ಸಾರಾಂಶ
ಇಂದು ಸಮಾಜದಲ್ಲಿ ನಡೆಯುವ ಬಹುಪಾಲು ಕ್ರಿಮಿನಲ್ ಘಟನೆಗಳು ಮದ್ಯ ಮತ್ತು ಮಾದಕ ವ್ಯಸನಿಗಳಿಂದಾಗುತ್ತಿವೆ.
ಹೊನ್ನಾಳಿ: ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಪಟ್ಟರಾಜ ಗೌಡರ ಅಧ್ಯಕ್ಷತೆಯಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನ ಆಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಿಸಲಾಯಿತು.
ಡಾ.ಮಹಾಂತ ಶ್ರೀ ಜನ್ಮ ದಿನವನ್ನು ವ್ಯಸನ ಮುಕ್ತ ದಿನಾಚರಣೆಯನ್ನಾಗಿ ಆಚರಿಸಿ ಮದ್ಯ, ಮಾದಕ ವಸ್ತು ಸೇವನೆ ದುಷ್ಪರಿಣಾಗಳ ಕುರಿತು ಪಟ್ಟರಾಜ ಗೌಡ ಮಾತನಾಡಿ, ಇಂದು ಸಮಾಜದಲ್ಲಿ ನಡೆಯುವ ಬಹುಪಾಲು ಕ್ರಿಮಿನಲ್ ಘಟನೆಗಳು ಮದ್ಯ ಮತ್ತು ಮಾದಕ ವ್ಯಸನಿಗಳಿಂದಾಗುತ್ತಿವೆ. ಆದರಲ್ಲೂ ಯುವ ಸಮೂಹ ಬಹು ಬೇಗನೆ ಮಾದಕ ವಸ್ತುಗಳ ಆಕರ್ಷಣೆಗೆ ಬಲಿಯಾಗಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುವ ಜೊತೆಗೆ ಸಮಾಜಕ್ಕೂ ಕೂಡ ಕಂಟಕ ಪ್ರಾಯವಾಗುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಮದ್ಯ ಮತ್ತು ಮಾದಕ ವಸ್ತು ಸೇವನೆ ದುಷ್ಪರಿಣಾಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.ನಂತರ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕಂಕಣಬದ್ಧರಾಗಿರುತ್ತೇನೆ ಎಂದು ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಗ್ರೇಡ್ -2 ತಹಸೀಲ್ದಾರ್ ಸುರೇಶ್, ರಾಜಸ್ವ ನಿರೀಕ್ಷರಾದ ರಮೇಶ್, ರವಿ, ರಫೀಕ್, ಮಂಜುನಾಥ, ಕಂದಾಯ ಅಧಿಕಾರಿಗಳು ಇದ್ದರು.