ಸಾರಾಂಶ
ರಾಣಿಬೆನ್ನೂರು: ನಗರದ ಅಶೋಕ ಸರ್ಕಲ್ ಬಳಿ ವಿರಾಟ್ ಹಿಂದೂ ಮಹಾಸಭಾ ವತಿಯಿಂದ ಮೂರನೇ ಬಾರಿಗೆ ಪ್ರತಿಷ್ಠಾಪಿಸಲಾಗಿದ್ದ ಗಣೇಶನ ಮೂರ್ತಿ ಶೋಭಾಯಾತ್ರೆ ಭಾನುವಾರ ನಗರದಲ್ಲಿ ಅದ್ಧೂರಿಯಾಗಿ ಜರುಗಿತು. ಮಾಜಿ ಶಾಸಕ ಅರುಣಕುಮಾರ ಪೂಜಾರ ಮಧ್ಯಾಹ್ನ ೧ಕ್ಕೆ ಶೋಭಾಯಾತ್ರೆಗೆ ಚಾಲನೆ ನೀಡಿ ಮೂರ್ತಿಯಿರಿಸಲಾಗಿದ್ದ ಟ್ರ್ಯಾಕ್ಟರ್ ಚಲಾಯಿಸಿದರು. ಇಲ್ಲಿಂದ ಹೊರಟ ಶೋಭಾಯಾತ್ರೆಯು ಪೋಸ್ಟ್ ಸರ್ಕಲ್, ರೈಲ್ವೆ ಸ್ಟೇಷನ್ ರಸ್ತೆ, ಸಂಗಮ್ ಸರ್ಕಲ್, ರಂಗನಾಥ ನಗರ, ಸುಣಗಾರ ಓಣಿ, ಕೋಟ್ರೇಶ್ವರ ನಗರ, ಕುಂಬಾರ ಓಣಿ, ದೊಡ್ಡಪೇಟೆ, ಚಕ್ಕಿ ಮಿಕ್ಕಿ ಸರ್ಕಲ್, ಎಮ್.ಜಿ.ರಸ್ತೆ, ದುರ್ಗಾ ಸರ್ಕಲ್, ಕುರುಬಗೇರಿ ಕ್ರಾಸ್, ಹಲಗೇರಿ ಕ್ರಾಸ್, ಬಸ್ ನಿಲ್ದಾಣ, ವಿನಾಯಕ ನಗರ, ರಾಜರಾಜೇಶ್ವರಿ ನಗರ, ಹಳೆ ಪಿ.ಬಿ. ರಸ್ತೆಯ ಮೂಲಕ ಎನ್.ವಿ. ಹೋಟೆಲ್‌ವರೆಗೂ ಸಾಗಿಬಂದಿತು. ಅಲ್ಲಿಂದ ಮೂರ್ತಿಯನ್ನು ಹರಿಹರಕ್ಕೆ ತೆಗೆದುಕೊಂಡು ಹೋಗಿ ತುಂಗಾಭದ್ರ ನದಿಯಲ್ಲಿ ವಿಸರ್ಜಿಸಲಾಯಿತು.ಶೋಭಾಯಾತ್ರೆ ಮೆರವಣಿಗೆ ಸಾಗಿಬರುವ ದಾರಿಯುದ್ದಕ್ಕೂ ವಿವಿಧ ಸರ್ಕಲ್‌ಗಳಲ್ಲಿ ದಾನಿಗಳು ಮತ್ತು ವಿವಿಧ ಸಮಾಜಗಳ ವತಿಯಿಂದ ಸಾರ್ವಜನಿಕರಿಗೆ ಉಪಹಾರ, ಕುಡಿಯುವ ನೀರು ಹಾಗೂ ಬಾಳೆಹಣ್ಣು ವ್ಯವಸ್ಥೆ ಕಲ್ಪಿಸಲಾಗಿತ್ತು. ಶೋಭಾಯಾತ್ರೆಯಲ್ಲಿ ವಿವಿಧ ಬಗ್ಗೆಯ ಗೊಂಬೆಗಳು, ಸಮಾಳ, ಹಲಗೆ ಹಾಗೂ ಯುವಕ, ಯುವತಿಯರಿಗೆ ಪ್ರತ್ಯೇಕ ಡಿಜೆ ಸಂಗೀತ ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿದ್ದವು. ಸಾವಿರಾರು ಜನರು ಸಂಗೀತಕ್ಕೆ ತಕ್ಕಂತೆ ನೃತ್ಯ ಮಾಡಿ ಜನಮನ ಸೂರೆಗೊಂಡರು. ಇನ್ನೂ ಮೆರವಣಿಗೆಯಲ್ಲಿ ಶಿವನ ೧೮ಅಡಿಯ ಎತ್ತರದ ನೃತ್ಯ ಮಾಡುವ ಪ್ರತಿಮೆ ಎಲ್ಲರ ಕೇಂದ್ರ ಬಿಂದುವಾಗಿತ್ತು. ಜನರು ಮುಗಿಬಿದ್ದು ಸೆಲ್ಫೆ ತೆಗೆದುಕೊಳ್ಳುತ್ತಿರುವುದು ಕಂಡು ಬಂದಿತ್ತು.ವಿರಾಟ್ ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿ ಅಧ್ಯಕ್ಷ ನಾಗರಾಜ ಪವಾರ, ಜಿಪಂ ಮಾಜಿ ಸದಸ್ಯೆ ಮಂಗಳಗೌರಿ ಪೂಜಾರ, ಬಸವರಾಜ ಹುಲ್ಲತ್ತಿ, ರಮೇಶ ಗುತ್ತಲ, ಪರಮೇಶ ಗೂಳಣ್ಣನವರ, ದೀಪಕ್ ಹರಪನಹಳ್ಳಿ, ನಾಗರಾಜ ಸಾಲಗೇರಿ, ನಾಗರಾಜ ಬಣಕಾರ, ಅಮೋಘ ಬಾದಾಮಿ, ಅನಿಲಕುಮಾರ ಸಿದ್ದಾಳಿ, ಅನಂತ ಇಟಗಿ, ಪ್ರಕಾಶ ಹೊರಕೇರಿ, ಜಗದೀಶ ಅಂಕಲಕೋಟಿ, ಶಿವಕುಮಾರ ಅರ್ಕನಾಳ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ, ರಾಯಣ್ಣ ಮಾಕನೂರು, ನವೀನ ಅಡ್ಡಿ, ಲಿಂಗರಾಜ ಬೂದನೂರ, ಮಂಜುನಾಥ ಕಬ್ಬಣದ, ಪೂರ್ಣಿಮಾ ಕುರುವತ್ತಿ, ಚೆನ್ನಮ್ಮ ಗುರಪದೇವರಮಠ, ಮಮತಾ ಜಾಧವ, ವಸಂತ ಪೂಜಾರ, ಅನ್ನಪರ್ಣ ಉನಕಿ, ವಸಂತ ಹುಲ್ಲತ್ತಿ, ಮೃತ್ಯುಂಜಯ ಪಾಟೀಲ, ಜಗದೀಶ ಎಲಿಗಾರ ಸೇರಿದಂತೆ ಸಹಸ್ರಾರು ಜನರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಒದಗಿಸಿದರು.