ಅದ್ಧೂರಿ ರೇಣುಕಾ ಎಲ್ಲಮ್ಮದೇವಿ ಜಾತ್ರೆ

| Published : Feb 15 2025, 12:31 AM IST

ಅದ್ಧೂರಿ ರೇಣುಕಾ ಎಲ್ಲಮ್ಮದೇವಿ ಜಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಗಡಿ: ತಾಲೂಕಿನ ಸೋಲೂರು ರಾಷ್ಟ್ರೀಯ ಹೆದ್ದಾರಿ ಬಳಿ ಆರ್ಯ ಈಡಿಗರ ಮಹಾಸಂಸ್ಥಾನ ಮಠದಲ್ಲಿ ರೇಣುಕಾ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಹಾಗೂ ವಿಖ್ಯಾತಾನಂದ ಸ್ವಾಮೀಜಿ ಪೀಠಾರೋಹಣ ತೃತೀಯ ವಾರ್ಷಿಕೋತ್ಸವ ಹಾಗೂ ಆರೋಗ್ಯ ಶಿಬಿರ ನಡೆಯಿತು.

ಮಾಗಡಿ: ತಾಲೂಕಿನ ಸೋಲೂರು ರಾಷ್ಟ್ರೀಯ ಹೆದ್ದಾರಿ ಬಳಿ ಆರ್ಯ ಈಡಿಗರ ಮಹಾಸಂಸ್ಥಾನ ಮಠದಲ್ಲಿ ರೇಣುಕಾ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಹಾಗೂ ವಿಖ್ಯಾತಾನಂದ ಸ್ವಾಮೀಜಿ ಪೀಠಾರೋಹಣ ತೃತೀಯ ವಾರ್ಷಿಕೋತ್ಸವ ಹಾಗೂ ಆರೋಗ್ಯ ಶಿಬಿರ ನಡೆಯಿತು.

ಮಠದಲ್ಲಿ ಗಂಗಾಪೂಜೆ, ದೇವಿ ಆರಾಧನೆ, ಗುರುಪೂಜೆ, ಪಾದಪೂಜೆ, ಭಕ್ತರಿಗೆ ಆಶೀರ್ವಚನ ನೀಡಲಾಯಿತು. ವಿಶೇಷವಾಗಿ ಸವದತ್ತಿ ರೇಣುಕಾ ಯಲ್ಲಮ್ಮ ದೇವಾಲಯದಿಂದ ಬಂದಿದ್ದ ಜೋಗತಿ ಅಮ್ಮನವರಿಂದ ಉತ್ಸವ ಮೂರ್ತಿಗಳ ವಿಶೇಷ ಪೂಜೆ ನೆರವೇರಿಸಲಾಯಿತು.

ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಪ್ತಗಿರಿ ವೈದ್ಯಕೀಯ ಮಹಾ ವಿಶ್ವವಿದ್ಯಾಲಯ ಮತ್ತು ಆಸ್ಪತ್ರೆ ಹೆಸರುಘಟ್ಟ, ಸ್ಪರ್ಶ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ವೈದೇಹಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ವಾಸನ್ ಐ ಕೇರ್, ಕೆಎಲ್ಇ ಡೆಂಟಲ್ ಕಾಲೇಜು, ಮುತ್ತೂಟ್ ಸ್ನೇಹಾಶ್ರಯ ಹಾಗೂ ಕಾವೇರಿ ರಕ್ತ ನಿಧಿ ಸಹಯೋಗದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಜಾತ್ರಾ ಮಹೋತ್ಸವದಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಅಧ್ಯಕ್ಷ ಎಂ.ತಿಮ್ಮೇಗೌಡ, ಚಲನಚಿತ್ರ ನಿರ್ಮಾಪಕರಾದ ಚಿನ್ನೇಗೌಡ, ರೇಣುಕಾ ಯಲ್ಲಮ್ಮ ದೇವಿ ಟ್ರಸ್ಟ್ ಅಧ್ಯಕ್ಷ ಜೆ.ಪಿ.ಸುಧಾಕರ್, ಆರ್ಯ ಈಡಿಗ ಮಹಾಸಂಸ್ಥಾನ ಮಠ ಕಾರ್ಯದರ್ಶಿಗಳು ಧರ್ಮವಿಜೇತ್, ಖಜಾಂಚಿ ಹರೀಶ್, ಮೈಸೂರು ಜಿಲ್ಲಾ ಸಂಘದ ಶ್ರೀಕಾಂತ್, ನಿರ್ದೇಶಕರಾದ ಸಂಪತ್, ತಾಲೂಕು ಅಧ್ಯಕ್ಷ ಗೋಪಾಲ್, ಉಪಾಧ್ಯಕ್ಷ ಕುದೂರು ವೆಂಕಟೇಶ್, ರಾಜ್ಯ ನಿರ್ದೇಶಕ ದುಶ್ಯಂತ್, ಪ್ರಕಾಶ್, ಟಿ ವಾಸನ್ ಮ್ಯಾನೇಜರ್ ಸಂತೋಷ್, ಪ್ರಧಾನ ಅರ್ಚಕ ಗೋಪಿ ಭಟ್, ಶಶಾಂಕ್ ಇತರರು ಭಾಗವಹಿಸಿದ್ದರು.

(ಫೋಟೋ ಕ್ಯಾಫ್ಷನ್‌)

ಮಾಗಡಿ ತಾಲೂಕಿನ ಆರ್ಯ ಈಡಿಗರ ಮಹಾಸಂಸ್ಥಾನ ಮಠದಲ್ಲಿ ರೇಣುಕಾ ಯಲ್ಲಮ್ ದೇವಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿಸಲಾಯಿತು.