2 ಪಿಯು ಕಾಲೇಜಿಗೆ ಹೆಚ್ಚುವರಿ ಕೊಠಡಿ ಮಂಜೂರು: ಶಾಸಕ ದೇಶಪಾಂಡೆ

| Published : Apr 18 2025, 12:35 AM IST

2 ಪಿಯು ಕಾಲೇಜಿಗೆ ಹೆಚ್ಚುವರಿ ಕೊಠಡಿ ಮಂಜೂರು: ಶಾಸಕ ದೇಶಪಾಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ಈಗಿನ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸುವಲ್ಲಿ ಯಶಸ್ವಿಯಾದರೂ ಉತ್ತಮ ಚಾರಿತ್ರ್ಯ ನಿರ್ಮಾಣ ಮಾಡುವುದಾಗಲಿ,

ಹಳಿಯಾಳ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಸರ್ಕಾರದಿಂದ ಮಂಜೂರಾದ ₹1.25 ಕೋಟಿ ಅನುದಾನದಲ್ಲಿ 5 ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಾಸಕ ಆರ್.ವಿ. ದೇಶಪಾಂಡೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಈಗಿನ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸುವಲ್ಲಿ ಯಶಸ್ವಿಯಾದರೂ ಉತ್ತಮ ಚಾರಿತ್ರ್ಯ ನಿರ್ಮಾಣ ಮಾಡುವುದಾಗಲಿ, ಮಾನವೀಯ ಮೌಲ್ಯಗಳ ಪಾಲನೆ ಮಾಡುವಲ್ಲಿ ನಿಷ್ಕಾಳಜಿ ತೋರುತ್ತಿರುವುದು ಉತ್ತಮ ಬದುಕು, ಭವಿಷ್ಯ ನಿರ್ಮಾಣ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ ಎಂದರು.

ವಿದ್ಯಾರ್ಥಿಗಳು ಉತ್ತಮ ಚಾರಿತ್ರ್ಯ ಹಾಗೂ ಮಾನವೀಯ ಮೌಲ್ಯಗಳ ಪಾಲನೆಗೆ ಮೊದಲ ಆದ್ಯತೆ ನೀಡಬೇಕು ಎಂದರು.

ಶಿಸ್ತು ಸ್ವಚ್ಛತೆಗೆ ಆದ್ಯತೆ ಇರಲಿ:

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೊಠಡಿಗಳ ಕೊರತೆ ಎದುರಾಗಿದೆ ಎಂಬ ಅಂಶವು ನನಗೆ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಗಮನಕ್ಕೆ ಬಂದಿತು. ಶಾಸಕರ ಅಭಿವೃದ್ಧಿ ನಿಧಿಯಿಂದ ಎರಡೂ ಕೊಠಡಿಗಳ ನಿರ್ಮಾಣ ಮಾಡಿದ್ದು, ಅದರಲ್ಲಿ ಬಾಕಿ ಉಳಿದಿರುವ ಇನ್ನಿತರ ಕಾಮಗಾರಿಗಳು ಮಾಡಬೇಕಾಗಿದೆ. ಈಗ 1.25 ಕೋಟಿ ವೆಚ್ಚದಲ್ಲಿ 5 ಕೊಠಡಿಗಳ ನಿರ್ಮಾಣವಾಗಲಿದ್ದು, ಹೀಗೆ ಕಾಲೇಜಿಗೆ 7 ಹೆಚ್ಚುವರಿ ಕೊಠಡಿಗಳು ಸಿಗಲಿವೆ. 21ನೇ ಶತಮಾನವು ಸ್ಪರ್ಧಾತ್ಮಕ ಯುಗವಾಗಿದ್ದು, ಇಲ್ಲಿ ಪ್ರತಿಭಾವಂತರಿಗೆ ಮತ್ತು ಕೌಶಲ್ಯವಂತರಿಗೆ ಮಾತ್ರ ಉತ್ತಮ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಅದಕ್ಕಾಗಿ ವಿದ್ಯಾರ್ಥಿಗಳು ಹಾಗೂ ಯುವ ಸಮೂಹವು ಈ ಸ್ಪರ್ಧಾತ್ಮಕ ಯುಗದಲ್ಲಿ ಜಯಶಾಲಿಯಾಗಲು ಸಿದ್ಧರಾಗಬೇಕು. ಈ ದಿಸೆಯಲ್ಲಿ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಗುಣಮಟ್ಟದ ಶಿಕ್ಷಣ ನೀಡಲು ಆದ್ಯತೆ ನೀಡುವುದರ ಜೊತೆಯಲ್ಲಿ ಕಾಲೇಜಿನಲ್ಲಿ ಶಿಸ್ತು ಸ್ವಚ್ಛತೆ ಕಾಪಾಡಲು ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ಕಾಲೇಜು ಪ್ರಭಾರ ಪ್ರಾಚಾರ್ಯ ಸತೀಶ್ ಮಾನೆ, ಶಿವಾಜಿ ವಿದ್ಯಾಲಯದ ಪ್ರಾಚಾರ್ಯ ಅಮಿನ ಮಮದಾಪುರ, ಜಿಪಂ ಎಇಇ ಆರ್.ಸತೀಶ್, ಕಾಲೇಜು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಸತ್ಯಜಿತ ಗಿರಿ, ಕೆಪಿಸಿಸಿ ಸದಸ್ಯ ಸುಭಾಶ್ ಕೊರ್ವೆಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಪುರಸಭಾ ಸದಸ್ಯೆ ಸುವರ್ಣ ಮಾದರ, ಪುರಸಭಾ ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ ಇದ್ದರು.

ಮುರ್ಕವಾಡದಲ್ಲೂ ಶಿಲಾನ್ಯಾಸ:

ತಾಲೂಕಿನ ಮುರ್ಕವಾಡ ಗ್ರಾಮದಲ್ಲಿನ ಸರ್ಕಾರಿ ಪದವಿ ಕಾಲೇಜಿಗೆ ರಾಜ್ಯ ಸರ್ಕಾರದಿಂದ ಮಂಜೂರಾದ ₹1 ಕೋಟಿ ಅನುದಾನದಲ್ಲಿ 4 ಕೊಠಡಿಗಳ ನಿರ್ಮಾಣಕ್ಕೆ ಶಾಸಕರು ಶಿಲಾನ್ಯಾಸ ನೆರವೇರಿಸಿದರು. ಕಾಲೇಜು ಪ್ರಾಚಾರ್ಯರು ಸೇರಿದಂತೆ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.