ಸಾರಾಂಶ
ನಮ್ಮ ಭಾಗದ ಕೆರೆಗಳಿಗೆ ನೀರು ತುಂಬಿಸದೇ ಇರುವುದು ಮಲತಾಯಿ ಧೋರಣೆಯಾಗಿದೆ
ಯಲಬುರ್ಗಾ: ತಾಲೂಕಿನ ಹಿರೇವಂಕಲಕುಂಟಾ-ಗುನ್ನಾಳ ಹತ್ತಿರ ಕೆಬಿಜೆಎನ್‌ಎಲ್ ಇಲಾಖೆಯಿಂದ ಸ್ಥಾಪಿಸಲಾದ ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-೩ರ ಕೊಪ್ಪಳ-ಕನಕಗಿರಿ ಬ್ರ್ಯಾಂಚ್‌ನ ಮುಖ್ಯ ಸ್ಥಾವರ ಘಟಕದಿಂದ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸುತ್ತಿಲ್ಲ ಎಂದು ಆಗ್ರಹಿಸಿ ರೈತರು ದಿಢೀರ್ ಪ್ರತಿಭಟನೆ ನಡೆಸಿದರು.
ಕೃಷ್ಣಾ ಬಿಸ್ಕೀಂ ನೀರಾವರಿ ಭಾಗವಾಗಿರುವ ಕೆರೆ ತುಂಬಿಸುವ ಯೋಜನೆಯಡಿ ಕೊಪ್ಪಳ-ಕನಕಗಿರಿ ಬ್ರ್ಯಾಂಚಿನ ಮುಖ್ಯ ಸ್ಥಾವರದಿಂದ ಕೊಪ್ಪಳ ಬ್ರ್ಯಾಂಚ್‌ನ ಗುನ್ನಾಳ, ಬೇವೂರು, ಕುಕನೂರು ತಾಲೂಜಿನ ನೆಲಜೇರಿ, ವಟಪರ್ವಿ, ಕುದರಿಮೋತಿ, ಕೊಪ್ಪಳ ತಾಲೂಜಿನ ಇರಕಲ್‌ಗಡ, ಬುಡಶೆಟ್ನಾಳ, ಹನುಮನಟ್ಟಿ, ಲೇಬಗೇರಿ, ಕಲಕೇರಿ, ಅಬ್ಬಿಗೇರಿ ಸೇರಿ ೧೧ ಕೆರೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಕೇವಲ ಕನಕಗಿರಿ ಬ್ರ್ಯಾಂಚ್‌ನ ಕನಕಗಿರಿ, ಕಲಭಾವಿ-ಚಿಕ್ಕವಂಕಲಕುಂಟಾ, ಗಾಣದಾಳ, ಚಿಕ್ಕಮನ್ನಾಪುರ ಸೇರಿ ಕನಕಗಿರಿ ಭಾಗದ ಕೆರೆಗಳಿಗೆ ಸಮರ್ಪಕವಾಗಿ ಹರಿಸಲಾಗುತ್ತಿದೆ. ಕುಕನೂರು, ಕೊಪ್ಪಳ ತಾಲೂಕಿನ ಕೆರೆಗಳಿಗೆ ನೀರು ಹರಿಯುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ, ಪಂಪ್‌ಗೆ ನೀರು ಸಾಲುತ್ತಿಲ್ಲ ಎನ್ನುವ ಸಮಸ್ಯೆಯ ಸಬೂಬು ಹೇಳುತ್ತಾರೆ. ತಮಗೆ ತಿಳಿದಾಗ ಮಾತ್ರ ನೀರು ಬಿಡಲಾಗುತ್ತಿದೆ.ಇಲ್ಲವಾದರೆ ವಾರಗಟ್ಟಲೆ ನೀರು ಬರುವುದಿಲ್ಲ. ಇದು ನಮ್ಮ ಭಾಗದ ಕೆರೆಗಳಿಗೆ ನೀರು ತುಂಬಿಸದೇ ಇರುವುದು ಮಲತಾಯಿ ಧೋರಣೆಯಾಗಿದೆ. ಕೆರೆಗಳು ತುಂಬುವುದರಿಂದ ಜನ ಜಾನುವಾರುಗಳಿಗೆ ಅನುಕೂಲವಾಗುವುದಲ್ಲದೆ, ರೈತರ ಪಂಪ್‌ಸೆಟ್‌ಗಳ ಅಂತರ್ಜಲ ಮಟ್ಟ ಸುಧಾರಿಸಲಿದೆ. ನಮ್ಮ ಕ್ಷೇತ್ರಕ್ಕೆ ನೀರಾವರಿ ಭಾಗವಾಗಿರುವ ಕೆರೆ ತುಂಬಿಸುವ ಯೋಜನೆಯಡಿ ಕೆರೆಗಳಿಗೆ ಸಮರ್ಪಕ ನೀರು ಹರಿಯುತ್ತಿಲ್ಲ. ಯೋಜನೆಯ ಸಮರ್ಪಕ ಅನುಷ್ಠಾನವಾಗುತ್ತಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಮುತುವರ್ಜಿ ವಹಿಸುತ್ತಿಲ್ಲ. ಈ ಬಗ್ಗೆ ಕೇಳಿದಾಗಷ್ಟೇ ನೀರು ಬಿಡುವ ಆಶ್ವಾಸನೆ ನೀಡುತ್ತಾರೆ. ಇನ್ನು ಮಂದಾದರೂ ಕೆರೆಗಳಿಗೆ ಸಮರ್ಪಕ ನೀರು ಹರಿಸಬೇಕು. ಇಲ್ಲವಾದರೆ ರೈತರೆಲ್ಲ ಸೇರಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ನೆಲಜೇರಿ, ವಟಪರ್ವಿ, ಕುದರಿಮೋತಿ ರೈತರಾದ ಹನುಮಂತಪ್ಪ ಬಡಿಗೇರ, ವಾಸಪ್ಪ ಗೌಡ್ರ, ಹಿರೇಶಿವಪ್ಪ ಕುದ್ರಕೊಟಗಿ, ವಿರೂಪಾಕ್ಷಗೌಡ ಪಾಟೀಲ್, ಭೀಮಣ್ಣ ಬುಡಶೆಟ್ನಾಳ, ಶಂಕ್ರಪ್ಪ ಟಿಕಲ್, ನಿಂಗಪ್ಪ ಕೊಳಜಿ, ಮರೆಗೌಡ ಆರ್. ಗೌಡ್ರ, ಬಸವರಾಜ ಮಾಲಿಪಾಟೀಲ್, ದ್ಯಾಮನಗೌಡ ಮಾಲಿಪಾಟೀಲ್, ಶೇಖಪ್ಪ ಡೊಳ್ಳಿನ, ವಿರೂಪಾಕ್ಷ ಚುಕಣಿ, ಮುತ್ತುಜಾಸಾಬ್ ನವಲಿ, ನಿಂಗಪ್ಪ ಗೌಡ್ರ, ರಾಜಶೇಖರ ಹನುಮನಾಳ ಸೇರಿದಂತೆ ಮತ್ತಿತರರು ಆಗ್ರಹಿಸಿದರು.;Resize=(128,128))
;Resize=(128,128))
;Resize=(128,128))