ಸಾರಾಂಶ
ದೇವಸ್ಥಾನದ ಆವರಣದಿಂದ ಹೊರಟ ವಾದ್ಯ ಹಾಗೂ ಕಲಾ ಮೇಳದೊಂದಿಗೆ ದೇವಿ ವಿಗ್ರಹ ಹಾಗೂ ಗ್ರಂಥಗಳ ಮೆರವಣಿಗೆಯನ್ನು ಬಸಂತಿ ಹಪ್ಪಳದ ಉದ್ಘಾಟಿಸಿದರು. ಹೆಬ್ಬಳ್ಳಿ ಅಗಸಿ ರಸ್ತೆಯಲ್ಲಿರುವ ಜ್ಯೋತಿಬಾ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ವಿವಿಧ ಬಡಾವಣೆಯ ಮುಖ್ಯ ರಸ್ತೆ ಮೂಲಕ ಸಂಚರಿಸಿ ಮರಳಿ ಬನಶಂಕರಿ ದೇವಸ್ಥಾನ ತಲುಪಿತು
ಧಾರವಾಡ: ಬನದ ಹುಣ್ಣಿಮೆ ನಿಮಿತ್ತ ಗುರುವಾರ ಬನಶಂಕರಿ ದೇವಿ ಜಾತ್ರಾಮಹೋತ್ಸವ ಪಲ್ಲಕ್ಕಿ ಉತ್ಸವವು ಶಹರದ ಕಾಮನಕಟ್ಟಿ ಚರಂತಿಮಠ ಗಾರ್ಡನದಲ್ಲಿರುವ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಜರುಗಿತು.
ಬೆಳಗ್ಗೆ ಕಾಕಡಾರತಿ, ಅಭಿಷೇಕ, ಕುಂಕುಮಾರ್ಚನೆ, ಹೋಮ, ಹವನ ದೇವಿಗೆ ವಿಶೇಷ ಪೂಜೆ ಹಾಗೂ ಮಂತ್ರ ಪಠಣ ನಡೆಯಿತು. ಪಲ್ಲಕ್ಕಿ ಉತ್ಸವದ ಪೂಜೆಯನ್ನು ವನಸ್ಪತಿ ಆಯುರ್ವೇದ ತಜ್ಞ ರಮೇಶ ಜಾನಕ್ಕಿ ನೆರವೇರಿಸಿದರು. ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮಕ್ಕೆ ಸುಧಾ ಕಬ್ಬೂರ ಹಾಗೂ ಕುಂಭಮೇಳ ಪಂಜಿನ ಪ್ರದಕ್ಷಿಣಿಗೆ ವಾಣಿಶ್ರೀ ಮೋಟೆಕರ ಚಾಲನೆ ನೀಡಿದರು.ದೇವಸ್ಥಾನದ ಆವರಣದಿಂದ ಹೊರಟ ವಾದ್ಯ ಹಾಗೂ ಕಲಾ ಮೇಳದೊಂದಿಗೆ ದೇವಿ ವಿಗ್ರಹ ಹಾಗೂ ಗ್ರಂಥಗಳ ಮೆರವಣಿಗೆಯನ್ನು ಬಸಂತಿ ಹಪ್ಪಳದ ಉದ್ಘಾಟಿಸಿದರು. ಹೆಬ್ಬಳ್ಳಿ ಅಗಸಿ ರಸ್ತೆಯಲ್ಲಿರುವ ಜ್ಯೋತಿಬಾ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ವಿವಿಧ ಬಡಾವಣೆಯ ಮುಖ್ಯ ರಸ್ತೆ ಮೂಲಕ ಸಂಚರಿಸಿ ಮರಳಿ ಬನಶಂಕರಿ ದೇವಸ್ಥಾನ ತಲುಪಿತು.ನಂತರ ಲತಾ ಮಂಟಾ ಹಾಗೂ ಸುಮನ್ ಭೂಸನೂರಮಠ ಸುಮಂಗಲೆಯರಿಂದ ವಚನ ಪಠಣ ಪೂಜೆ ಜರುಗಿತು.
ಜಾತ್ರಾಮಹೋತ್ಸವ ಕಮೀಟಿ ಅಧ್ಯಕ್ಷ ಶಿವಾನಂದ ಲೋಲೆನವರ ಮಹಾಪ್ರಸಾದಕ್ಕೆ ಚಾಲನೆ ನೀಡಿದರು.ದೇವಸ್ಥಾನ ಆಡಳಿತ ಮಂಡಳಿಯ ಅಶೋಕ ದೇವಾಂಗ, ವಿಮಲಾ ಲೌಲಿ, ಗೌರಮ್ಮ ಬಲೋಗಿ, ಶಂಕರ ಜೀರಗೋಡ, ಗಣಪತಿ ಟೇಟಂಬಿ, ನಾಗರತ್ನಾ ಸುಲಾಕೆ, ಮಲ್ಲವ್ವ ಕಾಮಕರ, ಮಹಾದೇವಿ ಬಸರಿ, ಲತಾ ದೇವಾಂಗ, ಮಂಜುನಾಥ, ಸುಮಾ ಲೋಲೆನವರ, ಅರವಿಂದ ದೇವಾಂಗ ಇದ್ದರು.