮತ್ತು 7ನೇ ತರಗತಿಯ ಸುಮಾರು 200 ಮಂದಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಪಟ್ಟಣದ ಗುರುಭವನದ ಹಿಂಭಾಗದ ಅನೈರ್ಮಲ್ಯದಿಂದ ಕೂಡಿದ ಬಯಲು ಪ್ರದೇಶದಲ್ಲಿ ನಡೆಸಲಾಗಿದೆ. ಈ ನಡೆಗೆ ಫೋಷಕರು ಮತ್ತು ಸಾರ್ವಜನಿ ಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಡಿಗೆ ಕಟ್ಟಡದಲ್ಲಿ ಕೊಠಡಿಗಳ ಕೊರತೆ

ಸ್ವಂತ ಕಟ್ಟಡವಿದ್ದರೂ ಸ್ಥಳಾಂತರವಾಗಿಲ್ಲಪಾವಗಡ: ಪಟ್ಟಣದ ಪ್ರತಿಷ್ಠಿತ ಸರ್ಕಾರಿ ಆದರ್ಶ ಶಾಲೆಯ ಕೊಠಡಿಯ ಕೊರತೆ ಹಾಗೂ ದುರಸ್ತಿ ನೆಪದಲ್ಲಿ ಶುಕ್ರವಾರ ಶಾಲೆಯ 6ಮತ್ತು 7ನೇ ತರಗತಿಯ ಸುಮಾರು 200 ಮಂದಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಪಟ್ಟಣದ ಗುರುಭವನದ ಹಿಂಭಾಗದ ಅನೈರ್ಮಲ್ಯದಿಂದ ಕೂಡಿದ ಬಯಲು ಪ್ರದೇಶದಲ್ಲಿ ನಡೆಸಲಾಗಿದೆ. ಈ ನಡೆಗೆ ಫೋಷಕರು ಮತ್ತು ಸಾರ್ವಜನಿ ಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶಾಲೆಯಲ್ಲಿ 6 ರಿಂದ 10ನೇ ತರಗತಿ ವರೆಗೆ 400ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸದ್ಯ ಸರ್ಕಾರಿ ಪ್ರಾಥಮಿಕ ಪಾಠಶಾಲೆಗೆ ಒಳಪಟ್ಟ ಕೊಠಡಿಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಸರ್ಕಾರ ಕೋಟ್ಯಂತರ ರು.ವಿನಿಯೋಗಿ ತಾಲೂಕಿನ ಆರಸೀಕೆರೆ ಸಮೀಪದ ಪ್ರಕೃತಿಯ ಮಡಿಲಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸ್ಥಳಾಂತರವಾಗಿಲ್ಲ. ಹೀಗಾಗಿ ವಿದ್ಯಾಥಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಮೂಲಭೂ ತ ಸೌಲಭ್ಯಗಳಿಲ್ಲದ ಕೊಠಡಿಗಳಲ್ಲಿ ಕಳೆದ 10 ವರ್ಷಗಳಿಂದ ತರಗತಿ ನಡೆಸಲಾಗುತ್ತಿದೆ. ಪ್ರಸಕ್ತ ಸಾಲಿನ ವಾರ್ಷಿಕ ಪರೀಕ್ಷೆ ಎದುರಾದ ಹಿನ್ನೆಲೆ ಕೊಠಡಿ ಕೊರತೆಯ ನೆಪವೊಡ್ಡಿ ಮರಗಳ ಕೆಳಗಡೆ ಸುಡುಬಿಸಿಲಿನಲ್ಲಿ ವಾರ್ಷಿಕ ಪರೀಕ್ಷೆ ಬರೆಸಲಾಗಿದೆ.ಸಮಾಜ ಸೇವಕ ಹಾಗೂ ಮುಖಂಡ ಗುಂಡ್ಲಹಳ್ಳಿ ರಮೇಶ್‌ ಮಾತನಾಡಿ, ಸುಸಜ್ಜಿತವಾದ ಸರ್ಕಾರಿ ಆದರ್ಶ ಶಾಲೆ ಕಟ್ಟಡವಿದ್ದರೂ ಕಾಳಜಿ ವಹಿಸದ ಪರಿಣಾಮ ಈ ಸ್ಥಿತಿ ಬಂದೊದಗಿದೆ. ಬಯಲು ಪ್ರದೇಶದಲ್ಲಿ 6 ಮತ್ತು 7ನೇ ತರಗತಿ ಪರೀಕ್ಷೆ ನಡೆಯುತ್ತಿರುವು ನೋವಿನ ಸಂಗತಿ ಎಂದರು.ದಲಿತ ಹಾಗೂ ರೈತ ಮುಖಂಡ ಗುಂಡ್ಲಹಳ್ಳಿ ರಾಮಾಂಜಿನೇಯ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಹೆಚ್ಚು ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸಮಸ್ಯೆ ಸರಿಪಡಿಸಬೇಕು ಎಂದರು.