ಜನಸ್ಪಂದನ ಕಾರ್ಯಕ್ರಮದ ಮೂಲಕ ಯೋಜನೆಗಳ ಸಮರ್ಪಕ ಜಾರಿ

| Published : Mar 07 2024, 01:46 AM IST

ಸಾರಾಂಶ

ರಾಜ್ಯ ಸರ್ಕಾರದಿಂದ ಜಾರಿ ಗೊಳಿಸಲಾಗಿರುವ ಯೋಜನೆಗಳನ್ನು ಜನಸ್ಪಂದನ ಕಾರ್ಯಕ್ರಮದ ಮೂಲಕ ಸಮರ್ಪಕವಾಗಿ ನೀಡಲಾಗುತ್ತಿದೆ ಎಂದು ಶಾಸಕ ಕೆ ಎಸ್ ಆನಂದ್ ಹೇಳಿದರು.

ಕನ್ನಡಪ್ರಭ ವಾರ್ತೆ, ಕಡೂರು

ರಾಜ್ಯ ಸರ್ಕಾರದಿಂದ ಜಾರಿ ಗೊಳಿಸಲಾಗಿರುವ ಯೋಜನೆಗಳನ್ನು ಜನಸ್ಪಂದನ ಕಾರ್ಯಕ್ರಮದ ಮೂಲಕ ಸಮರ್ಪಕವಾಗಿ ನೀಡಲಾಗುತ್ತಿದೆ ಎಂದು ಶಾಸಕ ಕೆ ಎಸ್ ಆನಂದ್ ಹೇಳಿದರು.ಕಡೂರು ತಾಲೂಕಿನ ಯಗಟಿ ಹೋಬಳಿ ಕೇಂದ್ರದಲ್ಲಿ 11 ಗ್ರಾಮ ಪಂಚಾಯಿತಿಗೆ ಒಳಪಡುವ ಯಗಟಿ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಬಂದಿದ್ದು ಬೇರೆ ಸಮಸ್ಯೆಗಳನ್ನು ಕೂಡ ಸ್ಥಳದಲ್ಲೇ ಪರಿ ಪರಿಹರಿಸುವ ಪ್ರಯತ್ನ ಮಾಡಲಾಗುವುದು. ಕಂದಾಯ ಇಲಾಖೆ, ಅಂಗನವಾಡಿ ಆಶಾ ಕಾರ್ಯಕರ್ತರು, ಸಹಾಯಕಿಯರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ಶ್ರಮದಿಂದ ಈ ಕಾರ್ಯಕ್ರಮ ಯಶಸ್ವಿಯಾಗುತ್ತಿ.ಸರ್ಕಾರದ ಸೌಲಭ್ಯ ವಂಚಿತರು ಮತ್ತು ರೇಷನ್ ಕಾರ್ಡ್ ಸಮಸ್ಯೆಗಳು ಹೆಚ್ಚಾಗಿ ಬರುತ್ತಿದ್ದು ಇದನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ನಮ್ಮ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡ ಕುಟುಂಬಗಳು ಆರ್ಥಿಕವಾಗಿ ಪುನಶ್ಚೇತನ ಕೊಳ್ಳಲು ದಿಟ್ಟಹೆಜ್ಜೆ ಇಟ್ಟರೆ ನುಡಿದಂತೆ ನಡೆದು ರಾಜ್ಯದ ಅಭಿವೃದ್ಧಿಗೂ ಕೂಡ ಯಾವುದೇ ಕೊರತೆ ಆಗದಂತೆ ಅನುದಾನ ನೀಡುತ್ತಿದೆ ಎಂದರು. ಜನರು ಹಿಂದಿನ ಪಕ್ಷವನ್ನು ತಿರಸ್ಕರಿಸಿ ರಾಜ್ಯದಲ್ಲಿ 135 ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಶಕ್ತಿ ನೀಡಿದ್ದೀರಿ. ಅಧಿಕಾರಕ್ಕೆ ಬಂದ 15 ದಿನದಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಶಕ್ತಿ ಕಾರ್ಯಕ್ರಮ ಜಾರಿಗೊಳಿಸಲಾಯಿತು. ಗೃಹ ಜ್ಯೋತಿ, ಗೃಹಲಕ್ಷ್ಮಿ, ಯುವ ನಿಧಿ ಮೂಲಕ ಬಡವರಿಗೆ ಸಹಾಯ ಮಾಡುತ್ತಿದ್ದು ಇದನ್ನು ಸಹಿಸದೆ ವಿರೋಧ ಪಕ್ಷಗಳ ಟೀಕೆ ಮಾಡುತ್ತಿವೆ ಅಲ್ಲದೆ ರಾಜ್ಯ ದಿವಾಳಿ ಯಾಗುತ್ತದೆ ಎಂಬ ಅಪಪ್ರಚಾರಕ್ಕೆ ಫಲಾನುಭವಿಗಳಾದ ನೀವು ಅವಕಾಶ ಕೊಡಬಾರದು ಎಂದರು. ರಾಜ ಸರ್ಕಾರ ಈ ಬಾರಿ 3,71, 373 ಕೋಟಿ ಬಜೆಟ್ ಮಂಡನೆ ಮಾಡಿದರು. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದು ವಿರೋಧ ಪಕ್ಷದವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು