ಬಿಎಂಟಿಸಿಗೆ ಇನ್ನೊಂದು ವರ್ಷದಲ್ಲಿ 320 ಎಸಿ ಎಲೆಕ್ಟ್ರಿಕ್‌ ಬಸ್‌ ಸೇರ್ಪಡೆ

| Published : Apr 14 2024, 01:52 AM IST / Updated: Apr 14 2024, 08:16 AM IST

ಬಿಎಂಟಿಸಿಗೆ ಇನ್ನೊಂದು ವರ್ಷದಲ್ಲಿ 320 ಎಸಿ ಎಲೆಕ್ಟ್ರಿಕ್‌ ಬಸ್‌ ಸೇರ್ಪಡೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಎಂಟಿಸಿಗೆ ಎಸಿ ಎಲೆಕ್ಟ್ರಿಕ್‌ ಬಸ್‌ ಪೂರೈಕೆಗೆ ಸಂಬಂಧಿಸಿದಂತೆ ಗುತ್ತಿಗೆದಾರರನ್ನು ನೇಮಿಸಲಾಗಿದ್ದು, 2025ರ ಮಾರ್ಚ್‌ ಅಂತ್ಯದೊಳಗೆ ಎಲ್ಲ 320 ಎಸಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಪೂರೈಸುವಂತೆ ಗುತ್ತಿಗೆ ಸಂಸ್ಥೆಗೆ ಸೂಚಿಸಲಾಗಿದೆ.

 ಬೆಂಗಳೂರು :  ಬಿಎಂಟಿಸಿಗೆ ಎಸಿ ಎಲೆಕ್ಟ್ರಿಕ್‌ ಬಸ್‌ ಪೂರೈಕೆಗೆ ಸಂಬಂಧಿಸಿದಂತೆ ಗುತ್ತಿಗೆದಾರರನ್ನು ನೇಮಿಸಲಾಗಿದ್ದು, 2025ರ ಮಾರ್ಚ್‌ ಅಂತ್ಯದೊಳಗೆ ಎಲ್ಲ 320 ಎಸಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಪೂರೈಸುವಂತೆ ಗುತ್ತಿಗೆ ಸಂಸ್ಥೆಗೆ ಸೂಚಿಸಲಾಗಿದೆ.

ಬಿಎಂಟಿಸಿಯಲ್ಲಿ ಸದ್ಯ 390 ಎಲೆಕ್ಟ್ರಿಕ್‌ ಬಸ್‌ಗಳಿದ್ದು, ಅವು ಹವಾನಿಯಂತ್ರಿತವಲ್ಲದ ಬಸ್‌ಗಳಾಗಿವೆ. ಈಗ 320 ಎಸಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಪಡೆಯಲು ಬಿಎಂಟಿಸಿ ಕೆಲ ತಿಂಗಳ ಹಿಂದೆ ಟೆಂಡರ್‌ ಪ್ರಕ್ರಿಯೆ ನಡೆಸಿತ್ತು. ಒಎಚ್‌ಎಂ ಗ್ಲೋಬಲ್‌ ಮಿಬಿಲಿಟಿ ಸಂಸ್ಥೆ ಗುತ್ತಿಗೆ ಪಡೆದಿದ್ದು, ಆ ಸಂಸ್ಥೆಗೆ ಕಾರ್ಯಾದೇಶ ನೀಡಲಾಗಿದೆ. ಗುತ್ತಿಗೆ ಸಂಸ್ಥೆಯು ಹಂತಹಂತವಾಗಿ ಎಸಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಬಿಎಂಟಿಸಿಗೆ ಪೂರೈಸಲಿದ್ದು, ಮುಂದಿನ ಒಂದು ವರ್ಷದಲ್ಲಿ 320 ಬಸ್‌ಗಳನ್ನು ಬಿಎಂಟಿಸಿಗೆ ನೀಡಲಿದೆ. ಈ ಬಸ್‌ಗಳನ್ನು ಗುತ್ತಿಗೆ ಸಂಸ್ಥೆಯೇ ನಿರ್ವಹಣೆ ಮಾಡಲಿದ್ದು, ಅದಕ್ಕೆ ಬದಲಾಗಿ ಬಿಎಂಟಿಸಿ ಹಣ ನೀಡಲಿದೆ.ಈ ಬಸ್‌ಗಳನ್ನು ಹೊರವರ್ತುಲ ರಸ್ತೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೇವೆಗೆ ನೇಮಿಸಲು ಬಿಎಂಟಿಸಿ ಅಧಿಕಾರಿಗಳು ಈಗಾಗಲೇ ನಿರ್ಧರಿಸಿವೆ.

ಗುತ್ತಿಗೆ ಸಂಸ್ಥೆ ಚಾಲಕರನ್ನು ಮಾತ್ರ ನಿಯೋಜಿಸುವ ಮತ್ತು ಬಸ್‌ಗಳನ್ನು ಚಾರ್ಜ್ ಮಾಡುವುದನ್ನು ನಿರ್ವಹಿಸುತ್ತದೆ, ಆದರೆ ಕಂಡಕ್ಟರ್‌ಗಳು ಬಿಎಂಟಿಸಿ ಸಿಬ್ಬಂದಿ ಆಗಿರುತ್ತಾರೆ. ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ಗಳನ್ನು ತರಲು ಇಲಾಖೆ ಯೋಜಿಸುತ್ತಿದೆ. ಈ ಎಸಿ ಎಲೆಕ್ಟ್ರಿಕ್ ಬಸ್ಸುಗಳು ಸುಭಾಷ್ ನಗರ, ಕತ್ರಿಗುಪ್ಪೆ, ವೈಟ್‌ಫೀಲ್ಡ್ ಮತ್ತು ಎಚ್‌ಎಸ್‌ಆರ್ ಲೇಔಟ್‌ನಿಂದ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಲಾಗಿದೆ.

ಈ ವರ್ಷ ಬಿಎಂಟಿಸಿಯಯ ಫ್ಲೀಟ್‌ಗೆ ಒಟ್ಟು 1,400 ಎಲೆಕ್ಟ್ರಿಕ್ ಬಸ್‌ಗಳನ್ನು ಸೇರಿಸಲಾಗುವುದು ಎಂದು ಕರ್ನಾಟಕ ಸರ್ಕಾರ ಈ ಹಿಂದೆ ಘೋಷಿಸಿತ್ತು. ಬಿಎಂಟಿಸಿ ಪ್ರಸ್ತುತ ಬೆಂಗಳೂರು ರಸ್ತೆಗಳಲ್ಲಿ ಒಟ್ಟು 390 ಎಲೆಕ್ಟ್ರಿಕ್ ಬಸ್‌ಗಳನ್ನು ನಿರ್ವಹಿಸುತ್ತಿದೆ.